ಉತ್ತರಪ್ರದೇಶದ ಎಟಾದಲ್ಲಿ ದೇವಸ್ಥಾನದ ಅರ್ಚಕರನ್ನು ಹತ್ಯೆಗೈದ ಮತಾಂಧ!

ಇತರ ರಾಜ್ಯದ ತುಲನೆಯಲ್ಲಿ ಭಾಜಪದ ರಾಜ್ಯವಾಗಿರುವ ಉತ್ತರಪ್ರದೇಶದಲ್ಲಿ ದೇವಸ್ಥಾನದ ಅರ್ಚಕರು, ಸಾಧು, ಸಂತರು, ಮಹಂತರು ಮುಂತಾದವರ ಹತ್ಯೆಗಳು ನಿರಂತರವಾಗಿ ನಡೆಯುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಎಟಾ (ಉತ್ತರಪ್ರದೇಶ) – ಇಲ್ಲಿಯ ನಗಲಾ ಜಗರುಪ ಗ್ರಾಮದಲ್ಲಿಯ ದೇವಸ್ಥಾನದ ೫೨ ವರ್ಷದ ಅರ್ಚಕ ಕೃಪಾಲ ಸಿಂಹ ಇವರನ್ನು ಕೊಡಲಿಯಿಂದ ಹತ್ಯೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ರಜ್ಜಾಕ್ ಎಂಬ ಯುವಕನನ್ನು ಬಂಧಿಸಿದ್ದಾರೆ. ಅರ್ಚಕರಾದ ಕೃಪಾಲ ಸಿಂಹ ಇವರು ೧ ತಿಂಗಳ ಹಿಂದೆ ದೇವಸ್ಥಾನದಲ್ಲಿ ಅರ್ಚಕರಾಗಿ ವಾಸ್ತವ್ಯಕ್ಕೆ ಬಂದಿದ್ದರು. ಈ ಹತ್ಯೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ರಜ್ಜಾಕ ಮತ್ತು ಕೃಪಾಲ ಸಿಂಹ ಇವರ ಸಂಬಂಧ ಉತ್ತಮವಾಗಿತ್ತು. ಅವರು ಒಟ್ಟಾಗಿ ಊಟವನ್ನೂ ಸಹ ಮಾಡುತ್ತಿದ್ದರು. ಘಟನೆ ನಡೆಯುವ ಮುನ್ನ ಇಬ್ಬರು ಒಟ್ಟಾಗಿ ಊಟ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಘಟನೆಯ ನಂತರ ರಜ್ಜಾಕ್ ನಶೆಯ ಸ್ಥಿತಿಯಲ್ಲಿ ಪೊಲೀಸರಿಗೆ ಸಿಕ್ಕಿದ್ದಾನೆ.