70,000 ಮಸೀದಿಗಳ ಧ್ವನಿವರ್ಧಕಗಳ ಧ್ವನಿ ತಗ್ಗಿಸಿದ ಇಸ್ಲಾಮಿಕ್ ದೇಶ ಇಂಡೋನೇಷ್ಯಾ !

ಜನರಿಂದ ಹೆಚ್ಚುತ್ತಿರುವ ದೂರುಗಳ ಪರಿಣಾಮ !

ಇಂಡೋನೇಷಿಯಾ ಮಸೀದಿ ಪರಿಷತ್ತಿನಿಂದ ಮಹತ್ವಪೂರ್ಣ ನಿರ್ಣಯ

* ವಿಶ್ವದ ಅತಿದೊಡ್ಡ ಮುಸಲ್ಮಾನ ಜನಸಂಖ್ಯೆಯಿರುವ ದೇಶದಲ್ಲಿ, ಸಾವಿರಾರು ಮಸೀದಿಗಳಲ್ಲಿ ಧ್ವನಿವರ್ಧಕಗಳ ಶಬ್ದವನ್ನು ತಗ್ಗಿಸಬಹುದಾದರೆ, ಜಾತ್ಯತೀತ ಭಾರತದಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿರುವ ಧ್ವನಿವರ್ಧಕಗಳನ್ನು ತೆಗೆದೇ ಬಿಡಬಹುದು !- ಸಂಪಾದಕರು 

* ಇಂಡೋನೇಷ್ಯಾದ ಮುಸಲ್ಮಾನರು ತೋರಿಸಿದಂತಹ ಜಾಣತನವನ್ನು ಭಾರತದ ಮುಸಲ್ಮಾನರು ಸಹ ತೋರಿಸುತ್ತಾರೆಯೇ ? -ಸಂಪಾದಕರು 

ಜಕಾರ್ತಾ (ಇಂಡೋನೇಷ್ಯಾ) – ವಿಶ್ವದ ಅತಿದೊಡ್ಡ ಅಂದರೆ 21 ಕೋಟಿ ಮುಸಲ್ಮಾನ ಜನಸಂಖ್ಯೆಯಿರುವ ಇಂಡೋನೇಷ್ಯಾದಲ್ಲಿ, 70,000 ಮಸೀದಿಗಳಲ್ಲಿ ಧ್ವನಿವರ್ಧಕಗಳ ಶಬ್ದವನ್ನು ತಗ್ಗಿಸಲಾಗಿದೆ. ಭಾರೀ ಶಬ್ದಮಾಲಿನ್ಯದಿಂದ ಜನರು ಬಳಲುತ್ತಿರುವುದರ ಹಿನ್ನೆಲೆಯಲ್ಲಿ ‘ಇಂಡೋನೇಷ್ಯಾ ಮಸೀದಿ ಪರಿಷದ್’ ಈ ನಿರ್ಣಯ ತೆಗೆದುಕೊಂಡಿದೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಧ್ವನಿವರ್ಧಕಗಳ ದೊಡ್ಡ ಧ್ವನಿಯಿಂದಾಗಿ ವಿರೋಧವು ವ್ಯಕ್ತವಾಗಿತ್ತು. ಈ ಕುರಿತು ಆನ್‍ಲೈನ್ ಮೂಲಕ ದೂರುಗಳ ಸಂಖ್ಯೆಯೂ ಹೆಚ್ಚಾಗಿದ್ದವು. `ಧ್ವನಿವರ್ಧಕಗಳ ಶಬ್ದಮಾಲಿನ್ಯದಿಂದ ನಮ್ಮ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಖಿನ್ನತೆ, ಕಿರಿಕಿರಿ, ನಿದ್ರಾಹೀನತೆಯಂತಹ ಸಮಸ್ಯೆಗಳು ಉದ್ಭವಿಸುತ್ತಿವೆ’, ಎಮಬುದು ಅಲ್ಲಿನ ನಾಗರಿಕರ ಹೇಳಿಕೆಯಾಗಿತ್ತು. ಈ ವಿಷಯವು ಸೂಕ್ಷ್ಮವಾಗಿರುವುದರಿಂದ ಜನರು ಅದನ್ನು ಬಹಿರಂಗವಾಗಿ ವಿರೋಧಿಸುತ್ತಿರಲಿಲ್ಲ.

