ವೆಬಿನಾರ ರದ್ದು ಪಡಿಸುವುದು, ಇದು ಕೇವಲ ತಾತ್ಕಾಲಿಕ ಪರಿಹಾರವಾಗಿದೆ, ಇಂತಹ ಕೃತ್ಯ ಎಸಗಿದವರನ್ನು ಸೆರೆಮನೆಗೆ ಅಟ್ಟ ಬೇಕು ! – ಸಂಪಾದಕರು
ನವ ದೆಹಲಿ – ಇಲ್ಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯ (‘ಜೆ.ಎನ್.ಯು.’ದಲ್ಲಿ) ಅಕ್ಟೋಬರ್ 29 ರಂದು ಸೆಂಟರ್ ಫಾರ್ ವುಮನ್ ಸ್ಟಡಿಜ’ ನಿಂದ ಒಂದು ವೆಬಿನಾರನ ಪ್ರಸಿದ್ಧಿಯ ಸಮಯದಲ್ಲಿ ಕಾಶ್ಮೀರವನ್ನು ‘ಭಾರತ ವಶ ಪಡಿಸಿಕೊಂಡಿರುವ ಕಾಶ್ಮೀರ’ ಎಂದು ಉಲ್ಲೇಖಿಸಲಾಗಿತ್ತು. ಅದಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಅಭಾವಿಪನ) ಕಾರ್ಯಕರ್ತರಿಂದ ವಿರೋಧ ವ್ಯಕ್ತಪಡಿಸಲಾಯಿತು. ಇದರ ಮಾಹಿತಿ ಜೆ.ಎನ್.ಯು. ಆಡಳಿತಕ್ಕೆ ದೊರೆಯುತ್ತಲೇ ಈ ವೆಬಿನಾರಅನ್ನು ಆರಂಭಿಸುವ ಮೊದಲೇ ರದ್ದು ಪಡಿಸಲಾಯಿತು. ಆಡಳಿತವು ಈ ವಿಷಯವಾಗಿ ತನಿಖೆಯ ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಲು ಅಭಾವಿಪವು ಒತ್ತಾಯಿಸಿದೆ.
‘Provocative’: JNU cancels Kashmir webinar after ABVP, teachers’ body objects https://t.co/IgG9aRUtGh
— Hindustan Times (@HindustanTimes) October 29, 2021
ತ್ರಿಪುರಾದಲ್ಲಾದ ಹಿಂಸಾಚಾರವನ್ನು ವಿರೋಧಿಸಿದ ಕಮ್ಯುನಿಸ್ಟ ವಿದ್ಯಾರ್ಥಿ ಸಂಘಟನೆ !
ನವರಾತ್ರಿಯ ಸಮಯದಲ್ಲಿ ಬಾಂಗ್ಲಾದೇಶದ ಹಿಂದೂಗಳ ಮೇಲೆ ದಾಳಿಗಳಾದವು, ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ಕೊಲ್ಲಲಾಯಿತು, ಅದನ್ನೆಲ್ಲ ವಿರೋಧಿಸಬೇಕೆಂದು ಕಮ್ಯುನಿಸ್ಟ ವಿದ್ಯಾರ್ಥಿ ಸಂಘಟನೆಗೆ ಏಕೆ ನೆನಪಾಗಲಿಲ್ಲ ? ಹಿಂದೂಗಳಿಗೆ ಏನಾದರೂ ಆದಾಗ ಇವರೆಲ್ಲ ಏಕೆ ಬಾಯಿಮುಚ್ಚಿ ಕೊಂಡಿರುತ್ತಾರೆ ಎಂಬುದರ ಉತ್ತರವನ್ನು ಅವರು ನೀಡಬೇಕು !- ಸಂಪಾದಕರು
ಜೆ.ಎನ್.ಯು.ನ ಈ ಕಮ್ಯುನಿಸ್ಟ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿಗಳು ತ್ರಿಪುರಾದಲ್ಲಿ ಮುಸಲ್ಮಾನರ ಮೇಲಿನ ಆಕ್ರಮಣದ ವಿರುದ್ಧ ಜೆ.ಎನ್.ಯು. ಪರಿಸರದಲ್ಲಿ ಮೆರವಣಿಗೆ ನಡೆಸಿದರು. ತ್ರಿಪುರಾದಲ್ಲಿ ಮುಸಲ್ಮಾನರ ಮೇಲೆ ಅಲ್ಲಿಯ ಭಾಜಪ ಸರಕಾರ ಮತ್ತು ಅನೇಕ ಸಂಸ್ಥೆಗಳು ಅತ್ಯಾಚಾರ ಮಾಡುತ್ತಿವೆ ಎಂಬುದು ಈ ವಿದ್ಯಾರ್ಥಿಗಳ ಆರೋಪವಾಗಿತ್ತು.