ಕಾಂಚೀಪುರಮ್ (ತಮಿಳುನಾಡು) ಚರ್ಚ್‍ನ ಶಾಲೆಯಲ್ಲಿ ವಿಭೂತಿ ಹಚ್ಚಿ ಮತ್ತು ರುದ್ರಾಕ್ಷಿ ಧರಿಸಿದ ವಿದ್ಯಾರ್ಥಿಗಳಿಗೆ ಕೈಸ್ತ ಶಿಕ್ಷಕನಿಂದ ಥಳಿತ !

ಪೋಷಕರಿಂದ ಮುಖ್ಯಮಂತ್ರಿ ಸ್ಟಾಲಿನ್‍ಗೆ ದೂರು ಹಾಗೂ, ಕ್ರಮಕೈಗೊಳ್ಳುವಂತೆ ಒತ್ತಾಯ

ತಮಿಳುನಾಡಿನಲ್ಲಿ ನಾಸ್ತಿಕವಾದಿಯಾದ ಡಿಎಂಕೆ ಸರಕಾರವಿರುವುದರಿಂದ, ಹಿಂದೂಗಳಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ. ಇಂತಹ ಘಟನೆಗಳನ್ನು ಶಾಶ್ವತವಾಗಿ ತಡೆಗಟ್ಟಲು, ಎಲ್ಲೆಡೆಯ ಹಿಂದೂಗಳು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಟಿಬದ್ಧರಾಗಬೇಕು ! – ಸಂಪಾದಕರು 

ಸಾಂಕೇತಿಕ ಛಾಯಾಚಿತ್ರ

ಕಾಂಚೀಪುರಮ್ (ತಮಿಳುನಾಡು) – ಕಾಂಚಿಪುರಮ್‍ನಲ್ಲಿ 10 ನೇ ತರಗತಿಯಲ್ಲಿ ಓದುತ್ತಿರುವ ಕಿರುಬಾಕರಣ ಮತ್ತು ಕಿರುಬಾನಂದನ ಎಂಬ ವಿದ್ಯಾರ್ಥಿಗಳು ಕುತ್ತಿಗೆಗೆ ರುದ್ರಾಕ್ಷಿ ಧರಿಸಿದರೆಂದು ಮತ್ತು ಹಣೆಗೆ ವಿಭೂತಿ ಹಚ್ಚಿದ್ದಾರೆಂದು ಕ್ರೈಸ್ತ ಶಿಕ್ಷಕರಾದ ಜಾಯಸನ್ ಅವರನ್ನು ಬೈದು ಅವಮಾನಿಸಿ ಥಳಿಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳ ಪೋಷಕರು ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆದು ಕ್ರಮಕೈಗೊಳ್ಳಲು ಆಗ್ರಹಿಸಿದ್ದಾರೆ. ಈ ಘಟನೆಯು ಚರ್ಚ್‍ನಿಂದ ನಡೆಸಲಾಗುತ್ತಿರುವ ಸರಕಾರೀ ಅನುದಾನಿತ ಶಾಲೆಯಾಗಿರುವ ಆಂಡರ್ಸನ್ ಪ್ರೌಢ ಮಾಧ್ಯಮಿಕ ಶಾಲೆಯಲ್ಲಿ ನಡೆದಿದೆ. (ಸರಕಾರೀ ಅನುದಾನದಿಂದ ನಡೆಯುತ್ತಿರುವ ಇಂತಹ ಶಾಲೆಗಳಿಗೆ ನೀಡುವ ಸಹಾಯಧನವನ್ನು ಸರಕಾರ ರದ್ದುಗೊಳಿಸಲು ಹಿಂದುತ್ವನಿಷ್ಠ ಸಂಘಟನೆಗಳು ನೇತೃತ್ವ ವಹಿಸಬೇಕು ! – ಸಂಪಾದಕರು) ಜಾಯಸನ್ ಇವರು 2017 ರಲ್ಲಿಯೂ ಇದೇ ರೀತಿ ಹಿಂದೂ ವಿದ್ಯಾರ್ಥಿಗಳನ್ನು ಥಳಿಸಿದ್ದರು. ಆಗ ಅವರನ್ನು ಬಂಧಿಸಲಾಗಿತ್ತು. (ಒಂದು ಸಲ ಬಂಧನವಾಗಿದ್ದರೂ ಶಿಕ್ಷಕನ ಮಾನಸಿಕತೆಯಲ್ಲಿ ಏನೂ ಬದಲಾವಣೆಯಾಗಲಿಲ್ಲ. ಅಲ್ಲದೆ, ಆತನನ್ನು ಶಾಲೆಯಿಂದಲೂ ಹೊರಹಾಕಿರಲಿಲ್ಲ. ಇದರಿಂದ ಚರ್ಚ್ ನಡೆಸುವ ಶಾಲೆಗಳಲ್ಲಿ ಹಿಂದೂಗಳ ಧಾರ್ಮಿಕ ಪರಂಪರೆಗಳನ್ನು ವಿರೋಧಿಸಲು ಈ ಶಿಕ್ಷಕರಿಗೆ ಹೇಳಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ! ಆದ್ದರಿಂದ, ಶಿಕ್ಷಣಕ್ಕಾಗಿ ಹಿಂದೂಗಳು ತಮ್ಮ ಮಕ್ಕಳನ್ನು ಇಂತಹ ಶಾಲೆಗಳಿಗೆ ಕಳುಹಿಸದಿರುವುದೇ ಒಳಿತು ! – ಸಂಪಾದಕರು)