ದೀಪಾವಳಿಯ ನಿಮಿತ್ತ ವಿವಿಧ ಸಂಸ್ಥೆಗಳ ಜಾಹೀರಾತುಗಳಲ್ಲಿ ‘ಕುಂಕುಮ’ ಹಚ್ಚಿಕೊಳ್ಳದಿರುವ ರೂಪದರ್ಶಿ(ಮಾಡೆಲ್ಸ್’)ಗಳನ್ನು ತೋರಿಸಿ ಹಿಂದೂ ಧರ್ಮಶಾಸ್ತ್ರವನ್ನು ನಾಶ ಗೊಳಿಸುವ ಸಂಚು !

ಸಂಸ್ಥೆಗಳ ಹಿಂದೂ ದ್ರೋಹಗಳ ಪ್ರಕಾರಕ್ಕೆ `#NoBindiNoBusiness’ ಎಂಬ ಹ್ಯಾಶಟ್ಯಾಗ ಉಪಯೋಗಿಸುತ್ತಾ ಹಿಂದುತ್ವನಿಷ್ಠ ಲೇಖಕಿ ಶೆಫಾಲೀ ವೈದ್ಯ ಇವರ ಅಭಿಯಾನಕ್ಕೆ ಸಾಮಾಜಿಕ ಮಾಧ್ಯಮಗಳಿಂದ ಉತ್ಸಾಹಭರಿತ ಪ್ರತಿಕ್ರಿಯೆ !

* ಹಿಂದೂ ಧರ್ಮದ ಮೇಲೆ ಈ ರೀತಿಯ ಸಾಂಸ್ಕೃತಿಕ ದಾಳಿಯನ್ನು ವಿರೋಧಿಸುವ ಶೆಫಾಲೀ ವೈದ್ಯ ಇವರಿಗೆ ಅಭಿನಂದನೆಗಳು ! ಇಂತಹ ಹಿಂದೂಗಳೇ ಹಿಂದೂ ಧರ್ಮದ ನಿಜವಾದ ಶಕ್ತಿಯಾಗಿದ್ದಾರೆ !- ಸಂಪಾದಕರು 

ಮುಂಬಯಿ – ದೀಪಾವಳಿ ನಿಮಿತ್ತ ವಿವಿಧ ಸಂಸ್ಥೆಗಳು ಬಟ್ಟೆ, ಒಡವೆ ಇತ್ಯಾದಿ ಉತ್ಪನ್ನಗಳ ಜಾಹೀರಾತುಗಳನ್ನು ಪ್ರಸಾರ ಮಾಡುತ್ತಿವೆ. ದೀಪಾವಳಿಯಂತಹ ಹಿಂದೂಗಳ ಪವಿತ್ರ ಹಬ್ಬದ ನಿಮಿತ್ತ ಜಾಹೀರಾತು ಮಾಡುವಾಗ ಅದರಲ್ಲಿ ಹಿಂದು ಧರ್ಮದಲ್ಲಿ ಪವಿತ್ರವೆಂದು ಪರಿಗಣಿಸಲಾಗಿರುವ `ಕುಂಕುಮ’ದ ಆಚಾರವಿಧಿಯನ್ನೇ ಬದಿಗೊತ್ತಲಾಗಿದೆ. ಈ ಜಾಹಿರಾತುಗಳಲ್ಲಿ ಕೆಲಸ ಮಾಡುವ ರೂಪದರ್ಶಿಗಳು (ಮಾಡೆಲ್ಸ್)’ ಕುಂಕುಮವನ್ನೇ ಹಚ್ಚಿಕೊಳ್ಳುವುದಿಲ್ಲ. ಹಿಂದೂಗಳ ಹಬ್ಬದ ನಿಮಿತ್ತ ಜಾಹೀರಾತನ್ನು ಮಾಡುವಾಗ ಹಿಂದೂಗಳ ಧರ್ಮಶಾಸ್ತ್ರವನ್ನು ಬಿಟ್ಟುಬಿಡುವ ಗಂಭೀರ ಪ್ರಕಾರವು ಕಂಡು ಬರುತ್ತಿದೆ. ಪ್ರಸಿದ್ಧ ಲೇಖಕಿ ಹಾಗೂ ಹಿಂದುತ್ವನಿಷ್ಠರಾದ ಶೆಫಾಲಿ ವೈದ್ಯರು ಸಾಮಾಜಿಕ ಮಾಧ್ಯಮಗಳಿಂದ ಈ ಪ್ರಕಾರವನ್ನು ಬಲವಾಗಿ ವಿರೋಧಿಸಿದ್ದು ‘#NoBindiNoBusiness‘ ಎಂಬ `ಹ್ಯಾಷಟ್ಯಾಗ’ಗೆ ಸಾಮಾಜಿಕ ಮಾಧ್ಯಮಗಳಿಂದ ಉತ್ಸಾಹಭರಿತ ಪ್ರತಿಕ್ರಿಯೆ ಸಿಗುತ್ತಿದೆ.

