ಭರೂಚ್ (ಗುಜರಾತ್) ಇಲ್ಲಿನ ಬಹುಸಂಖ್ಯಾತ ಹಿಂದೂಗಳು ವಾಸಿಸುತ್ತಿದ್ದ ಸಂಕೀರ್ಣವು ಮುಸ್ಲಿಂ ಬಹುಸಂಖ್ಯಾತ ಆಗಿದ್ದರಿಂದ ಹಿಂದೂಗಳು ಪಲಾಯನ !

ಜಲಾರಾಮ್ ಬಾಪ್ಪಾ ದೇವಸ್ಥಾನದಲ್ಲಿ ‘ಮಾರಾಟ’ದ ಫಲಕ !

* 30 ವರ್ಷಗಳ ಹಿಂದೆ ಹಿಂದೂಗಳು ಮತಾಂಧರ ಉಪಟಳದಿಂದ ಕಾಶ್ಮೀರವನ್ನು ತೊರೆದರು. ಇಂದು ಅದೇ ಸ್ಥಿತಿಯು ಬಂಗಾಲ, ಕೇರಳ ಮತ್ತು ಈಗ ಗುಜರಾತ್‍ನಲ್ಲಿನ ಹಿಂದೂಗಳ ಮೇಲೆ ಬಂದಿದೆ. ಇದು ಹಿಂದೂಗಳಿಗೆ ಹಾಗೂ ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರಿಗೆ ನಾಚಿಕೆಗೇಡು ! – ಸಂಪಾದಕರು

* ಹಿಂದೂಗಳ ವಸತಿಗಳಲ್ಲಿ ಮುಸ್ಲಿಮರಿಗೆ ಮನೆ ಬಾಡಿಗೆಗೆ ನೀಡಲು ನಿರಾಕರಿಸಿದರೆ ಅದರ ‘ಬ್ರೇಕಿಂಗ್ ನ್ಯೂಸ್’ ಆಗುತ್ತದೆ; ಆದರೆ ಮುಸ್ಲಿಮರ ಭಯೋತ್ಪಾದನೆಯಿಂದಾಗಿ, ಹಿಂದೂಗಳು ತಮ್ಮ ಮನೆಗಳನ್ನು ಮಾರಿ ಪಲಾಯನ ಮಾಡುವಂತಹ ಸಮಯ ಬಂದಾಗಲೂ, ಅದರ ಬಗ್ಗೆ ಯಾವುದೇ ಚರ್ಚೆ ಆಗುವುದಿಲ್ಲ, ಎಂಬುದು ಖೇದಕರ ! – ಸಂಪಾದಕರು

* ಗುಜರಾತ್‍ನಲ್ಲಿ ಭಾಜಪ ಅಧಿಕಾರದಲ್ಲಿರುವಾಗ, ಹಿಂದೂಗಳು ಪಲಾಯನ ಮಾಡುವಂತಹ ಸ್ಥಿತಿ ಒದಗಿರುವುದು ಅಪೇಕ್ಷಿತವಿಲ್ಲ ! – ಸಂಪಾದಕರು

ಭರೂಚ್ (ಗುಜರಾತ್) – ಇಲ್ಲಿನ ಜಲಾರಾಮ್ ಬಾಪ್ಪಾ ದೇವಸ್ಥಾನದಲ್ಲಿ ಹಿಂದೆ ಪ್ರತಿ ಗುರುವಾರ ಸಂಜೆ ಆರತಿ ನಡೆಯುತ್ತಿತ್ತು. ಕೆಲವು ವರ್ಷಗಳ ಹಿಂದೆ ದೇವಸ್ಥಾನದ ಎದುರಿನಲ್ಲಿ ಶೌಕತ್ ಅಲಿ ಒಂದು ಮನೆಯನ್ನು ಖರೀದಿಸಿದರು. ಆತ ದೇವಸ್ಥಾನದಲ್ಲಿ ನಡೆಯುವ ಆರತಿಯನ್ನು ವಿರೋಧಿಸಲು ಆರಂಭಿಸಿದ. ಕ್ರಮೇಣ 28 ಮುಸ್ಲಿಮರು ಈ ಪ್ರದೇಶದಲ್ಲಿ ಮನೆಗಳನ್ನು ಖರೀದಿಸಿದರು. ಇದರಿಂದ ಆರತಿಗೆ ವಿರೋಧ ತೀವ್ರವಾಯಿತು ಮತ್ತು ಅದನ್ನು ನಿಲ್ಲಿಸಬೇಕಾಯಿತು. ಈಗ ಈ ದೇವಸ್ಥಾನವನ್ನೇ ಮಾರಾಟ ಮಾಡುವ ಸಿದ್ಧತೆ ನಡೆಯುತ್ತಿದೆ. ಈ ಬಗ್ಗೆ ದೇವಾಲಯದ ಹೊರಗೆ ಒಂದು ಫಲಕವನ್ನು ಹಾಕಲಾಗಿದೆ, ಅದೇ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ವಾಸಿಸುತ್ತಿದ್ದ ಸಂಕೀರ್ಣದಲ್ಲಿ ಮುಸಲ್ಮಾನ ಬಹುಸಂಖ್ಯಾತ ಆಗಿದ್ದರಿಂದ ಹಿಂದೂಗಳು ಅಲ್ಲಿಂದ ಪಲಾಯನ ಮಾಡುತ್ತಿದ್ದಾರೆ, ಎಂದು ‘ಆಪ್ ಇಂಡಿಯಾ’ ಸುದ್ದಿ ಜಾಲತಾಣವು ವರದಿ ಮಾಡಿದೆ.

