ಜಮಶೆದಪುರ(ಜಾರ್ಖಂಡ)ದಲ್ಲಿ ಭೂತಬಾಧೆಯ ಗುಮಾನಿಯಿಂದ ಮೌಲ್ವಿಯು ಕಟ್ಟಿಹಾಕಿದ ಹುಡುಗಿಯನ್ನು ಬಿಡುಗಡೆ ಮಾಡಿದ ವಿಹಿಂಪ !

(ಎಡದಲ್ಲಿ) ಕಬ್ಬಿಣದ ಸಂಕೋಲೆ(ಸರಪಳಿ)ಯಿಂದ ಕಟ್ಟಿಹಾಕಲಾಗಿದ್ದ ಓರ್ವ ಹಿಂದೂ ಹುಡುಗಿ

ಜಮಶೆದಪುರ(ಜಾರ್ಖಂಡ) – ಸೆಪ್ಟೆಂಬರ್ 19, 2021 ರಂದು ಇಲ್ಲಿಯ ಇಮಾಮವಾಡಾದಲ್ಲಿ ಕಬ್ಬಿಣದ ಸಂಕೋಲೆ(ಸರಪಳಿ)ಯಿಂದ ಕಟ್ಟಿಹಾಕಲಾಗಿದ್ದ ಓರ್ವ ಹಿಂದೂ ಹುಡುಗಿಯನ್ನು ವಿಶ್ವ ಹಿಂದೂ ಪರಿಷತ್ತು ಬಿಡುಗಡೆ ಮಾಡಿದೆ. ಈ ಹುಡುಗಿಗೆ ಭೂತಬಾಧೆಯಾಗಿದೆ ಎಂಬ ಅನುಮಾನದಿಂದ ಅವಳ ಪೋಷಕರು ಆಕೆಯನ್ನು ಇಲ್ಲಿಗೆ ಕರೆ ತಂದಿದ್ದರು, ಮತ್ತು ರಫೀಕ ಎಂಬ ಮೌಲ್ವಿಯು ಆಕೆಯನ್ನು ಕಟ್ಟಿ ಹಾಕಿದ್ದನು. ಭೂತ ಓಡಿಸುವ ನೆಪದಲ್ಲಿ ರಫಿಕನು ಆಕೆಯನ್ನು ಥಳಿಸುತ್ತಿದ್ದನು.

ಈ ವಿಷಯವಾಗಿ ವಿಹಿಂಪನ ಜಮಶೆದಪುರ ಜಿಲ್ಲಾಧ್ಯಕ್ಷ ಅಜಯ ಗುಪ್ತಾ ಇವರು ಮುಂದಿನಂತೆ ಆರೋಪಿಸಿದ್ದಾರೆ; ಹುಡುಗಿಯ ಪೋಷಕರನ್ನು ಮತಾಂತರಿಸಲು ಅವರ ಮನವೊಲಿಸಲು ಮೌಲ್ವಿಯು ಪ್ರಯತ್ನ ಮಾಡುತ್ತಿದ್ದನು. ಪೋಷಕರು ವಿಹಿಂಪನ ಪರವಾಗಿರುವುದರ ಬದಲು ರಫೀಕ್‍ನ ಪರ ವಹಿಸುತ್ತಿದ್ದರು. ಈ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಸಾಧ್ಯತೆಯಿದೆ ಎಂಬ ಸಂಶಯ ನಮಗಿದೆ ಎಂದು ಹೇಳಿದ್ದಾರೆ .