* ಜಾತ್ಯಾತೀತವಾದಿಗಳು ಮತ್ತು ಪುರೋ(ಅಧೋ)ಗಾಮಿಗಳು ಯಾರಾದರೂ ಹಿಂದೂ ದೇವತೆಗಳ ಅಥವಾ ಶ್ರದ್ಧಾಸ್ಥಾನಗಳ ಅವಮಾನ ಮಾಡಿದರೆ ‘ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿರುವುದರಿಂದ ಯಾರು ಏನು ಬೇಕಾದರೂ ಹೇಳಬಹುದು’ ಎಂದು ತಕ್ಷಣ ಹೇಳುತ್ತಾರೆ. ಹೀಗಿರುವಾಗ ಯಾರಾದರೂ ನಾಥುರಾಮ ಗೋಡ್ಸೆಯವರ ಬಗ್ಗೆ ಏನಾದರೂ ಹೇಳಿದರೆ ಅದರ ಬಗ್ಗೆ ಯಾರಿಗೂ ಕೆಟ್ಟದೆನಿಸುವ ಅವಶ್ಯಕತೆಯೇನಿದೆ ! – ಸಂಪಾದಕರು * ಮೋಹನದಾಸ ಗಾಂಧಿಯವರ ಅನೇಕ ನಿರ್ಣಯಗಳಿಂದಾಗಿ ಮತ್ತು ಮುಸಲ್ಮಾನರ ಓಲೈಕೆಯಿಂದಾಗಿ ದೇಶದ ಅಂದರೆ ಬದಲಾಗಿ ಹಿಂದೂಗಳಿಗೆ ಅಪಾರ ಹಾನಿಯಾಯಿತು ಎಂದು ದೇಶದಲ್ಲಿ ಹೆಚ್ಚಿನ ಜನರ ವಿಚಾರವಿದೆ. ಭಾರತದಲ್ಲಿ ಪ್ರಜಾಪ್ರಭುತ್ವವಿರುವಾಗ ಅವರ ವಿಚಾರಗಳ ಬಗ್ಗೆಯೂ ವಿಚಾರ ಮಾಡುವುದು ಅವಶ್ಯಕವಾಗಿದೆ ಎಂಬುದನ್ನು ವರುಣ ಗಾಂಧಿಯವರು ಗಮನದಲ್ಲಿಟ್ಟುಕೊಳ್ಳಬೇಕು ! – ಸಂಪಾದಕರು |
ನವದೆಹಲಿ – ಅಕ್ಟೋಬರ್ 2 ರಂದು ಮೋಹನದಾಸ ಗಾಂಧಿಯವರ ಜಯಂತಿಯ ನಿಮಿತ್ತ ಸಾಮಾಜಿಕ ಮಾಧ್ಯಮಗಳಿಂದ ‘ನಾಥುರಾಮ ಗೋಡ್ಸೆ’ಎಂಬ ಹೆಸರಿನ ‘ಟ್ರೆಂಡ್’ (ಒಂದು ವಿಷಯದ ಮೇಲೆ ಮಾಡಿಸಲಾದ ಚರ್ಚೆ) ಮಾಡಲಾಗಿತ್ತು. ಇದನ್ನು ಭಾಜಪದ ಸಂಸದ ವರುಣ ಗಾಂಧಿಯವರು ಟೀಕಿಸಿದ್ದಾರೆ. ‘ಇಂತಹ ಜವಾಬ್ದಾರಿರಹಿತ ವರ್ತನೆಯಿಂದ ದೇಶದ ಮಾನ ಕಳೆಯಬೇಡಿ. ಇಂತಹವರನ್ನು ಬಹಿರಂಗವಾಗಿ ಅವಮಾನಿಸಬೇಕು’ ಎಂದು ವರುಣ ಗಾಂಧಿಯವರು ಹೇಳಿದ್ದಾರೆ.
Varun Gandhi slams those glorifying Nathuram Godse
Read: https://t.co/z0cmh6oDhK pic.twitter.com/6RQUp01Vay
— The Times Of India (@timesofindia) October 2, 2021
ವರುಣ ಗಾಂಧಿಯವರು ‘ಭಾರತದಲ್ಲಿ ಯಾವಾಗಲೂ ಆಧ್ಯಾತ್ಮಿಕ ಮಹಾಶಕ್ತಿ ಇದೆ. ಗಾಂಧೀಜಿಯವರೇ ನಮ್ಮ ದೇಶದ ಆಧ್ಯಾತ್ಮಿಕ ಅಡಿಪಾಯವನ್ನು ಸದೃಢಗೊಳಿಸಿದರು ಮತ್ತು ನಮಗೆ ನೈತಿಕ ಅಧಿಕಾರವನ್ನು ನೀಡಿದರು, ಇಂದು ಇದು ನಮ್ಮ ಅತ್ಯಂತ ದೊಡ್ಡ ಶಕ್ತಿಯಾಗಿದೆ. (ಗಾಂಧಿಯಿಂದಾಗಿ ಅಲ್ಲ, ಬದಲಾಗಿ ಋಷಿಮುನಿ, ಸಂತರಿಂದಾಗಿ ಭಾರತವು ಯಾವಾಗಲೂ ಅಧ್ಯಾತ್ಮಿಕ ಗುರುವಾಗಿದೆ, ಎಂಬುದನ್ನು ಗಾಂಧಿಯವರು ಗಮನದಲ್ಲಿಟ್ಟುಕೊಳ್ಳಬೇಕು. – ಸಂಪಾದಕರು) ಗಾಂಧಿ ಮತ್ತು ಅವರ ಆದರ್ಶದಿಂದಾಗಿ ಅಂತರಾಷ್ಟ್ರೀಯ ಸ್ತರದಲ್ಲಿ ಭಾರತಕ್ಕೆ ದೊರೆತ ಸನ್ಮಾನವನ್ನು ಮರೆಯಲು ಸಾಧ್ಯವಿಲ್ಲ. ‘ಗೋಡ್ಸೆ ಜಿಂದಾಬಾದ’ ಎಂದು ಟ್ವೀಟ್ ಮಾಡುವವರ ಹೆಸರುಗಳನ್ನು ಪಡೆದು ಬಹಿರಂಗವಾಗಿ ಅವರನ್ನು ಅವಮಾನಿಸಬೇಕು. ಇದು ಮೂರ್ಖತನವಾಗಿದೆ ಇದಕ್ಕೆ ಮುಖ್ಯ ಪ್ರವಾಹದಲ್ಲಿ ಸ್ಥಾನ ನೀಡಬಾರದು’ ಎಂದು ಹೇಳಿದ್ದಾರೆ.