1. ಪರಿಷದ್‍ನ ಅಧ್ಯಕ್ಷ ಯೂಸುಫ್ ಕಾಲ್ಲಾ ಮಾತನಾಡಿ, ದೇಶದ 7 ಲಕ್ಷ 50 ಸಾವಿರಕ್ಕಿಂತಲೂ ಹೆಚ್ಚು ದಿನಗಳಲ್ಲಿ ಹೆಚ್ಚಿನ ಧ್ವನಿವರ್ಧಕಗಳ ಸ್ಥಿತಿ ಸರಿ ಇಲ್ಲ. ಆದ್ದರಿಂದ ಅಜಾನ್‍ನ ಧ್ವನಿ ಜೋರಾಗಿ ಕೇಳುತ್ತದೆ. ಪರಿಷದ್ 7,000 ತಂತ್ರಜ್ಞರಿಗೆ ಕೆಲಸವನ್ನು ಒಪ್ಪಿಸಿ ದೇಶದ ಅಂದಾಜು 70,000 ಮಸೀದಿಗಳಲ್ಲಿ ಧ್ವನಿವರ್ಧಕಗಳ ಧ್ವನಿಯನ್ನು ತಗ್ಗಿಸಲಾಗಿದೆ.

2. ದೇಶದಲ್ಲಿ ಧರ್ಮನಿಂದೆಯ ಕಾಯ್ದೆಯಡಿಯಲ್ಲಿ ಕಠಿಣ ಶಿಕ್ಷೆಯ ವ್ಯವಸ್ಥೆ ಇದೆ. ಅಜಾನ್‍ನ ದೊಡ್ಡ ಧ್ವನಿಯನ್ನು ವಿರೋಧಿಸಿದ ಓರ್ವ ಮಹಿಳೆಗೆ ಒಂದೂವರೆ ವರ್ಷದ ಶಿಕ್ಷೆ ವಿಧಿಸಲಾಗಿತ್ತು. ರಾಜಧಾನಿ ಜಕಾರ್ತಾದಲ್ಲಿ ಕೆಲವು ಜನರು ದೊಡ್ಡ ಧ್ವನಿಯ ಬಗ್ಗೆ ದೂರು ನೀಡಿದಾಗ, ಸಾವಿರಾರು ಮತಾಂಧರು ಅವರ ಕಟ್ಟಡಕ್ಕೆ ಘೆರಾವ್ ಹಾಕಿದ್ದರು. ಆಗ ಸೇನೆಯನ್ನು ಕರೆಸಬೇಕಾಗಿ ಬಂದಿತ್ತು.

ಜರ್ಮನಿಯ ಕೊಲೊನ್ ನಗರದ ಮಸೀದಿಗಳಲ್ಲಿ ಧ್ವನಿವರ್ಧಕಗಳಿಗೆ ವಿರೋಧ

ಜರ್ಮನಿಯ ಅತಿದೊಡ್ಡ ನಗರಗಳಲ್ಲಿ ಒಂದಾದ ಕೊಲೊನ್‍ನಲ್ಲಿ, ಶುಕ್ರವಾರ ಮೇಯರ್‍ರು ಮಸೀದಿಗಳ ಧ್ವನಿವರ್ಧಕಗಳ ಮೂಲಕ ಅಜಾನ್ ಕೇಳಲು ಸಮ್ಮತಿಸಿದ ನಂತರ ರಾಷ್ಟ್ರನಿಷ್ಠ ರಾಜಕೀಯ ಪಕ್ಷ ಎ.ಎಫ್.ಡಿ.(ಆಲ್ಟರ್‍ನೇಟಿವ್ ಫಾರ್ ಡಾಯಶೆಲ್ಯಾಂಡ್) ಇದನ್ನು ಬಲವಾಗಿ ವಿರೋಧಿಸಿದೆ. ಪಕ್ಷದ ಉಪ ವಕ್ತಾರರಾದ ಮ್ಯಾಥಿಯಸ್ ಬುಶಗ್ಸ್ ಅವರು ಮಾತನಾಡಿ, `ಜರ್ಮನಿಯನ್ನು ಇಸ್ಲಾಮೀಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ. ಈ ನಿರ್ಧಾರವು ನಮ್ಮದು ಕ್ರೈಸ್ತ ದೇಶವಲ್ಲ, ಇಸ್ಲಾಮಿ ಆಗಿದೆ ಎಂಬ ಚಿತ್ರಣವನ್ನು ಸೃಷ್ಟಿಸುತ್ತಿದೆ’, ಕೊಲೋನ್‍ನಲ್ಲಿ 1 ಲಕ್ಷ 20 ಸಾವಿರ ಮುಸಲ್ಮಾನರಿದ್ದಾರೆ. ಈ ಸಂಖ್ಯೆಯು ನಗರದ ಒಟ್ಟು ಜನಸಂಖ್ಯೆಯ ಶೇ. 12 ರಷ್ಟಿದೆ ಎಂದು ಹೇಳಿದರು.