1. ಮೂಲಗಳು ಹೇಳುವಂತೆ, ಭರೂಚ್‍ನ ಕೆಲವು ಪ್ರದೇಶಗಳಲ್ಲಿ 2019 ರಲ್ಲಿ ‘ಪ್ರಕ್ಷುಬ್ಧ ಪ್ರದೇಶಗಳ ಕಾಯ್ದೆ’ ಜಾರಿಗೆ ತರಲಾಯಿತು; ಆದರೆ ಆಡಳಿತದಲ್ಲಿ ಕೆಲವು ಜನರ ಸಹಾಯದಿಂದ, ಈ ಕಾಯಿದೆಯಲ್ಲಿನ ದೋಷಗಳ ದುರುಪಯೋಗ ಪಡೆದು ಜನಸಂಖ್ಯೆಯ ಪರಿಸ್ಥಿತಿಯನ್ನು ಬದಲಾಯಿಸಲಾಗಿದೆ. ಹಾಗಾಗಿ ಅಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ ಮತ್ತು ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ. ಇಲ್ಲಿ ಕೇವಲ 20 ರಿಂದ 25 ಹಿಂದೂ ಕುಟುಂಬಗಳು ಮಾತ್ರ ಉಳಿದಿವೆ.

2. ಮೂಲಗಳು ನೀಡಿದ ಮಾಹಿತಿಗನುಸಾರ, ಇಲ್ಲಿಯ ಹಿಂದೂ ನಿವಾಸಿಗಳು ಮುಸ್ಲಿಮರು ಮನೆಗಳನ್ನು ಖರೀದಿಸುವುದನ್ನು ವಿರೋಧಿಸಿದಾಗ, ಪೊಲೀಸರು ಮತ್ತು ಆಡಳಿತಾತ್ಮಕ ಅಧಿಕಾರಿಗಳು ನಿವಾಸಿಗಳ ವಿರುದ್ಧವೇ ದೂರು ದಾಖಲಿಸುವ ಬೆದರಿಕೆಯನ್ನು ಒಡ್ಡಿದರು, (ಇಂತಹ ಪೊಲೀಸ್ ಮತ್ತು ಆಢಳಿತಾಧಿಕಾರಿಗಳು ಭಾರತದವರಾಗಿದ್ದಾರೋ ಅಥವಾ ಪಾಕಿಸ್ತಾನದವರೋ ? – ಸಂಪಾದಕರು)

3. ಈ ಪ್ರದೇಶದಲ್ಲಿ ಈಗಲೂ ವಾಸಿಸುತ್ತಿರುವ ಹಿಂದೂ ಕುಟುಂಬಗಳ ಸಂಕಷ್ಟದ ಬಗ್ಗೆ ಮಾತನಾಡುತ್ತಾ ಒಬ್ಬ ಹಿಂದೂವು, ‘ಇಲ್ಲಿ ಒಂದು ದೇವಸ್ಥಾನವಿದೆ. ಅಲ್ಲಿ ಭಜನೆ-ಆರತಿ ಆಗುತ್ತದೆ. ಮೊದಲು ಅವರು (ಹೊಸ ಮುಸ್ಲಿಂ ನಿವಾಸಿಗಳು) ಗಲಾಟೆ ಮಾಡುತ್ತಾರೆ ಮತ್ತು ದೇವಾಲಯದ ಮೇಲಿನ ಧ್ವನಿವರ್ಧಕಗಳ ಶಬ್ದವನ್ನು ಆಕ್ಷೇಪಿಸುತ್ತಾರೆ. ಹಿಂದೂಗಳು ಸಂಕೀರ್ಣದ ಹೊರಗೆ ಸಾರ್ವಜನಿಕ ಸ್ಥಳಗಳಲ್ಲಿ ಕುಳಿತಾಗ, ಅವರ ಮೇಲೆ ಅಯೋಗ್ಯ ವರ್ತನೆಯ ಸುಳ್ಳು ಆರೋಪ ಹೊರಿಸಿ ಅದರಲ್ಲಿ ಸಿಲುಕಿಸುವ ಬೆದರಿಕೆ ಒಡ್ಡುತ್ತಿದ್ದಾರೆ. ಈ ರೀತಿಯಾಗಿ ಹಿಂದೂಗಳಿಗೆ ಇಲ್ಲಿ ಉಳಿಯುವುದು ಕಷ್ಟಕರವಾಗಿದೆ. ನಾವು ಈ ಬಗ್ಗೆ ಆಡಳಿತಕ್ಕೆ ಮನವಿ ನೀಡಿದ್ದೆವು; ಆದರೆ ಯಾವುದೇ ಪ್ರಯೋಜನವಾಗಿಲ್ಲ.’(ಮುಸ್ಲಿಂ ಓಲೈಕೆಯ ಆಡಳಿತ ! ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ! – ಸಂಪಾದಕರು)

