ಕ್ರೈಸ್ತ ದೇಶ ಅಮೇರಿಕಾವು ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಯ ಬಗ್ಗೆ ಖಂಡಿಸುತ್ತದೆ, ಭಾರತವು ಅದನ್ನು ಯಾವಾಗ ಮಾಡಲಿದೆ ? ಮತ್ತು ಹಿಂದೂಗಳ ರಕ್ಷಣೆಗಾಗಿ ಯಾವಾಗ ನೇತೃತ್ವ ವಹಿಸಲಿದೆ ? ಅಥವಾ ಗಾಂಧಿಗಿರಿಯನ್ನೇ ಈಗಲೂ ಅನುಸರಿಸುವುದು ? – ಸಂಪಾದಕರು
ವಾಶಿಂಗ್ಟನ್ (ಅಮೇರಿಕಾ) – ಧಾರ್ಮಿಕಸ್ವಾತಂತ್ರ್ಯವು ಮಾನವನ ಹಕ್ಕು. ಜಗತ್ತಿನಾದ್ಯಂತ ಪ್ರತಿಯೊಬ್ಬ ವ್ಯಕ್ತಿಗೆ ಆತನ ಹಬ್ಬಗಳನ್ನು ಆಚರಿಸುವಾಗ ಸುರಕ್ಷಿತವೆಂದು ಅನಿಸಬೇಕು. ನಾವು ಬಾಂಗ್ಲಾದೇಶದಲ್ಲಿನ ಹಿಂದೂ ಸಮುದಾಯದ ಮೇಲಿನ ದಾಳಿಯ ಘಟನೆಯನ್ನು ಖಂಡಿಸುತ್ತೇವೆ, ಎಂದು ಅಮೇರಿಕಾದ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ.
US condemns attacks on Hindus in Bangladesh https://t.co/hKAdnMC8tl
— IndiaToday (@IndiaToday) October 19, 2021
ಬಾಂಗ್ಲಾದೇಶಿ ಹಿಂದೂ ಸಮುದಾಯದ ಸದಸ್ಯ ಪ್ರಣೇಶ ಹಲದರ ಇವರು ಒಂದು ಮನವಿಯಲ್ಲಿ ‘ಬಾಂಗ್ಲಾದೇಶದಲ್ಲಿನ ಹಿಂದೂಗಳಿಗೆ ಇನ್ನು ಮುಂದೆ ಯಾವುದೇ ಹಾನಿಯಾಗಲಾರದು’, ಅದಕ್ಕಾಗಿ ಅಮೇರಿಕಾವು ಭರವಸೆಯನ್ನು ನೀಡಬೇಕು’, ಎಂದು ಅವರು ಅಮೇರಿಕಾದ ವಿದೇಶಾಂಗ ಸಚಿವಾಲಯದಲ್ಲಿ ಕರೆ ನೀಡಿದರು. (ಹಲದರ ಇವರು ಈ ರೀತಿಯ ಕರೆಯನ್ನು ಭಾರತಕ್ಕೆ ನೀಡದೇ ಅಮೇರಿಕಾಗೆ ಹೇಳಿರುವುದು, ಇದು ಭಾರತಕ್ಕೆ ನಾಚಿಕೆಯ ಸಂಗತಿಯಾಗಿದೆ ! – ಸಂಪಾದಕರು) ಅದೇ ರೀತಿ ಅಲ್ಲಿಯ ಹಿಂದೂಗಳ ಮೇಲಿನ ದಾಳಿಯ ಬಗ್ಗೆ ಪ್ರಸಾರ ಮಾಧ್ಯಮದವರು ಬಹಿರಂಗವಾಗಿ ತಿಳಿಸಬೇಕು, ಎಂದು ಸಹ ಒತ್ತಾಯಿಸಿದ್ದಾರೆ.