ಬಾಂಗ್ಲಾದೇಶದ ಹಿಂದೂಗಳ ಮೇಲಿನ ದಾಳಿ ಖಂಡಿಸಿ ಭಾರತದ ಹಿಂದೂಗಳು ದೀಪಾವಳಿಯಲ್ಲಿ ಕೆಲವು ಕಾಲ ದೀಪ ಆರಿಸುವರು, ಎಂಬ ನಿರೀಕ್ಷೆ ! – ತಸ್ಲೀಮಾ ನಸರಿನ

ಹಿಂದೂಗಳಿಗೆ ಸಹಾಯ ಮಾಡುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುವ ತಸ್ಲೀಮಾ ನಸರಿನ ಇವರ ಈ ವಿಚಾರ ಒಳ್ಳೆಯದಾಗಿದ್ದರೂ ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಗಾಗಿ ಹಿಂದೂಗಳು ದೀಪಾವಳಿಯಲ್ಲಿ ದೀಪಗಳನ್ನು ಆರಿಸುವ ಬದಲು ಸರಕಾರದ ಮೇಲೆ ಒತ್ತಡ ಹೇರುವ ಅವಶ್ಯಕವಾಗಿದೆ !- ಸಂಪಾದಕರು 

ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸರಿನ್

ನವ ದೆಹಲಿ – ಬಾಂಗ್ಲಾದೇಶದಲ್ಲಿ ಬಂಗಾಲಿ ಹಿಂದೂಗಳನ್ನು ಒಗ್ಗೂಡಿಸಲು ಮತ್ತು ದುರ್ಗಾಪೂಜೆಯ ಮಂಟಪದಲ್ಲಿನ ವಿದ್ವಂಸಕ ಕೃತ್ಯಗಳನ್ನು ಖಂಡಿಸಲು, ಭಾರತದಲ್ಲಿನ ಹಿಂದೂಗಳು ದೀಪಾವಳಿಯಲ್ಲಿ ಕೆಲವು ಕಾಲ ದೀಪಗಳನ್ನು ಆರಿಸುವರೆಂಬ ನಿರೀಕ್ಷೆ ಇದೆ, ಎಂದು ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸರಿನ್ ಅವರು ಟ್ವೀಟ್ ಮಾಡಿದ್ದಾರೆ.