4. ಇಲ್ಲಿನ ನಿವಾಸಿಗಳು, ಆರಂಭದಲ್ಲಿ 1-2 ಮುಸ್ಲಿಮರು ಹಿಂದೂ ಆಸ್ತಿಯನ್ನು ಹೆಚ್ಚಿನ ಬೆಲೆಗೆ ಖರೀದಿಸುತ್ತಾರೆ. ಇತರ ಹಿಂದೂಗಳು ಈ ಬಲೆಗೆ ಬಿದ್ದು ತಮ್ಮ ಮನೆಗಳನ್ನು ಮಾರುತ್ತಾರೆ. ಯಾವಾಗ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುವುದೋ, ಆಗ ಉಳಿದ ಹಿಂದೂಗಳು ತಮ್ಮ ಆಸ್ತಿಯನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಬೇಕಾಗುತ್ತದೆ ಎಂದು ಹೇಳಿದರು.

ಏನಿದು ‘ಪ್ರಕ್ಷುಬ್ಧ ಪ್ರದೇಶಗಳು’ ಕಾಯಿದೆ ?

ಯಾವ ಕ್ಷೇತ್ರವು ಜನಸಂಖ್ಯೆಯ ಬದಲಾವಣೆಗಾಗಿ ಅತೀ ಸೂಕ್ಷ್ಮವಾಗಿದೆಯೋ, ಅಂತಹ ಕೆಲವು ಪ್ರದೇಶಗಳಲ್ಲಿ ಧಾರ್ಮಿಕ ಸಾಮರಸ್ಯ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಜಿಲ್ಲಾಡಳಿತ ‘ಪ್ರಕ್ಷುಬ್ಧ ಪ್ರದೇಶ’ವೆಂದು ಘೋಷಿಸಬಹುದು. ಇಂತಹ ಸಮಯದಲ್ಲಿ ಆ ಪ್ರದೇಶದಲ್ಲಿ ಸ್ಥಿರ (ಮನೆ, ನಿವೇಶನ) ಆಸ್ತಿಯನ್ನು ವರ್ಗಾಯಿಸಲು ಒಂದು ವಿವರವಾದ ಪ್ರಕ್ರಿಯೆಯ ಅಗತ್ಯವಿರುತ್ತದೆ. ಮಾರಾಟಗಾರನು ತನ್ನ ಅರ್ಜಿಯಲ್ಲಿ ‘ತಾನು ಇಚ್ಛೆಯಂತೆ ಆಸ್ತಿಯನ್ನು ಮಾರುತ್ತಿದ್ದೇನೆ’, ಎಂದು ಉಲ್ಲೇಖಿಸಬೇಕಾಗುತ್ತದೆ. ಇಂತಹ ಅರ್ಜಿಗಳು ಸಿಕ್ಕಿದ ನಂತರ, ಅದರಂತೆ ಜಿಲ್ಲಾಧಿಕಾರಿ ಮತ್ತು ಪೊಲೀಸರು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಾರೆ. ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಮತ್ತು ಜಿಲ್ಲಾಧಿಕಾರಿಯ ಒಪ್ಪಿಗೆಯ ನಂತರವೇ ಆಸ್ತಿಯ ವರ್ಗಾವಣೆ ನಡೆಯುತ್ತದೆ. ಈ ಕಾಯ್ದೆಯ ಮೂಲಕ, ರಾಜ್ಯದ ಸೂಕ್ಷ್ಮ ಭಾಗಗಳಲ್ಲಿಯ ಸಮುದಾಯಗಳನ್ನು ಬಲವಂತವಾಗಿ ಧ್ರುವೀಕರಣಗೊಳಿಸಲು ಪ್ರಯತ್ನಿಸುತ್ತಿದೆ.