ಗುಪ್ತಚರರಿಂದ ನಿಗಾ ಮತ್ತು ಸುರಕ್ಷಾವ್ಯವಸ್ಥೆಗಳು ಎಚ್ಚರ !
* ಮದರಸಾ ಮತ್ತು ಮಸೀದಿಗಳು 4 ಪಟ್ಟು ಹೆಚ್ಚಾಗುವವರೆಗೂ ಪೊಲೀಸರು, ಸುರಕ್ಷಾವ್ಯವಸ್ಥೆಗಳು ಮತ್ತು ಶಾಸಕಾಂಗವು ನಿದ್ರಿಸುತ್ತಿತ್ತೇ? ಈಗಲೂ ಅಂತಹವರ ಮೇಲೆ ಏಕೆ ಕಾರ್ಯಾಚರಣೆ ಮಾಡುತ್ತಿಲ್ಲ ? – ಸಂಪಾದಕರು * ಗಡಿಯಲ್ಲಿ ದೇವಸ್ಥಾನಗಳ ನಿರ್ಮಾಣ ಏಕೆ ಆಗುತ್ತಿಲ್ಲ? ಹಾಗೇನಾದರೂ ಆದರೆ, ಅವರ ಮೇಲೆ ಗಮನವೇಕೆ ಇಡಬೇಕಾಗುವುದಿಲ್ಲ ?, ಈ ವಿಷಯವಾಗಿ ಜಾತ್ಯತೀತರು ಮತ್ತು ಪ್ರಗತಿ (ಅಧೋಗತಿ)ಪರರು ಹೇಳುವರೇ? – ಸಂಪಾದಕರು |
ನವ ದೆಹಲಿ – ಗುಪ್ತಚರ ವ್ಯವಸ್ಥೆಗಳು ನೀಡಿರುವ ಗೌಪ್ಯ ಮಾಹಿತಿಗನುಸಾರ ಭಾರತ ಮತ್ತು ನೇಪಾಳ ಗಡಿಯಲ್ಲಿ ಕಳೆದ 20 ವರ್ಷಗಳಲ್ಲಿ ಮಸೀದಿ ಮತ್ತು ಮದರಸಾದ ಸಂಖ್ಯೆಯಲ್ಲಿ 4 ಪಟ್ಟು ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಗುಪ್ತಚರ ವ್ಯವಸ್ಥೆಗಳು ಮತ್ತು ಪೊಲೀಸರು ಎಚ್ಚರವಹಿಸಿದ್ದು ಈ ಮಸೀದಿಗಳು ಹಾಗೂ ಮದರಾಸಗಳ ಮೇಲೆ ನಿಗಾ ಇಡಲಾಗಿದೆ. ಇಲ್ಲಿಂದ ಯಾವುದೇ ರೀತಿಯ ದೇಶವಿಘಾತಕ ಕಾರ್ಯಾಚರಣೆಗಳು ಆಗದಂತೆ ಎಚ್ಚರ ವಹಿಸಲಾಗಿದೆ. ಜೊತೆಗೆ ಮಸೀದಿ ಮತ್ತು ಮದರಸಾಗಳ ವಿಚಾರಣೆ ನಡೆಸಲಾಗುತ್ತಿದೆ.
