ಜಾಹೀರಾತಿನ ಮೂಲಕ ಕರ್ವಾ ಚೌಥ’ ವ್ರತವನ್ನು ಅವಮಾನಿಸಿದ ‘ಡಾಬರ’ ಸಂಸ್ಥೆಯಿಂದ ಕ್ಷಮಾಯಾಚನೆ

ಯಾರ ಭಾವನೆಗಳಿಗಾದರೂ ನೋವಾಗಿದ್ದರೆ, ಅದು ತಿಳಿಯದೆ ಆಗಿದೆ ಮತ್ತು ಅದಕ್ಕಾಗಿ ನಾವು ಕ್ಷಮೆ ಯಾಚಿಸುತ್ತೇವೆ ! – ಡಾಬರ

ಜಾಹೀರಾತಿನ ಮೂಲಕ ಓರ್ವ ಸಲಿಂಗಕಾಮಿ ದಂಪತಿಗಳು ‘ಕರ್ವಾ ಚೌಥ’ ವ್ರತವನ್ನು ಆಚರಿಸುತ್ತಿರುವಂತೆ ತೋರಿಸುವ ಪ್ರಯತ್ನ

ಹಿಂದೂಗಳು ಇಂತಹ ಮೇಲುಮೇಲಿನ ಮತ್ತು ಖೇದಕರ ಕ್ಷಮಾಯಾಚನೆ ಮಾಡುವ `ಡಾಬರ್’ ಕಂಪನಿಯ ಮೇಲೆ ಬಹಿಷ್ಕಾರ ಹೇರಿದಾಗಲೇ ಅಂದರೆ ಆರ್ಥಿಕವಾಗಿ ನೀಡಿದಾಗಲೇ ಇಂತಹ ಕಂಪನಿಗಳು ನೂಲಿನಂತೆ ನೇರವಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಸಂಪಾದಕರು 


ನವದೆಹಲಿ
– ‘ಡಾಬರ್’ ಕಂಪನಿ ತಮ್ಮ `ಗೋಲ್ಡ್ ಬ್ಲೀಚ್’ (ಮುಖವನ್ನು ಕಾಂತಿಯುತಗೊಳಿಸಲು ಉಪಯೋಗಿಸುವ ಪೌಡರ್) ಈ ಉತ್ಪಾದನೆಗಾಗಿ ಪ್ರಸಾರವಾಗಿರುವ ಜಾಹೀರಾತಿನಿಂದ ಸಲಿಂಗಕಾಮಿ ದಂಪತಿಗಳು ಮೊದಲು `ಕರ್ವಾಚೌಥ’ ಈ ವ್ರತ ಆಚರಣೆ ಮಾಡುತ್ತಿರುವಂತೆ ತೋರಿಸಲಾಗಿದೆ. ಇದರಲ್ಲಿ ಓರ್ವ ಯುವತಿಯು ಇನ್ನೊರ್ವ ಯುವತಿಯ ಮುಖಕ್ಕೆ `ಬ್ಲೀಚ್’ ಹಚ್ಚುತ್ತಿದಾಳೆ. ಹಾಗೂ ಅವರಿಬ್ಬರು ಈ ಹಬ್ಬದ ಮಹತ್ವ ಮತ್ತು ಅದರ ಹಿಂದಿನ ಕಾರಣದ ಬಗ್ಗೆ ಚರ್ಚಿಸುತ್ತಿರುವಂತೆ ತೋರಿಸಲಾಗಿದೆ. ಈ ಜಾಹೀರಾತಿಗೆ ಸಾಮಾಜಿಕ ಮಾಧ್ಯಮದಿಂದ ಟೀಕೆಗಳು ಬರಲಾರಂಭಿಸಿದಾಗ ‘ಡಾಬರ್’ ಇವರು ಕ್ಷಮಾಯಾಚನೆ ಮಾಡಿದ್ದಾರೆ.

‘ಡಾಬರ್’ ತಮ್ಮ ಟ್ವೀಟ್ಟರ್ ಖಾತೆಯಿಂದ ಟ್ವೀಟ್ ಮಾಡುತ್ತಾ, ‘ಯಾರ ಶ್ರದ್ಧೆ, ಪದ್ಧತಿ ಮತ್ತು ಧಾರ್ಮಿಕ ಪರಂಪರೆಗೆ ನೋಯಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಆದರೆ ನಾವು ಯಾವುದೇ ವ್ಯಕ್ತಿ ಅಥವಾ ಸಮೂಹಗಳ ಭಾವನೆಗಳನ್ನು ನೋಯಿಸಿದ್ದರೆ ಅದು ತಿಳಿಯದೆ ನಡೆದಿದ್ದು ನಾವು ಅದಕ್ಕಾಗಿ ಕ್ಷಮೆಯಾಚಿಸುತ್ತೇವೆ.’ ಎಂದು ಹೇಳಿದೆ.