|
ತ್ರಿಶೂರ್ (ಕೇರಳ) – ಇಲ್ಲಿನ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ವಿದ್ಯಾರ್ಥಿ ಸಂಘಟನೆಯಾದ ‘ಸ್ಟುಡೆಂಟ್ ಫೆಡರೆಶನ್ ಆಫ್ ಇಂಡಿಯಾ’ವು (ಎಸ್‌ಎಫ್‌ಐ) ಇಲ್ಲಿಯ ಶ್ರೀ ಕೇರಳ ವರ್ಮಾ ಮಹಾವಿದ್ಯಾಲಯದಲ್ಲಿ ಲೈಂಗಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಅಕ್ಷೆಪಾರ್ಹ ಮತ್ತು ಅಶ್ಲೀಲ ಫಲಕವನ್ನು ಹಾಕಿ ಭಾರತೀಯ ಪರಂಪರೆಯನ್ನು ಅವಮಾನಿಸಿರುವುದು ಬೆಳಕಿಗೆ ಬಂದಿದೆ. ಈ ಫಲಕಗಳಲ್ಲಿ ದೇಶಪ್ರೇಮಿ ಜನರನ್ನು ಅವಮಾನಿಸುವುದರ ಜೊತೆಗೆ ಜಿಹಾದಿಗಳನ್ನು ಗೌರವಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿ ಸರ್ವೋಚ್ಚ ನ್ಯಾಯಾಲಯದ ವಕೀಲೆ ಮೋನಿಕಾ ಅರೋರಾ ಇವರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಶ್ರೀ ಕೇರಳ ವರ್ಮಾ ಮಹಾವಿದ್ಯಾಲಯವನ್ನು ಕೊಚಿನ್ ದೇವಸ್ವಂ ಮಂಡಳಿ ನಿಯಂತ್ರಿಸುತ್ತದೆ. ಮಂಡಳಿಯ ಸದಸ್ಯರನ್ನು ಕೇರಳ ಸರಕಾರ ಮತ್ತು ಹಿಂದೂ ಸಮಾಜದಿಂದ ನೇಮಿಸಲಾಗುತ್ತದೆ.
‘Abuse for Nationalism, Praise for Jihadism’, SFI posters with nude paintings and provocative captions in Sri Kerala Varma College receive widespread condemnation https://t.co/S5prLcSmgA
— Organiser Weekly (@eOrganiser) October 28, 2021
೧. ಈ ಫಲಕಗಳಲ್ಲಿ ಒಂದರಲ್ಲಿ ಎರಡು ದೇಶಗಳ ಗಡಿಯನ್ನು ತೋರಿಸಲಾಗಿದೆ. ಅಲ್ಲಿ ಒಬ್ಬ ಸೈನಿಕ ಕಾವಲು ಕಾಯುತ್ತಿದ್ದಾನೆ. ಆ ಸೈನಿಕನು ಬೇರೆ ದೇಶದ ಗಡಿಯಲ್ಲಿ ಮಹಿಳೆಗೆ ಮುತ್ತು ಕೊಡುತ್ತಿರುವಂತೆ ತೋರಿಸಲಾಗಿದೆ ಮತ್ತು ಆ ಫಲಕದ ಅಡಿಯಲ್ಲಿ ಅಶ್ಲೀಲ ಭಾಷೆಯಲ್ಲಿ ಬರೆಯಲಾಗಿದೆ. ಈ ಎರಡು ದೇಶಗಳ ಗಡಿ ಎಂದರೆ ಭಾರತ ಮತ್ತು ಪಾಕಿಸ್ತಾನ ಎಂದು ಗಮನಕ್ಕೆ ಬರುತ್ತದೆ.
೨. ಎರಡನೇ ಫಲಕದ ಮೂಲಕ ಲೈಂಗಿಕ ಸ್ವಾತಂತ್ರ್ಯವನ್ನು ಬೆಂಬಲಿಸಲಾಗಿದೆ. ಅದರಲ್ಲಿ ಒಬ್ಬ ಮಹಿಳೆ ಮತ್ತು ಪುರುಷ ಬೆತ್ತಲೆಯಾಗಿ ಮುತ್ತು ನೀಡುವಂತೆ ತೋರಿಸಿದ್ದಾರೆ. ಅದರಲ್ಲಿ ಭೂಮಿಯಲ್ಲಿ ಲೈಂಗಿಕ ಸ್ವಾತಂತ್ರ್ಯದ ಅವಶ್ಯಕತೆಯಿದೆ ಎಂದು ಬರೆಯಲಾಗಿದೆ.
೩. ಮೂರನೇ ಫಲಕದಲ್ಲಿ, ಓರ್ವ ಮುಸಲ್ಮಾನ ವ್ಯಕ್ತಿ ಅಮೇರಿಕಾದ ರಾಷ್ಟ್ರಧ್ವಜವಿರುವ ಪ್ಯಾಂಟ್ ಹಾಕಿಕೊಂಡು ಕುರ್ಚಿಯಲ್ಲಿ ಕುಳಿತಿದ್ದಾನೆ ಮತ್ತು ಅವನ ಪಕ್ಕದಲ್ಲಿ ಎಕೆ-೪೭ ರೈಫಲ್ ಇದೆ. ‘ಈ ಚಿತ್ರವು ಅಫ್ಘಾನಿಸ್ತಾನದಿಂದ ಅಮೇರಿಕಾ ವಾಪಸ್ಸಾಗುತ್ತಿರುವ ಮತ್ತು ತಾಲಿಬಾನ್ ಆಡಳಿತದ ಸ್ಥಾಪನೆಯನ್ನು ಆಧರಿಸಿದೆ’, ಎಂದು ಹೇಳಲಾಗುತ್ತಿದೆ.