ನಮ್ಮ ಸರಕಾರವನ್ನು ದುರ್ಬಲಗೊಳಿಸಲು ಯಾರೂ ಪ್ರಯತ್ನಿಸಬಾರದು ! – ತಾಲಿಬಾನ್‍ನಿಂದ ಅಮೇರಿಕಾಕ್ಕೆ ಪರೋಕ್ಷ ಎಚ್ಚರಿಕೆ

ಸಣ್ಣ ತಾಲಿಬಾನ ಶಕ್ತಿಶಾಲಿ ಅಮೇರಿಕಾಕ್ಕೆ ಎಚ್ಚರಿಕೆ ನೀಡುತ್ತದೆ ಮತ್ತು ಅಮೇರಿಕಾ ಸುಮ್ಮನಾಗುತ್ತದೆ, ಇದನ್ನು ನೋಡಿದರೆ ಭಾರತ ಮತ್ತು ಭಾರತೀಯ ಸೈನ್ಯ ಇವರ ಶೌರ್ಯ ಮತ್ತು ಪ್ರಾಮುಖ್ಯತೆಯನ್ನು ಇನ್ನಷ್ಟು ಒತ್ತಿಹೇಳಬೇಕಾಗಿದೆ !- ಸಂಪಾದಕರು 

ಕಾಬುಲ(ಅಫ್ಘಾನಿಸ್ತಾನ) – ಅಫ್ಘಾನಿಸ್ತಾನದ ಜೊತೆ ಉತ್ತಮ ಸಂಬಂಧ ಇಡುವುದು, ಇದು ಎಲ್ಲರಿಗೂ ಒಳ್ಳೆಯದೇ ಆಗಿದೆ. ಅಫ್ಘಾನಿಸ್ತಾನದ ಪ್ರಸ್ತುತ ಸರಕಾರವನ್ನು ದುರ್ಬಲಗೊಳಿಸಲು ಯಾರು ಪ್ರಯತ್ನಿಸಬಾರದು; ಇಲ್ಲದಿದ್ದರೆ ಅದರಿಂದ ಸಂಬಂಧಪಟ್ಟ ದೇಶದ ಜನರಿಗೆ ಅಫಘಾನಿಸ್ತಾನದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸುವುವು, ಎಂಬ ಶಬ್ದಗಳಲ್ಲಿ ತಾಲಿಬಾನ್ ಅಮೇರಿಕಾಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದೆ. ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದ ಬಳಿಕ ಅಫ್ಘಾನಿಸ್ತಾನದಿಂದ ಅಮೇರಿಕಾ ಸೈನ್ಯ ಹಿಂತಿರುಗಿತ್ತು. ಅದರ ನಂತರ ಇದೇ ಮೊದಲ ಬಾರಿ ತಾಲಿಬಾನ್ ಮತ್ತು ಅಮೇರಿಕಾ ನಡುವೆ ಅಕ್ಟೋಬರ್ 9 ರಂದು ಕತಾರಿನ ರಾಜಧಾನಿ ದೋಹಾದಲ್ಲಿ ಚರ್ಚೆ ನಡೆಯಿತು. ಈ ಚರ್ಚೆಯ ಸಮಯದಲ್ಲಿ ತಾಲಿಬಾನ್‍ನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕೀ ಇವರು ಮೇಲಿನಂತೆ ಎಚ್ಚರಿಕೆ ನೀಡಿದರು. ‘ಎರಡು ದೇಶದ ಪರಸ್ಪರರಲ್ಲಿ ಸಂಬಂಧ ಚೆನ್ನಾಗಿರಲಿದೆ’, ಎಂಬ ಆಶ್ವಾಸನೆಯನ್ನು ಅಮೇರಿಕಾದಿಂದ ನೀಡಲಾಗುತ್ತಿದೆ.