‘ಮದ್ಯ, ತಂಬಾಕು, ಗುಟ್ಖಾಗಳಂತೆ ತೆರಿಗೆ ಪಾವತಿಸಿ ಅಮಲು ಪದಾರ್ಥಗಳ ಸೇವನೆಗೆ ಅನುಮತಿ ನೀಡಿ! ‘(ಅಂತೆ) – ಕಾಂಗ್ರೆಸ್‍ನ ಸಂಸದ ಕೆ.ಟಿ.ಎಸ್. ತುಳಸಿ ಇವರ ಬೇಡಿಕೆ

ಯಾವುದು ಸಮಾಜದ ಮತ್ತು ಪ್ರತಿಯೊಬ್ಬ ನಾಗರಿಕನ ಒಳಿತಿಗಿಲ್ಲ, ಆ ಪ್ರತಿಯೊಂದು ಅಂಶವನ್ನು ಮುಚ್ಚುವುದು ಅವಶ್ಯಕವಾಗಿದೆ. ಮದ್ಯ, ತಂಬಾಕು ಮತ್ತು ಗುಟ್ಖಾ ಸೇವನೆಯನ್ನು ನಿಷೇಧಿಸುವುದು ಸಹ ಅಗತ್ಯವಾಗಿದೆ.- ಸಂಪಾದಕರು 

ನವ ದೆಹಲಿ : ಅಮಲು ಪದಾರ್ಥಗಳು ಪ್ರತಿಯೊಬ್ಬರ ಜೀವನದ ಭಾಗವಾಗಿದೆ ಮತ್ತು ಹಲವಾರು ಪ್ರಸಂಗಗಳಲ್ಲಿ ಅಮಲು ಪದಾರ್ಥಗಳು ಜೀವನದ ನೋವನ್ನು ಕಡಿಮೆ ಮಾಡುತ್ತದೆ. ಮದ್ಯಪಾನ, ತಂಬಾಕು, ಗುಟ್ಖಾ ಇತ್ಯಾದಿಗಳಿಂದಲೂ ಹಾನಿಯಾಗುತ್ತವೆ; ಆದರೂ ಈ ಅಮಲು ಪದಾರ್ಥಗಳು ತೆರಿಗೆ ಪಾವತಿಸುವ ಮೂಲಕ ಸೇವಿಸಲು ಅನುಮತಿಸಲಾಗಿದೆ; ಹಾಗಾದರೆ ಇತರ ಅಮಲು ಪದಾರ್ಥಗಳನ್ನು ಏಕೆ ಅನುಮತಿಸಲಾಗುವುದಿಲ್ಲ ? ಅನೇಕ ಸಂದರ್ಭಗಳಲ್ಲಿ, ಔಷಧಿಗಳ ಮೂಲಕ ಅಮಲು ಪದಾರ್ಥಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೀಗಿರುವಾಗ ಅಗತ್ಯ ಬಿದ್ದರೆ ಅಮಲು ಪದಾರ್ಥ ಸೇವನೆಗೆ ಏಕೆ ಒಪ್ಪಿಗೆ ನೀಡಬಾರದು ?, ಎಂದು ಕಾಂಗ್ರೆಸ್ ರಾಜ್ಯಸಭಾ ಸಂಸದ ಕೆ.ಟಿ.ಎಸ್. ತುಳಸಿ ಕೇಳಿದ್ದಾರೆ.

ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್‍ನನ್ನು ಅಮಲು ಪದಾರ್ಥ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಬಗ್ಗೆ ತುಳಸಿ ಇವರು ಮಾತನಾಡುತ್ತಿದ್ದರು.

ತುಳಸಿ ಅವರು ಮಾತನಾಡುತ್ತಾ, ‘ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್‍ಸ್ಟೆನ್ಸ್ ಆಕ್ಟ್, 1985′ (ಮಾದಕ ವಸ್ತು ಮತ್ತು ಮನಸ್ಸಿನ ಮೇಲೆ ಮಾಡುವ ಪರಿಣಾಮ ವಸ್ತು, 1985) ಕಾನೂನಿನಲ್ಲಿ ತಿದ್ದುಪಡಿ ಮಾಡುವುದು ಅಗತ್ಯವಿದೆ; ಏಕೆಂದರೆ ಅದು ಜನರಿಗೆ ತೊಂದರೆ ನೀಡಲು ಬಳಸಲಾಗುತ್ತದೆ ಎಂದು ಹೇಳಿದರು.

ಅಮಲು ಪದಾರ್ಥ ವಿರೋಧಿ ಕಾಯ್ದೆ ಏನಿದೆ ?

‘ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್, 1985′ ಈ ಕಾನೂನಿಗನುಸಾರ ಯಾವುದೇ ವ್ಯಕ್ತಿಯು ಅಮಲು ಪದಾರ್ಥಗಳನ್ನು ಉತ್ಪಾದಿಸುವುದು ಅಥವಾ ಬೆಳೆಸುವುದು, ಖರೀದಿಸುವುದು, ಮಾರಾಟ ಮಾಡುವುದು, ತಮ್ಮೊಂದಿಗೆ ಇಟ್ಟುಕೊಳ್ಳುವುದು, ಸಾಗಿಸುವುದು, ಸೇವಿಸುವುದು ಇತ್ಯಾದಿ ಕೃತಿಗಳ ಮೇಲೆ ನಿಷೇಧ ಹೇರಲಾಗಿದೆ. ಇಂತಹ ಕೃತ್ಯಗಳನ್ನು ಎಸಗುವವರು ಸಿಕ್ಕಿಬಿದ್ದಲ್ಲಿ ಈ ಕಾನೂನಿನಡಿಯಲ್ಲಿ ಅವರ ಮೇಲೆ ಕಠಿಣ ಶಿಕ್ಷೆ ನೀಡುವ ವ್ಯವಸ್ಥೆ ಇದೆ.