ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಹಿಂದೂಗಳ ಮೇಲೆ ದಾಳಿ : 40 ಜನರಿಗೆ ಗಾಯ

ದೇವಸ್ಥಾನವನ್ನು ಧ್ವಂಸ ಮಾಡಿ ಲೂಟಿ

ವಾಹನಗಳ ದಹನ

ದಾಳಿಗಾಗಿ ನಾಡಬಾಂಬ್‍ನ ಉಪಯೋಗ

* ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದಾಳಿಯನ್ನು ತಡೆಯಲು ಅಲ್ಲಿಯ ಸರಕಾರ ಹಾಗೂ ಪೊಲೀಸರು ವಿಫಲರಾಗಿದ್ದಾರೆ, ಹಾಗೂ ಭಾರತವು ನಿಷ್ಕ್ರೀಯವಾಗಿದೆ, ಇದೇ ನೈಜ ಸ್ಥಿತಿಯಾಗಿದೆ ! – ಸಂಪಾದಕರು 

* ‘ಎಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಇದೆಯೋ, ಅಲ್ಲಿ ಅವರು ಹೊಡೆಸಿಕೊಳ್ಳುತ್ತಿದ್ದಲ್ಲಿ ಆಗ ಎಲ್ಲಿ ಅವರ ಸಂಖ್ಯೆ ಹೆಚ್ಚಿದೆಯೋ ಅಲ್ಲಿ ಅವರು ಕೃತಿ ಮಾಡಿದರೆ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆ ಆಗುವುದು’, ಎಂಬ ರಣತಂತ್ರವನ್ನು ಸ್ವಾತಂತ್ರ್ಯ ವೀರ ಸಾವರಕರರು ಮಂಡಿಸಿದ್ದರು. ಹಿಂದೂಗಳು ಸಹ ಈಗ ಹೀಗೆ ಮಾಡಬೇಕು, ಎಂದು ಬಾಂಗ್ಲಾದೇಶ ಸರಕಾರಕ್ಕೆ ಇಚ್ಛೆ ಇದೆಯೇ ?- ಸಂಪಾದಕರು 

ಚಟಗಾವ (ಬಾಂಗ್ಲಾದೇಶ) – ಅಕ್ಟೋಬರ್ 16 ರಂದು ಇಲ್ಲಿಯ ಫೆನಿ ಗ್ರಾಮದಲ್ಲಿ ಮತಾಂಧರು ಹಿಂದೂಗಳ ಮೇಲೆ ಮತ್ತು ಹಿಂದೂಗಳ ದೇವಸ್ಥಾನಗಳ ಮೇಲೆ ದಾಳಿ ನಡೆಸಿದ ಘಟನೆಯ ಮಾಹಿತಿಯನ್ನು ‘ಬಾಂಗ್ಲಾದೇಶ ಹಿಂದೂ ಯುನಿಟಿ ಕೌನ್ಸಿಲ್’ ಟ್ವೀಟ್ ಮಾಡಿ ನೀಡಿದೆ. ಇದರೊಂದಿಗೆ ಮತಾಂಧರಿಂದ ದಾಳಿಯಾಗುತ್ತಿರುವ ಒಂದು ವಿಡಿಯೋವನ್ನು ಈ ಸಂಘಟನೆಯು ಪೋಸ್ಟ ಮಾಡಿದೆ. ‘ಈ ಘಟನೆಯಿಂದ ಇಲ್ಲಿ ಉದ್ವಿಗ್ನದ ಸ್ಥಿತಿ ಉಂಟಾಗಿದೆ’, ಎಂದೂ ಕೂಡ ಕೌನ್ಸಿಲ್ ಹೇಳಿದೆ.

ಕೌನ್ಸಿಲ್ ಹೇಳಿದ ಪ್ರಕಾರ ಕೆಲವು ದಿನಗಳ ಹಿಂದೆ ನೋವಾಖಾಲಿ ಮತ್ತು ಇತರ ಸ್ಥಳಗಳಲ್ಲಾಗಿದ್ದ ಹಿಂದೂಗಳ ಮೇಲಿನ ದಾಳಿಯ ವಿರುದ್ಧ ಫೆನಿ ಗ್ರಾಮದಲ್ಲಿ ಹಿಂದೂಗಳು ಪ್ರತಿಭಟಿಸುತ್ತಿರುವಾಗ ಮತಾಂಧರು ಅವರ ಮೇಲೆ ದಾಳಿ ಮಾಡಿದರು. ಮತಾಂಧರು ಇಲ್ಲಿಯ ಕಾಳಿ ದೇವಸ್ಥಾನವನ್ನು ಧ್ವಂಸ ಮಾಡುತ್ತಾ ದೇವಸ್ಥಾನದ ಸಂಪತ್ತನ್ನು ಲೂಟಿ ಮಾಡಿದರು. ವಾಹನಗಳಿಗೆ ಬೆಂಕಿ ಹಚ್ಚಿದರು. ಈ ಸಮಯದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು. ಈ ಸಮಯದಲ್ಲಿ 40 ಜನರು ಗಾಯಗೊಂಡರು. ಮತಾಂಧರು ಈ ಸಮಯದಲ್ಲಿ ನಾಡಬಾಂಬ್‍ಅನ್ನೂ ಉಪಯೋಗಿಸಿದರು.