ಪಂಜಾಬ್ ಗಡಿಯಲ್ಲಿರುವ ಗುರುದಾಸಪುರ ಹಾಗೂ ಪಠಾಣಕೋಟದಲ್ಲಿ ಒಳನುಸುಳಿದ ಪಾಕಿಸ್ತಾನಿ ಡ್ರೋನ್

ಗುಂಡು ಹಾರಿಸಿ ಹಿಮ್ಮೆಟ್ಟಿಸಿದ ಸೇನೆ

ಭಾರತದ ಬಳಿ ಇನ್ನೂ ಡ್ರೋನ್‍ವಿರೋಧಿ ವ್ಯವಸ್ಥೆ ಇಲ್ಲದಿರುವುದರಿಂದ ಪಾಕ್‍ನ ಕುತಂತ್ರ ಮುಂದುವರಿದಿದೆ. ಭಾರತವು ರಕ್ಷಣಾಕ್ಷೇತ್ರದಲ್ಲಿ ಇನ್ನೂ ಹಿಂದುಳಿದಿದೆ ಎಂಬುದು ಗಮನಕ್ಕೆ ಬರುತ್ತದೆ ! – ಸಂಪಾದಕರು

ಪಠಾಣಕೋಟ (ಪಂಜಾಬ) – ಪಂಜಾಬಿನ ಗುರದಾಸಪುರ ಹಾಗೂ ಪಠಾಣಕೋಟದಲ್ಲಿ ಅಕ್ಟೋಬರ್ 5 ರಂದು ರಾತ್ರಿ ಪಾಕ್‍ನ ಡ್ರೋನ್ ಒಳನುಗ್ಗಿರುವುದು ತಿಳಿದು ಬಂದಿದೆ. ಗುರುದಾಸಪುರದಲ್ಲಿ ಗಡಿ ಭದ್ರತಾ ಪಡೆಯ ಸೈನಿಕರು ಆ ಡ್ರೋನ್‍ನ ಮೇಲೆ ಗುಂಡು ಹಾರಿಸಿ ಅದನ್ನು ಅಲ್ಲಿಂದ ಓಡಿಸಿದರು. ಪಾಠಣಕೋಟನಲ್ಲಿ ಭಾರತ-ಪಾಕ್ ಗಡಿಯಲ್ಲಿರುವ ಬಮಿಯಾಲ ಸೆಕ್ಟರ್‍ನಲ್ಲಿನ ಗಡಿ ಸುರಕ್ಷಾದಳದ ಚೌಕಿಯ ಬಳಿ ಆ ಡ್ರೋನ್ ಕಾಣಿಸಿತು. ಸೈನಿಕರು ಅದರ ಮೇಲೆ ಗುಂಡು ಹಾರಾಟ ಮಾಡಿದ ಬಳಿಕ ಅದು ಕಾಣೆಯಾಯಿತು. ಅದು ಹಿಂದಕ್ಕೆ ಹೋಯಿತೇ ಅಥವಾ ಕೆಳಗೆ ಬಿದ್ದಿತೇ ?’, ಎಂಬುದು ಇನ್ನೂ ತಿಳಿಯಲಿಲ್ಲ. ಪಾಕಿಸ್ತಾನ ಡ್ರೋನ್‍ನ ಮೂಲಕ ಪಂಜಾಬ್‍ನಲ್ಲಿ ಖಲಿಸ್ತಾನ ಉಗ್ರರಿಗೆ ಶಸ್ತ್ರಾಸ್ತ್ರ ಕಳುಹಿಸುತ್ತಿರುವುದಾಗಿ ಈ ಹಿಂದೆ ಬೆಳಕಿಗೆ ಬಂದಿತ್ತು.