(ಸೌಜನ್ಯ: Capital TV Uttar Pradesh)
1. ಗಡಿಯಲ್ಲಿರುವ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಒಟ್ಟು 596 ಮದರಸಾಗಳಿವೆ. ಅವುಗಳ ಪೈಕಿ 452 ನೋಂದಣಿಯಾಗಿದೆ ಹಾಗೂ ಉಳಿದ 145 ಮದರಸಾಗಳ ನೋಂದಣಿಯಾಗಿಲ್ಲ. ಈಗ ಗುಪ್ತಚರ ವ್ಯವಸ್ಥೆಗಳು ನೋಂದಣಿಯಾಗದೆ ಇರುವ ಮದರಸಾಗಳು ಯಾವುದು ಹಾಗೂ ಅದನ್ನು ಹೇಗೆ ನಡೆಸಲಾಗುತ್ತಿದೆ? ಅವುಗಳಿಗೆ ಯಾರು ಹಣ ಪೂರೈಕೆ ಮಾಡುತ್ತಿದ್ದಾರೆ? ಇತ್ಯಾದಿಗಳ ವಿಚಾರಣೆ ಮಾಡುತ್ತಿವೆ. ಈ ಮದರಸಾಗಳಿಗೆ ದುಬೈ ಮತ್ತು ಕೊಲ್ಲಿ ದೇಶಗಳಿಂದ ಹಣ ಪೂರೈಸುತ್ತಿರುವ ಅನುಮಾನವನ್ನು ವ್ಯಕ್ತ ಪಡಿಸಲಾಗುತ್ತಿದೆ. 1990 ನೇ ಇಸವಿಯ ವರೆಗೂ ಇಲ್ಲಿ ಕೇವಲ 16 ಮಾನ್ಯತೆ ಪಡೆದಿರುವ ಮದರಸಾಗಳಿದ್ದವು. 2000 ನೇ ಇಸವಿಯಲ್ಲಿ ಅದರ ಸಂಖ್ಯೆ 147 ಆಯಿತು. ಅದರಲ್ಲೂ ಕೇವಲ 45 ಮದರಸಾಗಳಿಗಷ್ಟೇ ಮಾನ್ಯತೆ ಸಿಕ್ಕಿದೆ.
2. ಜಿಲ್ಲೆಯ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ತನ್ಮಯ ಕುಮರ ಇವರು ಮಾತನಾಡುತ್ತಾ, ‘ಮದರಸಾಗಳನ್ನು ಯಾರೂ ತೆರೆಯಬಹುದು. ಸರಕಾರದಿಂದ ಮಾನ್ಯತೆ ಪಡೆದ ಮದರಸಾಗಳಿಗೆ ಅನುದಾನ ನೀಡಲಾಗುತ್ತದೆ, ಎಂದರು.
3. ಸಶಸ್ತ್ರ ಸುರಕ್ಷಾ ದಳದ 43 ವಾಹಿನಿಯ ಉಪ ಕಮಾಂಡೆಂಟ ಮನೋಜ ಕುಮಾರರವರು ಮಾತನಾಡುತ್ತಾ, ಯಾವ ಮದರಸಾಗಳ ನೋಂದಣಿಯಾಗಿಲ್ಲವೋ ಅವರ ಮೇಲೆ ನಿಗಾ ಇಡಲಾಗುತ್ತಿದ್ದು ಅವರ ಮಾಹಿತಿಯನ್ನು ಸರಕಾರಕ್ಕೆ ನೀಡಲಾಗುತ್ತಿದೆ, ಎಂದರು.
4. ನೇಪಾಳದ ಗಡಿಯ ಜಿಲ್ಲೆಗಳಲ್ಲಿ ಮುಸಲ್ಮಾನರ ಜನಸಂಖ್ಯೆ ಎರಡುವರೆ ಪಟ್ಟಿನಿಂದ ಹೆಚ್ಚಳವಾಗಿದ್ದು ಕೇವಲ ಎರಡೇ ವರ್ಷಗಳಲ್ಲಿ 400 ಮಸೀದಿಗಳನ್ನು ಮತ್ತು ಮದರಸಾಗಳನ್ನು ಕಟ್ಟಲಾಗಿದೆ. ಸುರಕ್ಷಾ ವಿಷಯದ ತಜ್ಞರ ಅಭಿಪ್ರಾಯದಂತೆ ಈ ಬದಲಾವಣೆ ಸಾಮಾನ್ಯವಾಗಿರದೆ ಅದರ ಮೇಲೆ ನಿಗಾ ಇಡಬೇಕಾಗಿದೆ.