ಹಿಂದೂಗಳ ಧಾರ್ಮಿಕ ಸಂಸ್ಥೆಯಲ್ಲಿ ಕೇವಲ ಹಿಂದೂಗಳಿಗಷ್ಟೇ ಕೆಲಸ ನೀಡುವ ನಿಯಮವಿರುವಾಗ ನೌಕರಿಗಾಗಿ ಮುಸಲ್ಮಾನ ಯುವಕನಿಂದ ಮದ್ರಾಸ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ಎಷ್ಟು ಹಿಂದೂಗಳು ಮುಸಲ್ಮಾನರ ಧಾರ್ಮಿಕ ಸಂಸ್ಥೆಗಳಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ ಹಾಗೂ ಅವರಿಗೆ ಕೆಲಸ ನೀಡಲಾಗುತ್ತದೆ? ಕೆಲಸ ನೀಡದೆ ಇದ್ದರೆ ಎಷ್ಟು ಹಿಂದೂಗಳು ಈ ರೀತಿ ನ್ಯಾಯಾಲಯದ ಮೊರೆ ಹೋಗುತ್ತಾರೆ ?- ಸಂಪಾದಕರು 

ಚೆನ್ನೈ (ತಮಿಳುನಾಡು) – ರಾಜ್ಯದಲ್ಲಿನ ಹಿಂದೂ ಧಾರ್ಮಿಕ ಹಾಗೂ ಧರ್ಮಾರ್ಥ ವ್ಯವಸ್ಥಾಪನೆ ವಿಭಾಗಕ್ಕೆ ಒಳಪಡುವ ಅರುಳಮಿಗು ಕಪಾಲೀಶ್ವರಾರ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಕೇವಲ ಹಿಂದೂಗಳಿಗಷ್ಟೇ ಕೆಲಸ ನೀಡಲಾಗುತ್ತದೆ. ಈ ವಿಭಾಗಕ್ಕೆ ಒಳಪಡುವ ಎಲ್ಲಾ ಸಂಸ್ಥೆಗಳಲ್ಲಿ ಈ ನಿಯಮ ಅನ್ವಯಿಸುತ್ತದೆ. ಹೀಗಿರುವಾಗ ಈ ಮಹಾವಿದ್ಯಾಲಯದಲ್ಲಿ ಕೆಲಸಕ್ಕಾಗಿ ಎ. ಸುಹೈಲ ಎಂಬ ಮುಸಲ್ಮಾನ ಯುವಕನು ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

. ಅರ್ಜಿದಾರ ಸುಹೈಲರವರು ಈ ಮನವಿಯಲ್ಲಿ, ‘ಸರ್ವೋಚ್ಚ ನ್ಯಾಯಾಲಯವು ‘ಹಿಂದೂ’ ಶಬ್ಧದ ವ್ಯಾಖ್ಯಾನವನ್ನು ಹೇಳುವಾಗ ‘ಹಿಂದೂ’ ಶಬ್ಧವು ಯಾವುದೇ ಧರ್ಮವನ್ನು ಪ್ರತಿನಿಧಿಸುವುದಿಲ್ಲ ಅಥವಾ ಅದು ‘ಧರ್ಮ’ವಲ್ಲ, ಬದಲಾಗಿ ಅದೊಂದು ಜೀವನ ನಡೆಸುವ ಪದ್ಧತಿಯಾಗಿದೆ, ಎಂದು ಹೇಳಿದೆ. ಹೀಗಿರುವಾಗ ಕೆಲಸಕ್ಕಾಗಿ ಅರ್ಜಿ ನೀಡುವ ವ್ಯಕ್ತಿ ಹಿಂದೂವೇ ಅಥವಾ ಅಲ್ಲವೇ, ಎಂಬುದು ಹೇಗೆ ಸಾಬೀತು ಪಡಿಸುವಿರಿ? ಆದ್ದರಿಂದ ಭಾರತೀಯ ಮುಸಲ್ಮಾನರಿಗೆ ಅಥವಾ ಕ್ರೈಸ್ತರಿಗೆ ಯಾವುದೇ ಮಹಾವಿದ್ಯಾಲಯವು ಕೆಲಸಕ್ಕಾಗಿ ಅರ್ಜಿ ಸಲ್ಲಿಸುವುದನ್ನು ತಡೆಯಲು ಸಾಧ್ಯವಿಲ್ಲ. ಹಾಗೂ ಸಂವಿಧಾನದಲ್ಲಿ ಧರ್ಮದ ಆಧಾರದ ಮೇಲೆ ರಾಜ್ಯಗಳು ಭೇದಭಾವ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ ಕೆಲಸಕ್ಕಾಗಿ ವಿಧಿಸಲಾಗಿರುವ ಷರತ್ತು ಸಂವಿಧಾನದ ವಿರುದ್ಧವಾಗಿದೆ. ಶಿಕ್ಷಣ ಹಾಗೂ ಶಿಕ್ಷಣೋತ್ತರ ಪದವಿಗಳಿಗೆ ಧಾರ್ಮಿಕ ಕಾರ್ಯದೊಂದಿಗೆ ಸಂಬಂಧವಿಲ್ಲ. ಆದ್ದರಿಂದ ಇಂತಹ ಪದವಿಗಳಿಗೆ ಎಲ್ಲಾ ಧರ್ಮದವರಿಗೂ ಅನುಮತಿ ನೀಡಬೇಕು.

೨. ಈ ಅರ್ಜಿಯ ಮೊದಲು ‘ಅಸೋಸಿಏಶನ ಆಫ್ ಯುನಿವರ್ಸಿಟಿ’ಯ ಮಾಜಿ ಅಧ್ಯಕ್ಷರಾದ ಕೆ. ಪಾಂಡಿಯನ್ ಇವರೂ ಕೂಡ ಧರ್ಮಾದಾಯ ವಿಭಾಗದ ತೀರ್ಮಾನವನ್ನು ಟೀಕಿಸಿದ್ದರು. ಅವರು, ರಾಜ್ಯ ಸರಕಾರದ ಮೂಲಕ ಸಂಚಾಲಿತ ಯಾವುದೇ ವಿಭಾಗವಾದರೂ ಧರ್ಮದ ಆಧಾರದಲ್ಲಿ ನೇಮಿಸುವುದು, ಇದು ಭೇದಭಾವವಾಗಿದ್ದು ಆ ರೀತಿ ಮಾಡಲು ಸಾಧ್ಯವಿಲ್ಲ. ಮದುರೈ ವಕ್ಫ ಬೋರ್ಡನಲ್ಲಿ ಅನೇಕ ಮುಸಲ್ಮಾನೇತರರು ಕೆಲಸ ಮಾಡುತ್ತಾರೆ, ಎಂಬ ಉದಾಹರಣೆಯನ್ನು ಕೂಡ ಅವರು ನೀಡಿದ್ದರು.