ಪ್ರಿಯಾಂಕಾ ವಾದ್ರಾ ರವರು ನವರಾತ್ರಿ ವ್ರತ ಮಾಡಲಿದ್ದಾರೆ ! – ಕಾಂಗ್ರೆಸ್‌ ನೀಡಿದ ಮಾಹಿತಿ

ರಾಹುಲ ಗಾಂಧಿಯವರು ಈ ಹಿಂದೆ ನಡೆದ ಚುನಾವಣೆಯ ಸಮಯದಲ್ಲಿ ದೇವಾಲಯಕ್ಕೆ ಹೋಗಿ ಪೂಜೆ ಅರ್ಚನೆ ಮಾಡಿದ್ದರೂ ಹಿಂದೂಗಳು ಅವರಿಗೆ ಮಹತ್ವ ನೀಡಲಿಲ್ಲ;  ಏಕೆಂದರೆ ಅದು ಕೇವಲ ಅವರ ಬೂಟಾಟಿಕೆಯಾಗಿತ್ತು, ಎಂದು ಹಿಂದೂಗಳಿಗೆ ತಿಳಿದಿತ್ತು. ಉತ್ತರಪ್ರದೇಶದಲ್ಲಿ ಚುನಾವಣೆಯು ಹತ್ತಿರ ಬಂದಿರುವುದರಿಂದ ಈಗ ಪ್ರಿಯಾಂಕಾ ವಾದ್ರಾ ರವರು ಅದನ್ನೇ ಮಾಡಲು ನೋಡುತ್ತಿದ್ದಾರೆ. ಆ ರೀತಿ ಮಾಡುವುದಕ್ಕಿಂತ ಕಾಂಗ್ರೆಸ್‌ ಹಿಂದೂ ಹಿತಕ್ಕಾಗಿ ಮೊದಲಿನಿಂದಲೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿರುತ್ತಿದ್ದರೆ ಅಥವಾ ಕಡಿಮೆಪಕ್ಷ ಈಗಲಾದರೂ ಆ ರೀತಿ  ಪ್ರಯತ್ನಿಸಿದರೆ ಪಕ್ಷಕ್ಕಾದರೂ ಅಲ್ಪಸ್ವಲ್ಪ ಒಳ್ಳೆಯ ದಿನಗಳು ಬರಬಹುದು !- ಸಂಪಾದಕರು

ನವ ದೆಹಲಿ – ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾದ ಪ್ರಿಯಾಂಕಾ ವಾದ್ರಾರವರು ಈ ವರ್ಷ ನವರಾತ್ರಿಯ ವ್ರತ ಮಾಡಲಿದ್ದಾರೆ, ಎಂದು ಕಾಂಗ್ರೆಸ್ ಪಕ್ಷವು ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ನೀಡಿದೆ. ಆ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ವಾದ್ರಾರನ್ನು ಪರೋಕ್ಷವಾಗಿ ಟೀಕಿಸಲಾಗುತ್ತಿದೆ.

ಸಾಮಾಜಿಕ ಮಧ್ಯಮಗಳಲ್ಲಿ ಸಕ್ರಿಯವಾಗಿರುವ ಆಶುತೋಷ ಝಾ ಎಂಬ ವ್ಯಕ್ತಿಯು ಆ ವ್ರತದ ಸಮಯದಲ್ಲಿ ಪ್ರಿಯಾಂಕಾ ವಾದ್ರಾರವರು ನಿರ್ಜಲಾ ಪದ್ಧತಿಯಂತೆ ಮಾಡುವರೇ ಅಥವಾ ಅವರು ಫಲಾಹಾರ ಮಾಡುವರೇ?  ಒಂದು ವೇಳೆ ಫಲಾಹಾರ ಮಾಡುವವರಿದ್ದರೆ,  ಯಾವ ಹಣ್ಣನ್ನು ಸೇವಿಸಲಿದ್ದಾರೆ?  ಎಷ್ಟು ಸೇವಿಸಲಿದ್ದಾರೆ?  ಅದನ್ನು ಹಚ್ಚಿ ತಿನ್ನುವರೇ ಅಥವಾ ಅದನ್ನು ಹಾಗೆಯೇ ತಿನ್ನುವರೇ ಹಾಗೂ ಎಷ್ಟು ಬಾರಿ ಅಗೆದು ತಿನ್ನಲಿದ್ದಾರೆ? ಎಂಬ ಎಲ್ಲಾ ಮಾಹಿತಿಯನ್ನು ಅವರು ಹೇಳಬೇಕು;  ಏಕೆಂದರೆ ಪ್ರಚಾರ ಮಾಧ್ಯಮಗಳಿಗೆ ಅದರಲ್ಲಿ ಹೆಚ್ಚು ಆಸಕ್ತಿಯಿರುತ್ತದೆ. ಜೊತೆಗೆ ಲೋಕಸೇವಾ ಪರೀಕ್ಷಾ ಆಯೋಗದ ಪರೀಕ್ಷೆಯಲ್ಲಿ ಕೂಡ ಈ ಪ್ರಶ್ನೆಯನ್ನು ವಿಚಾರಿಸಲಾಗುವುದು ಎಂದು ಬರೆದಿದ್ದಾರೆ.