ಶೆಫಾಲೀ ವೈದ್ಯರು ಸಂಬಂಧಪಟ್ಟ ಸಂಸ್ಥೆಗಳ ಜಾಹೀರಾತಿನ ಚಿತ್ರಗಳನ್ನು ‘ಟ್ವಿಟ್’ ಮಾಡಿ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ನಟಿ ಸೊನಾಲೀ ಕುಲಕರ್ಣೀಯವರ ಛಾಯಾಚಿತ್ರವಿರುವ ‘ಪಿಎನ್‍ಜಿ’ (ಪೂ.ನಾ. ಗಾಡಗೀಳ) ಸಂಸ್ಥೆಯ ಆಭರಣಗಳ ಜಾಹೀರಾತು, ಹಾಗೂ ‘ತನಿಷ್ಕ’ ಮತ್ತು ‘ಪಿ.ಸಿ.ಚಂದ್ರಾ’ ಇವರ ಆಭರಣಗಳ ಜಾಹೀರಾತು ಒಳಗೊಂಡಿದೆ. ಇದರಲ್ಲಿ ಗಂಭೀರ ಅಂಶವೆಂದರೆ ದೀಪಾವಳಿಯಂತಹ ಹಿಂದೂಗಳ ಪವಿತ್ರ ಹಬ್ಬದ ನಿಮಿತ್ತ ಜಾಹೀರಾತನ್ನು ನಿರ್ಮಿಸುವಾಗ ಆ ಜಾಹೀರಾತುಗಳಲ್ಲಿ ಒಬ್ಬ ಮಹಿಳೆಯೂ ಕೂಡ ಹಣೆಯಲ್ಲಿ ಕುಂಕುಮವಾಗಲಿ ಟಿಕಲಿಯಾಗಲಿ ಇಟ್ಟುಕೊಂಡಿಲ್ಲ.

ಹಿಂದೂಗಳ ಹಣ ಬೇಕಿದ್ದರೆ, ಹಿಂದೂಗಳ ಪರಂಪರೆಯನ್ನು ಗೌರವಿಸಲು ಕಲಿಯಿರಿ ! – ಶೆಫಾಲಿ ವೈದ್ಯ

ಹಿಂದುತ್ವನಿಷ್ಠ ಲೇಖಕಿ ಶೆಫಾಲೀ ವೈದ್ಯ

‘ನೀವು ಕುಂಕುಮ ಹಚ್ಚಿಕೊಳ್ಳಿ, ಅಥವಾ ಕೂದಲು ಬಿಟ್ಟುಕೊಂಡು ಕುಣಿಯಿರಿ, ಅದು ನಿಮಗೆ ಬಿಟ್ಟಿದ್ದು, ನಾನೇನು ಹೆಂಗಸರೆಲ್ಲಾ ಟಿಕಲಿ ಹಚ್ಚಿಕೊಳ್ಳಬೇಕೆಂಬ ಫತ್ವಾ ಜಾರಿಗೊಳಿಸಿಲ್ಲ. ಫತ್ವಾ ಹೊರಡಿಸುವ ಜನರು ಬೇರೆಯೇ ಇದ್ದಾರೆ. ಆಗ ನೀವು `ಇಟ್ಸ ಕಲ್ಚರಲ್ ಯು ನೋ’ (`ಸಾಂಸ್ಕೃತಿಕ ಪರಂಪರೆ’ ಯ ಹೆಸರಿನಲ್ಲಿ ಬೆಂಬಲ ನೀಡುವುದು) ಬುರಖಾದಿಂದ ಹಿಡಿದು ಎಲ್ಲದ್ದಕ್ಕೂ ಬೆಂಬಲಿಸುತ್ತೀರಿ. ನಾನು ಸ್ಪಷ್ಟವಾಗಿ ಹೇಳುವುದೇನೆಂದರೆ, ದೀಪಾವಳಿ ಇದು ಹಿಂದೂಗಳ ಹಬ್ಬವಾಗಿದೆ. ಹಿಂದೂಗಳ ಹಣ ಬೇಕಿದ್ದರೆ, ಹಿಂದೂಗಳ ಪರಂಪರೆಯನ್ನು ಗೌರವಿಸಲು ಕಲಿಯಿರಿ ! ನಮ್ಮ ಹಬ್ಬಗಳಲ್ಲಿ ಹೆಂಗಸರು ಹಣೆಗೆ ಕುಂಕುಮ ಹಚ್ಚಿಕೊಳ್ಳದೆ ಸೂತಕದ ಮುಖ ಮಾಡಿಕೊಂಡು ತಿರುಗಾಡುವುದಿಲ್ಲ, ಹೀಗಿರುವಾಗ ಜಾಹಿರಾತುಗಳಲ್ಲಿ ಯಾಕೆ ಹೀಗಿರಬೇಕು ? ನನ್ನದು ಕಷ್ಟಪಟ್ಟು ಗಳಿಸಿದ ಹಣವಾಗಿದೆ, ಅದನ್ನು ಯಾವುದರ ಮೇಲೆ ಖರ್ಚು ಮಾಡಬೇಕು, ಎಂಬುದನ್ನು ನಾನು ತೀರ್ಮಾನಿಸುವೆನು. ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಿದಾಗ ಅನೇಕರಿಗೆ ನನ್ನಂತೆ ಅನಿಸುತ್ತಿತ್ತು. ಆದ್ದರಿಂದ ನಾನು ಕೇವಲ ಅದಕ್ಕೆ ದಾರಿ ಮಾಡಿಕೊಟ್ಟಿದ್ದೇನೆ. ಇಲ್ಲಿಯತನಕ ಈ `ಹ್ಯಾಷಟ್ಯಾಗ’ ಅನ್ನು ಹೆಚ್ಚು ಕಡಿಮೆ 7 ಲಕ್ಷ ಜನರು ನೋಡಿದ್ದಾರೆ. ಅವರ ಪೈಕಿ ಅರ್ಧದಷ್ಟು ಜನರಾದರೂ ಅದನ್ನು ಗಂಭೀರವಾಗಿ ತೆಗೆದುಕೊಂಡರೂ ಕೂಡ ಆ ‘ಬ್ರಾಂಡ್ಸ’ನವರು (ಪ್ರಸಿದ್ಧ ಸಂಸ್ಥೆಗಳು) ಜಾಹೀರಾತನ್ನು ಬದಲಾಯಿಸಲೇ ಬೇಕಾಗುತ್ತದೆ.