ಕೇರಳದಲ್ಲಿರುವ ಹಿಂದೂಗಳ ಧಾರ್ಮಿಕ ಪ್ರಕರಣಗಳ ಬಗ್ಗೆ ಧ್ವನಿ ಎತ್ತಲು ‘ಕೇರಳ ಧರ್ಮಾಚಾರ್ಯ ಸಭೆ’ ಸಂಘಟನೆಯ ಸ್ಥಾಪನೆ

ಕೇರಳ ಧರ್ಮಾಚಾರ್ಯ ಸಭೆ ಸಂಘಟನೆಯ ಸ್ಥಾಪನೆ

ತಿರುವಂತಪುರಮ್ (ಕೇರಳ) – ಕೇರಳ ರಾಜ್ಯದಲ್ಲಿಯ ವಿವಿಧ ಹಿಂದೂ ಆಶ್ರಮ ಮತ್ತು ಅರ್ಚಕರು, ಸ್ವಾಮಿ ಮೊದಲಾದವರು ಒಟ್ಟು ಸೇರಿ ಹಿಂದೂಗಳ ಸಂದರ್ಭದಲ್ಲಾಗುವ ಘಟನೆಗಳ ಬಗ್ಗೆ ಒಗ್ಗಟ್ಟಾಗಿ ಹೋರಾಟ ನಡೆಸಲು ಒಂದು ವೇದಿಕೆಯನ್ನು ಸ್ಥಾಪಿಸಿದ್ದಾರೆ. ಅದಕ್ಕೆ ‘ಕೇರಳ ಧರ್ಮಾಚಾರ್ಯ ಸಭೀ’ (ಕೆ.ಡಿ.ಎಸ್) ಎಂದು ಹೆಸರಿಸಲಾಗಿದೆ. ಈ ಸಂಘಟನೆಯ ಮಾಧ್ಯಮದಿಂದ ಹಿಂದೂಗಳಿಗೆ ಎದುರಾಗುವ ಸವಾಲುಗಳ ಬಗ್ಗೆ ಅಧಿಕೃತ ನಿಲುವನ್ನು ಮಂಡಿಸಲಾಗುವುದು. ಈ ಸಂಘಟನೆಯಿಂದ 23 ಸದಸ್ಯರ ಕಾರ್ಯಕಾರಿಣಿ ಸಮಿತಿಯನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಅರ್ಚಕರು ಕೂಡ ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿನ ಕೊಚ್ಚಿ ನಗರದಲ್ಲಿ ಈ ಬಗ್ಗೆ ಆಯೋಜಿಸಲಾದ ಸಭೆಯಲ್ಲಿ ಮುಖ್ಯ ಆಶ್ರಮಗಳು ಹಾಗೂ ಧಾರ್ಮಿಕ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.