ಸರಕಾರದಿಂದ ಕಾರ್ಯಕ್ರಮಕ್ಕೆ ಅನುಮತಿ ಸಿಗದ ಕಾರಣ ಕಾರ್ಯಕ್ರಮದ ಸ್ಥಳ ಬದಲಾಯಿಸಿದ ಆಯೋಜಕರು ಹಿಂದೂಗಳಲ್ಲಿರುವ ಧರ್ಮಶಿಕ್ಷಣದ ಅಭಾವದಿಂದ ಅವರು ಜಗಜ್ಜನನಿ ದುರ್ಗಾದೇವಿಯ ಉಪಾಸನೆ ಮಾಡುವುದನ್ನು ಬಿಟ್ಟು ಮಹಿಷಾಸುರನನ್ನು ಹಾಡಿಹೊಗಳುತ್ತಾರೆ. ಈ ವಿಕೃತಿಯನ್ನು ಕಾನೂನಿನ ರೀತ್ಯಾ ವಿರೋಧಿಸುವುದರ ಜೊತೆಗೆ ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕ ! – ಸಂಪಾದಕರು
ಮೈಸೂರು – ಇಲ್ಲಿ ಅಕ್ಟೋಬರ 5 ರಂದು ಹಿಂದೂದ್ವೇಷಿಗಳು ಮಹಿಷಾಸುರನ ಮೆರವಣಿಗೆ ನಡೆಸಿ ‘ಮಹಿಷ ದಸರೆ’ಯನ್ನು ಆರಂಭಿಸಿದರು. ಈ ಕಾರ್ಯಕ್ರಮಕ್ಕೆ ಬಸಪದ ನಾಯಕ ಮತ್ತು ಮಾಜಿ ಮಹಾಪೌರ ಆರ್. ಪುರುಷೋತ್ತಮ ಇವರು ಉಪಸ್ಥಿತರಿದ್ದರು. ಚಾಮುಂಡಿ ಬೆಟ್ಟದ ಮೇಲೆ ಅಸುರ ರಾಜ ಮಹಿಷಾಸುರನ ಪ್ರತಿಮೆಯ ಹತ್ತಿರ ಮಹಿಷ ದಸರಾವನ್ನು ಆಯೋಜಿಸಲಾಗಿತ್ತು; ಆದರೆ ಜಿಲ್ಲಾಡಳಿತವು ಅನುಮತಿಯನ್ನು ನಿರಾಕರಿಸಿದ್ದರಿಂದ ಉತ್ಸವ ಸಮಿತಿಯು ಕಾರ್ಯಕ್ರಮದ ಸ್ಥಳವನ್ನು ಅಂಬೇಡಕರ ಪಾರ್ಕ್‍ಗೆ ಸ್ಥಳಾಂತರಿಸಿದೆ.
ಆ ಸಮಯದಲ್ಲಿ ಮಾಜಿ ಮಹಾಪೌರ ಅರ್. ಪುರುಷೋತ್ತಮ ಇವರು, ಸಂವಿಧಾನವು ಪ್ರತಿಯೊಬ್ಬ ನಾಗರಿಕರಿಗೆ ಧಾರ್ಮಿಕ ಅಧಿಕಾರದ ಅನುಮತಿ ನೀಡಿರುವಾಗ ಉಪಾಯುಕ್ತರು ನಮಗೆ ಚಾಮುಂಡಿ ಬೆಟ್ಟದ ಮೇಲೆ ಮಹಿಷ ದಸರಾ ಆಚರಿಸಲು ಇದುವರೆಗೂ ಅನುಮತಿ ನೀಡಿಲ್ಲ. ನಾವು ನಿರಾಶರಾಗದೆ, ಸದ್ಯದಲ್ಲೇ ಕಾನೂನಿನ ಮಾರ್ಗ ಅವಲಂಬಿಸುವವರಿದ್ದೇವೆ. ಮುಂದಿನ ಸರಕಾರವು ತಾನಾಗಿ ಮಹಿಷ ದಸರಾದ ಆಯೋಜನೆ ಮಾಡುವುದು ಎಂಬ ಆಶಿಸುತ್ತೇವೆ ಎಂದರು. (ಹಗಲುಗನಸು ಕಾಣುವ ಮಾಜಿ ಮಹಾಪೌರ ಆರ್. ಪುರುಷೋತ್ತಮ ! – ಸಂಪಾದಕರು)
Prof. Maheshchandra Guru has warned of filing a PIL in the Court against carrying of idol of the Goddess Chamundeshwari during the Dasara procession.https://t.co/YtedCIFwW1
— Star Of Mysore (@Star_Of_Mysore) October 7, 2021