ಜಬಲಪುರ್ (ಮಧ್ಯಪ್ರದೇಶ)ನಲ್ಲಿ ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಆಚರಿಸುತ್ತಿದ್ದಾಗ ಮತಾಂಧರಿಂದ ಪೊಲೀಸರ ಮೇಲೆ ದಾಳಿ

ಪೊಲೀಸರ ಮೇಲೆ ಕಲ್ಲು ತೂರಾಟ

ಪೊಲೀಸರಿಂದ ಲಾಠಿ ಪ್ರಹಾರ, ಅದೇ ರೀತಿ ಅಶ್ರುವಾಯು ಸಿಡಿಸಿದರು

* ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಮತಾಂಧರು ಪೊಲೀಸರ ಮೇಲೆ ದಾಳಿ ಮಾಡಲು ಹೇಗೆ ಧೈರ್ಯ ಮಾಡುತ್ತಾರೆ ? -ಸಂಪಾದಕರು

* ಪೊಲೀಸರ ಮೇಲೆ ದಾಳಿ ಮಾಡುವ ಮತಾಂಧರ ವಿರುದ್ಧ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಈಗೇಕೆ ಮಾತನಾಡುತ್ತಿಲ್ಲ ಅಥವಾ ಪೊಲೀಸರ ಮೇಲೆ ದಾಳಿ ಮಾಡುವುದು ಮತಾಂಧರ ‘ಧರ್ಮಸಿದ್ಧ ಅಧಿಕಾರವಾಗಿದೆ’ ಎಂದು ಅನಿಸುತ್ತದೆಯೇ ? – ಸಂಪಾದಕರು

ಪೊಲೀಸರ ಮೇಲೆ ಸುಡುವ ಪಟಾಕಿ ಮತ್ತು ಕಲ್ಲು ತೂರಾಟ ಮಾಡುತ್ತಿರುವ ಮತಾಂಧರು

ಜಬಲಪುರ್ (ಮಧ್ಯಪ್ರದೇಶ) – ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ, ‘ಮಿಲಾದ್-ಉನ್-ನಬಿ’ ಹಬ್ಬವನ್ನು ಆಚರಿಸಲು ಇಲ್ಲಿನ ಸೂಕ್ಷ್ಮ ಪ್ರದೇಶವಾಗಿರುವ ಮೀನು ಮಾರುಕಟ್ಟೆಯಲ್ಲಿ ಕಾರ್ಯಕ್ರಮದ ಆಯೋಜನೆಯನ್ನು ಮಾಡಲಾಗಿತ್ತು. ಈ ಸಮಯದಲ್ಲಿ ಉಪಸ್ಥಿತರಿಗೆ ನಿಗದಿಪಡಿಸಿದ ಮಾರ್ಗದಲ್ಲಿ ಹೋಗಲು ಪೊಲೀಸರು ವಿನಂತಿಸುತ್ತಿದ್ದರು; ಆದರೆ ಇದ್ದಕ್ಕಿದ್ದಂತೆ ಪೊಲೀಸರ ಮೇಲೆ ಕಲ್ಲು ತೂರಾಟ ಆರಂಭಿಸಲಾಯಿತು. ಬೆಂಕಿ ಹಚ್ಚಿದ ಪಟಾಕಿಗಳನ್ನೂ ಎಸೆಯಲಾಯಿತು. ಆದ್ದರಿಂದ ಪೊಲೀಸರು ಉಪಸ್ಥಿತರಿದ್ದ ಮತಾಂಧರ ಮೇಲೆ ಲಾಠಿ ಪ್ರಹಾರ ಮಾಡಿದರು ಮತ್ತು ನಂತರ ಅಶ್ರುವಾಯು ಸಿಡಿಸಿ ಅವರನ್ನು ಚದುರಿಸಿದರು ಎಂದು ಜಬಲಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಬಹುಗುಣಾ ಇವರು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕರ್ಮವೀರ ಶರ್ಮಾ ಇವರು ಪತ್ರಕರ್ತರಿಗೆ ನೀಡಿದ ಮಾಹಿತಿಯಲ್ಲಿ, ಪೊಲೀಸರ ಮೇಲೆ ಸುಡುವ ಪಟಾಕಿ ಮತ್ತು ಕಲ್ಲೆಸೆದವರನ್ನು ಕಂಡುಹಿಡಿಯಲಾಗಿದೆ ಹಾಗೂ ಅವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.