‘ನಾವು ಗೆದ್ದೆವು’ ಎಂದು ‘ವಾಟ್ಸಾಪ್ ಸ್ಟೇಟಸ್’ಅನ್ನು ಇಟ್ಟು ಪಾಕಿಸ್ತಾನದ ಗೆಲುವನ್ನು ಬೆಂಬಲಿಸಿದ ಮತಾಂಧ ಶಿಕ್ಷಕಿ ನೌಕರಿಯಿಂದ ವಜಾ

ಕ್ರಿಕೆಟ್ ಪಂದ್ಯದಲ್ಲಿ ಭಾರತ ವಿರುದ್ಧದ ಪಾಕಿಸ್ತಾನ ಗೆದ್ದ ಪ್ರಕರಣ

ಇಂತಹವರನ್ನು ನೌಕರಿಯಿಂದ ವಜಾ ಮಾಡಿ ಸುಮ್ಮನಿರಬಾರದು, ಬದಲಾಗಿ ಅವರ ವಿರುದ್ಧ ದೇಶದ್ರೋಹದ ಅಪರಾಧವನ್ನು ದಾಖಲಿಸಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕು ! – ಸಂಪಾದಕರು 

(ಎಡದಲ್ಲಿ) ನೀರಜಾ ಮೋದಿ ಶಾಲೆಯ ಶಿಕ್ಷಕಿ ನಫೀಸಾ ಅಟಾರಿ

ಉದಯಪುರ (ರಾಜಸ್ಥಾನ) – ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ-20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದ ನಂತರ, ಇಲ್ಲಿನ ನೀರಜಾ ಮೋದಿ ಶಾಲೆಯ ಶಿಕ್ಷಕಿ ನಫೀಸಾ ಅಟಾರಿ ಅವರು ತಮ್ಮ ‘ವಾಟ್ಸಾಪ್ ಸ್ಟೇಟಸ್’ನಲ್ಲಿ ‘ಗೆದ್ದೆವು ನಾವು ಗೆದ್ದೆವು’ ಎಂದು ಬರೆದಿದ್ದರು. ಈ ಬಗ್ಗೆ ಓರ್ವ ವ್ಯಕ್ತಿಯು ಅವರಿಗೆ, ‘ನೀವು ಪಾಕಿಸ್ತಾನವನ್ನು ಬೆಂಬಲಿಸುತ್ತೀರಾ?’ ಎಂದು ಪ್ರಶ್ನಿಸಿದಾಗ ಅದಕ್ಕೆ ಅವರು ‘ಹೌದು’ ಎಂದು ಉತ್ತರಿಸಿದರು. ಈ ಮಾಹಿತಿ ಸಿಕ್ಕಿದ ನಂತರ ಶಾಲೆಯವರು ನಫೀಸಾಳನ್ನು ನೌಕರಿಯಿಂದ ವಜಾಗೊಳಿಸಿದ್ದಾರೆ. ಅವರ ಈ ವಾಟ್ಸಪ್ ಸ್ಟೇಟಸ್’ ಎಲ್ಲೆಡೆ ಪ್ರಸಾರವಾದ ನಂತರ ಭಾರತೀಯ ನಾಗರಿಕರಿಂದ ಆಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.