ಕೋಲ್ಕತಾ (ಬಂಗಾಲ) – ಟ್ವಿಟರ್ ನಲ್ಲಿ ಸಕ್ರಿಯವಾಗಿರುವ ತೃಣಮೂಲ ಕಾಂಗ್ರೆಸ್ ನಾಯಕರು ಮತ್ತು ಅವರ ಆಪ್ತರಾಗಿರುವ ‘ಪ್ರಸಿದ್ಧ’ ವ್ಯಕ್ತಿಗಳು ಬಾಂಗ್ಲಾದೇಶದ ಹಲವು ಜಿಲ್ಲೆಗಳಲ್ಲಿ ಶ್ರೀ ದುರ್ಗಾದೇವಿಯ ಪೂಜೆಯ ಸಂದರ್ಭದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಯ ವಿರುದ್ಧ ಒಂದು ಸಾಮಾನ್ಯ ನಿಷೇಧವನ್ನೂ ವ್ಯಕ್ತಪಡಿಸಿಲ್ಲ. ತೃಣಮೂಲ ಕಾಂಗ್ರೆಸ್ ಮತ್ತು ವಿಚಾರವಂತರ ಬೂಟಾಟಿಕೆಯ ಬುರಖಾ ಈಗ ತೆರೆದಿದೆ. ನಮಗೆ ಈ ದಾಳಿಯನ್ನು ಖಂಡಿಸಲು ಯಾವುದೇ ಮೇಣದಬತ್ತಿಯ ಪ್ರತಿಭಟನೆ ಮಾಡುತ್ತಿರುವುದು ಕಾಣುತ್ತಿಲ್ಲ. ಅವರ ಅಂಗಡಿಯಲ್ಲಿನ ಮೇಣದ ಬತ್ತಿಗಳು ಖಾಲಿಯಾಗಿವೆಯೇನು ? ಇಂತಹ ಮಾತುಗಳಲ್ಲಿ, ಭಾಜಪದ ವಕ್ತಾರರಾದ ಸಮಿಕ ಭಟ್ಟಾಚಾರ್ಯ ಇವರು ತೃಣಮೂಲ ಕಾಂಗ್ರೆಸ್ ಅನ್ನು ಟೀಕಿಸಿದ್ದಾರೆ. ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಭಟ್ಟಾಚಾರ್ಯರು ತಮ್ಮ ಮಾತನ್ನು ಮುಂದುವರೆಸುತ್ತಾ, ಭಾಜಪವೊಂದೇ ನೆರೆಯ ದೇಶಗಳಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆಯ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿ ವಹಿಸುವ ಪಕ್ಷವಾಗಿದೆ. ನಾವು ಹಿಂದೂಗಳ ಧಾರ್ಮಿಕ ಸ್ಥಳಗಳ ಮೇಲೆ ಜಿಹಾದಿಗಳ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ ಎಂದು ಹೇಳಿದರು. (ಕೇಂದ್ರದ ಭಾಜಪ ಸರಕಾರವು ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ರಕ್ಷಿಸಲು ಪ್ರಯತ್ನಗಳನ್ನು ಮಾಡಬೇಕೆನ್ನುವುದು ಹಿಂದೂಗಳ ಅಪೇಕ್ಷೆಯಾಗಿದೆ ! – ಸಂಪಾದಕರು)