ಮಹಂತ ನರೇಂದ್ರ ಗಿರಿಯವರ ಉತ್ತರಾಧಿಕಾರಿಯಾಗಿ ‘ಬಲವೀರ ಗಿರಿಯವರ ಹೆಸರಿನ ಮೇಲೆ ಪರಮೇಶ್ವರರ ಮೊಹರು

ಮಹಂತ್ ನರೇಂದ್ರ ಗಿರಿ ಮತ್ತು ಶಿಷ್ಯ ಬಲವಿರ ಗಿರಿ

ಪ್ರಯಾಗರಾಜ (ಉತ್ತರಪ್ರದೇಶ) – ಅಖಿಲ ಭಾರತೀಯ ಆಖಾಡಾ ಪರಿಷತ್ತಿನ ಪಂಚ ಪರಮೇಶ್ವರರು (೫ ಪಂಚರು) ಮಹಂತ ನರೇಂದ್ರ ಗಿರಿಯವರ ಇಚ್ಛಾನುಸಾರ ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಮುಂಬರುವ ಅಕ್ಟೋಬರ ೫ನೇಯ ತಾರೀಖಿನಂದು ಬಾಘಂಬರೀ ಮಠದ ಹೊಣೆಯನ್ನು ಅವರಿಗೆ ಒಪ್ಪಿಸಲಾಗುವುದು. ಮಹಂತ ನರೇಂದ್ರ ಗಿರಿಯವರ ಸಂಶಯಾಸ್ಪದ ಸಾವಿನ ಬಳಿಕ ಅವರ ಕೋಣೆಯಲ್ಲಿ ಒಂದು ಪತ್ರ ಸಿಕ್ಕಿತ್ತು, ಅದರಲ್ಲಿ ಅವರು ಬಲವೀರ ಗಿರಿಯವರನ್ನು ತಮ್ಮ ಉತ್ತರಾಧಿಕಾರಿಯೆಂದು ಘೋಷಿಸಿದ್ದರು; ಆದರೆ ಮಠದ ಪಂಚ ಪರಮೇಶ್ವರರು ಆ ಪತ್ರವನ್ನು ನಕಲಿ ಎಂದು ಹೇಳಿ ಬಲವೀರ ಗಿರಿಯವರನ್ನು ಅವರ ಉತ್ತರಾಧಿಕಾರಿಯಾಗಿ ಮಾಡಲು ನಿರಾಕರಿಸಿದ್ದರು. ಅನಂತರ ನರೇಂದ್ರ ಗಿರಿಯವರು ಜೂನ ೨೦೨೦ರಲ್ಲಿ ಮಾಡಿಟ್ಟಿದ್ದ ಮೃತ್ಯುಪತ್ರವನ್ನು ಬಹಿರಂಗ ಪಡಿಸಲಾಯಿತು, ಅದರಲ್ಲಿ ಅವರು ಬಲವೀರ ಗಿರಿಯವರನ್ನು ತಮ್ಮ ಉತ್ತರಾಧಿಕಾರಿಯಾಗಿ ಮಾಡುವ ಇಚ್ಛೆಯನ್ನು ವ್ಯಕ್ತ ಪಡಿಸಿದ್ದರು. ಆ ಆಧಾರದ ಮೇಲೆ ಬಲವೀರ ಗಿರಿಯವರನ್ನು ಉತ್ತರಾಧಿಕಾರಿಯನ್ನಾಗಿ ಮಾಡಲಾಗುವುದು.

ಸಿಬಿಐನಿಂದ ನರೇಂದ್ರ ಗಿರಿಯವರ ಮೃತ್ಯುವಿನ ಅನ್ವೇಷಣೆ ಪ್ರಾರಂಭ

ಮಹಂತ ನರೇಂದ್ರ ಗಿರಿಯವರ ಸಂಶಯಾಸ್ಪದ ಮೃತ್ಯುವಿನ ಪ್ರಕರಣದಲ್ಲಿ ಸಿಬಿಐಯು ಕಳೆದ ೬ ದಿನಗಳಿಂದ ಅನ್ವೇಷಣೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಸಿಬಿಐಯು ಬಂಧಿಸಿರುವ ಆನಂದ ಗಿರಿ, ಆದ್ಯಾಪ್ರಸಾದ ತಿವಾರಿ ಹಾಗೂ ಸಂದೀಪ ತಿವಾರಿಯವರನ್ನು ಸ್ವತಂತ್ರವಾಗಿ ೭ ಗಂಟೆಗಳ ಕಾಲ ವಿಚಾರಣೆ ನಡೆಸಿತು.