ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಭಯಭೀತರಾಗಿ ಮತ್ತೊಮ್ಮೆ ಪಲಾಯನದ ಸಿದ್ಧತೆಯಲ್ಲಿರುವ ಹಿಂದೂಗಳು !

ಮೂರು ದಶಕಗಳ ನಂತರವೂ ಕಾಶ್ಮೀರದಲ್ಲಿ ಭಯೋತ್ಪಾದನೆಯು ಮುಂದುವರಿದಿದೆ, ಇದು ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರಿಗೆ ನಾಚಿಕೆಗೇಡಿನ ಸಂಗತಿಯಾಗಿದೆ ! ಭಾರತದಲ್ಲಿನ ಭಯೋತ್ಪಾದನೆಯ ಸಮಸ್ಯೆಯನ್ನು ಕೇವಲ ಹಿಂದೂ ರಾಷ್ಟ್ರದ ಧರ್ಮಚರಣಿ ಆಡಳಿತಗಾರರು ಮಾತ್ರ ಶಾಶ್ವತವಾಗಿ ಪರಿಹರಿಸಬಲ್ಲರು ಎಂಬುದನ್ನು ಗಮನದಲ್ಲಿಟ್ಟುಕೊಂಡು, ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಟಿಬದ್ಧರಾಗಿ !
ದೇಶದಲ್ಲಿ ಎಲ್ಲಿಯಾದರೂ ಅಲ್ಪಸಂಖ್ಯಾತರ ಮೇಲೆ ಹಲ್ಲೆಯಾದೊಡನೆ ಕೂಗಾಡುವ ದೇಶದ ಜನಪ್ರತಿನಿಧಿಗಳು ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಹಿಂದೂಗಳನ್ನು ಮತ್ತು ಸಿಖ್ಖರನ್ನು ಹತ್ಯೆ ಮಾಡುತ್ತಿರುವಾಗ, ಅದೇ ರೀತಿ ಕೆಲವರು ಭಯದಿಂದ ಪಲಾಯನದ ತಯಾರಿ ನಡೆಸುತ್ತಿರುವಾಗ ಚಕಾರವನ್ನೂ ಎತ್ತುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಶ್ರೀನಗರ (ಜಮ್ಮು – ಕಾಶ್ಮೀರ) – ಕಳೆದ ಕೆಲವು ದಿನಗಳಿಂದ ಕಾಶ್ಮೀರದಲ್ಲಿ ಹಿಂದೂಗಳ ಮೇಲಾಗುತ್ತಿರುವ ಭಯೋತ್ಪಾದಕರ ದಾಳಿಯಿಂದ ಕಾಶ್ಮೀರದ ಕಣಿವೆಯಲ್ಲಿರುವ ಅಳಿದುಳಿದ ಹಿಂದುಗಳು ಸಹ ಮತ್ತೊಮ್ಮೆ ಪಲಾಯನದ ಸಿದ್ಧತೆಯನ್ನು ನಡೆಸಿದ್ದಾರೆ. ಶ್ರೀನಗರದಲ್ಲಿ ಜಿಹಾದಿ ಭಯೋತ್ಪಾದಕರು ಕಳೆದ ೪ ದಿನಗಳಲ್ಲಿ ಇಬ್ಬರು ಹಿಂದೂಗಳನ್ನು ಮತ್ತು ಇಬ್ಬರ ಸಿಖ್ಖರ ಹತ್ಯೆ ಮಾಡಿದ ನಂತರ, ಇಲ್ಲಿ ಮತ್ತೆ ಹಿಂದೂಗಳು ಮತ್ತು ಸಿಖ್ಖರಲ್ಲಿ ಭಯದ ವಾತಾವರಣವು ಉದ್ಭವಿಸಿದೆ. ಶೇಖಪುರದಲ್ಲಿರುವ ಹಿಂದೂ ಕುಟುಂಬಗಳು ಸ್ಥಳಾಂತರಗೊಳ್ಳಲು ನಿರ್ಧರಿಸಿವೆ.

೧. ರಾಜ್ಯದ ಬಡಗಾಮ ಜಿಲ್ಲೆಯ ಶೇಖಪುರಾದಲ್ಲಿ ೨೦೦೩ ರಲ್ಲಿ ಹಿಂದೂಗಳನ್ನು ಪುನರ್ವಸತಿ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು; ಆದರೆ ಈಗ ಈ ದಾಳಿಯಿಂದಾಗಿ ನಮ್ಮ ಮನೆಯಿಂದ ಹೊರಗೆ ಕಾಲಿಡಲು ಸಹ ಧೈರ್ಯವಿಲ್ಲ ಎಂದು ಹಿಂದೂಗಳು ಹೇಳಿದರು.

೨. ‘ಕಾಶ್ಮೀರಿ ಪಂಡಿತ ಸಂಘರ್ಷ ಸಮಿತಿ’ಯ ಅಧ್ಯಕ್ಷ ಸಂಜಯ್ ಟಿಕು ಇವರು, ಭಯೋತ್ಪಾದಕರ ಭಯದಿಂದ ಬುಡಗಾಮ್, ಅನಂತನಾಗ ಮತ್ತು ಪುಲ್ವಾಮ ಜಿಲ್ಲೆಗಳಲ್ಲಿನ ಅಂದಾಜು ೫,೦೦೦ ಕಾಶ್ಮೀರಿ ಹಿಂದೂಗಳು ಪಲಾಯನದ ಸಿದ್ಧತೆ ನಡೆಸಿದ್ದಾರೆ ಎಂದು ಹೇಳಿದರು.