ಶ್ರೀ ದುರ್ಗಾದೇವಿ ಪೂಜಾ ಮಂಟಪದ ಮೇಲೆ ದಾಳಿಯು ಪೂರ್ವನಿಯೋಜಿತ ಸಂಚು ! – ಬಾಂಗ್ಲಾದೇಶದ ಗೃಹ ಸಚಿವ ಅಸದುಜ್ಜಮಾಂ ಖಾನ ಕಮಾಲ

* ಒಂದು ವೇಳೆ ಇದು ಪೂರ್ವನಿಯೋಜಿತ ಸಂಚಾಗಿದ್ದರೆ, ಬಾಂಗ್ಲಾದೇಶದ ಪೊಲೀಸರಿಗೆ ಅದು ಮೊದಲೇ ಏಕೆ ತಿಳಿಯಲಿಲ್ಲ ಹಾಗೂ ಈಗ ಗೊತ್ತಾಗಿದ್ದರೆ, ದಾಳಿ ನಡೆಸುವವರ ಮೇಲೆ ಇಲ್ಲಿಯವರೆಗೆ ಏಕೆ ಯಾವುದೇ ರೀತಿಯ ಕಠಿಣ ಕ್ರಮ ಕೈಗೊಳ್ಳಲಿಲ್ಲ ? ಈ ಬಗ್ಗೆ ಖಾನ ಕಮಾಲರವರು ಉತ್ತರ ನೀಡಬೇಕು ! – ಸಂಪಾದಕರು 

* ಅಧಿಕಾರದಲ್ಲಿರುವ ಬಾಂಗ್ಲಾದೇಶಿ ಅವಾಮೀ ಲೀಗ್‍ನ ಮತಾಂಧ ಕಾರ್ಯಕರ್ತರು ಹಿಂದೂಗಳ ಮೇಲೆ ದಾಳಿ ನಡೆಸಲು ಯಾವಾಗಲೂ ಅಗ್ರೇಸರರಾಗಿರುತ್ತಾರೆ, ಎಂಬುದು ಹಲವಾರು ಘಟನೆಗಳಿಂದ ಕಂಡು ಬಂದಿದೆ. ಈ ಬಗ್ಗೆ ಕಮಾಲರವರಿಗೆ ಏನು ಹೇಳುವುದಿದೆ ?- ಸಂಪಾದಕರು 

ಬಾಂಗ್ಲಾದೇಶದ ಗೃಹ ಸಚಿವರಾದ ಅಸದುಜ್ಜಮಾಂ ಖಾನ ಕಮಾಲ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ನವರಾತ್ರ್ಯುತ್ಸವದಲ್ಲಿ ಶ್ರೀ ದುರ್ಗಾದೇವಿ ಪೂಜಾ ಮಂಟಪದ ಮೇಲೆ ಕೆಲವು ಮತಾಂಧರು ತಥಾಕಥಿತ ಈಶನಿಂದನೆಯ ನೆಪವೊಡ್ಡಿ ದಾಳಿ ನಡೆಸಿದರು, ಹಾಗೂ ಇತರ ಸ್ಥಳಗಳಲ್ಲಿ ಹಿಂದೂಗಳ ದೇವಾಲಯದ ಮೇಲೆ ಕೂಡ ದಾಳಿ ನಡೆಸಿದರು. ಈ ದಾಳಿಯು ಆಯೋಜನಾ ಬದ್ಧ ಸಂಚಾಗಿತ್ತು, ಎಂದು ಬಾಂಗ್ಲಾದೇಶದ ಗೃಹ ಸಚಿವರಾದ ಅಸದುಜ್ಜಮಾಂ ಖಾನ ಕಮಾಲ ಇವರು ಮಾಹಿತಿ ನೀಡಿದರು. ಕೊಮಿಲಾ ಜಿಲ್ಲೆಯಲ್ಲಾದ ದಾಳಿಯನ್ನು ಸರಕಾರವು ಗಂಭೀರವಾಗಿ ತೆಗೆದುಕೊಂಡಿದೆ. ‘ಈ ದಾಳಿಗಳು ಬಾಂಗ್ಲಾದೇಶದಲ್ಲಿನ ಧಾರ್ಮಿಕ ಸಮತೋಲನವನ್ನು ಕೆಡಿಸುಮ ಪ್ರಯತ್ನವಾಗಿದೆ’, ಎಂದು ಕೂಡ ಅವರು ಹೇಳಿದರು.

ಗೃಹಸಚಿವ ಅಸದುಜ್ಜಮಾಂ ಖಾನ ಕಮಾಲರವರು ತಮ್ಮ ಮಾತನ್ನು ಮುಂದುವರೆಸುತ್ತಾ ಹೀಗೆಂದರು,

1. ಈ ಘಟನೆ ಕೇವಲ ಕೊಮಿಲಾದಲ್ಲಷ್ಟೇ ಅಲ್ಲದೆ ರಾಮೂ ಹಾಗೂ ನಾಸಿರನಗರದಲ್ಲಿಯೂ ಕೂಡ ನಡೆದಿದೆ. ಈ ರೀತಿಯ ದಾಳಿಗಳನ್ನು ನಡೆಸುವುದರ ಹಿಂದೆ ದೇಶದಲ್ಲಿ ಉದ್ವಿಗ್ನತೆಯನ್ನು ನಿರ್ಮಿಸಿ ಅರಾಜಕತೆಯ ವಾತವರಣವನ್ನು ನಿರ್ಮಿಸುವ ಉದ್ದೇಶವಿತ್ತು.

2. ನಮ್ಮ ದೇಶದವರು ಮತಾಂಧರಲ್ಲ. ನಾವು ಎಂದಿಗೂ ಸಹ ಈ ಸ್ಥಳದಲ್ಲಿ ಭಯೋತ್ಪಾದನೆಗಳಿಗೆ ಪೂರಕವಾಗಿರುವ ವಾತಾವರಣವನ್ನು ನಿರ್ಮಾಣವಾಗಲು ಬಿಡಲಿಲ್ಲ. ಹಿಂದೂ, ಮುಸಲ್ಮಾನ, ಸಿಖ್ಕ ಹಾಗೂ ಇತರ ಧರ್ಮದವರು ಒಟ್ಟಾಗಿ ಬಂದು ಭಯೋತ್ಪಾದನೆ ಘಟನೆಗಳನ್ನು ಎದುರಿಸಿದ್ದಾರೆ. ಈ ದಾಳಿ ಎಂದರೆ ಬಾಂಗ್ಲಾದೇಶದಲ್ಲಿ ವಿವಿಧ ಧಾರ್ಮಿಕ ಸಮೂಹಗಳ ನಡುವೆ ಬಿರುಕು ನಿರ್ಮಿಸುವ ಪ್ರಯತ್ನವಾಗಿದೆ.