ಕೇರಳದಲ್ಲಿ ಮತಾಂಧರ ಮತಗಳನ್ನು ಗಳಿಸಿ ಮಾಕಪವು ಅಧಿಕಾರಕ್ಕೆ ಬಂದಿದೆ. ಆದುದರಿಂದ ತಾಲಿಬಾನಿನ ಸಮರ್ಥಕರ ಸಂಖ್ಯೆ ಹೆಚ್ಚುತ್ತಿದೆ ಎಂಬ ಆಶಯದ ಪತ್ರಕವನ್ನು ಬಿಡುಗಡೆ ಮಾಡುವುದರ ಹೊರತು ಮಾಕಪವು ಇನ್ನೇನೂ ಮಾಡಲಾರದು. ಇದರಿಂದ ಕೇರಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ರಕ್ಷಿಸಲು ಕೇಂದ್ರ ಸರಕಾರವು ಕ್ರಮಕೈಗೊಳ್ಳುವ ಅವಶ್ಯಕತೆಯಿದೆ! – ಸಂಪಾದಕರು
ತಿರುವನಂತಪುರಮ್ (ಕೇರಳ) : ಕೇರಳದಲ್ಲಿ ತಾಲಿಬಾನಿನ ಸಮರ್ಥಕರ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಚಿಂತೆಯ ವಿಷಯವಾಗಿದೆ. ವಾಸ್ತವದಲ್ಲಿ ಮುಸಲ್ಮಾನ ಸಮಾಜ ಸಹಿತ ಜಗತ್ತಿನಾದ್ಯಂತ ತಾಲಿಬಾನಿಗಳ ನಿಂದೆಯಾಗುತ್ತಿದೆ ಎಂದು ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ಆಂತರಿಕ ಪತ್ರಕ ಒಂದರಲ್ಲಿ ಉಲ್ಲೇಖಿಸಲಾಗಿದೆ ಎಂಬ ಮಾಹಿತಿಯನ್ನು ‘ಆಜ್ ತಕ್’ ವಾರ್ತಾವಾಹಿನಿಯು ತನ್ನ ವಾರ್ತೆಯಲ್ಲಿ ತಿಳಿಸಿದೆ.
#Exclusive | India Today has accessed internal party documents of the CPI(M) which reveal that the party is concerned due to the “growing pro-Taliban sentiment” in #Kerala .
(@tweets_amit)#Kerala https://t.co/wwQEzJfpTC— IndiaToday (@IndiaToday) September 26, 2021
1. ಈ ಪತ್ರಕದಲ್ಲಿ ‘ಸುಶಿಕ್ಷಿತ ಮಹಿಳೆಯರನ್ನು ತಾಲಿಬಾನಿ ವಿಚಾರಗಳ ಜಾಲದಲ್ಲಿ ಸೆಳೆಯಲು ಪ್ರಯತ್ನಿಸಲಾಗುತ್ತಿದೆ. ಹಾಗೆಯೇ ‘ಜಮಾತ-ಎ-ಇಸ್ಲಾಮಿ ಹಿಂದ’ ಎಂಬ ಸಂಘಟನೆಯು ಜನರ ಧಾರ್ಮಿಕ ಭಾವನೆಯನ್ನು ಕೆರಳಿಸುವ ಕಾರ್ಯ ಮಾಡುತ್ತಿದೆ. ಇದಕ್ಕಾಗಿ ಈ ಸಂಸ್ಥೆಯು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದೆ. ಇಸ್ಲಾಮಿಕ್ ರಾಷ್ಟ್ರದ ಸ್ಥಾಪಿಸುವುದೇ ಇದರ ಉದ್ದೇಶವಾಗಿದೆ’ ಎಂದು ಹೇಳಲಾಗಿದೆ.
2. ಈ ಪತ್ರಕದಲ್ಲಿ ‘ಮುಸಲ್ಮಾನರಲ್ಲಿ ಮಾತ್ರವಲ್ಲದೇ ಇತರ ಸಮಾಜದಲ್ಲಿಯೂ ಈ ವಿಚಾರವನ್ನು ಹರಡಲು ಪ್ರಯತ್ನಿಸಲಾಗುತ್ತಿದೆ. ಕ್ರೈಸ್ತರನ್ನು ಮುಸಲ್ಮಾನರ ವಿರುದ್ಧ ಕೆರಳಿಸುವ ಪ್ರಯತ್ನವನ್ನೂ ಈ ಮಾಧ್ಯಮದಿಂದ ಮಾಡಲಾಗುತ್ತಿದೆ’ಎಂದು ಹೇಳಲಾಗಿದೆ.
3. ಮಾಕಪದ ಕಾರ್ಯಕಾರಿ ಸಮಿತಿಯ ಸದಸ್ಯ ಎಂ. ಎ. ಬೇಬಿಯವರು ‘ನಮ್ಮ ಪಕ್ಷದ ಪತ್ರಕದಲ್ಲಿ ಧಾರ್ಮಿಕ ಮತ್ತು ಕಟ್ಟರತಾವಾದಿ ಶಕ್ತಿಗಳಿಂದ ಜಾಗರೂಕರಾಗಿರಲು ಕರೆ ನೀಡಲಾಗಿರುವುದು ಸತ್ಯವಾಗಿದೆ. ಸಂಘಪರಿವಾರದ ಕಾರ್ಯದಿಂದಾಗಿ ಅಲ್ಪಸಂಖ್ಯಾತರ ಧಾರ್ಮಿಕ ಭಾವನೆಗಳು ತೀವ್ರವಾಗುತ್ತಿವೆ. ರಾ. ಸ್ವ. ಸಂಘದ ಕಾರ್ಯದಿಂದಾಗಿ ಅಲ್ಪಸಂಖ್ಯಾತ ಸಮುದಾಯದ ಒಂದು ವರ್ಗವು ದ್ವೇಷದ ದಿಕ್ಕಿನಲ್ಲಿ ಆಕರ್ಷಿತವಾಗುತ್ತಿದೆ ಮತ್ತು ಅದು ಸಂಘದ ನಕಲು ಮಾಡುವುದು. (ಸಂಘ ಪರಿವಾರದಿಂದಲ್ಲ, ಮತಾಂಧರಲ್ಲಿ ಜನ್ಮದಿಂದಲೇ ಮತಾಂಧತೆ ಇರುವುದರಿಂದ ಅವರು ಈ ಹಿಂದಿನಿಂದಲೂ ಜಿಹಾದಿ ಕಾರ್ಯಾಚರಣೆಗಳನ್ನು ಮಾಡುತ್ತಿದ್ದರು ಮತ್ತು ಈಗಲೂ ಮಾಡುತ್ತಿದ್ದಾರೆ. ಸಂಘ ಮತ್ತು ಭಾಜಪವು ಇಲ್ಲದಿರುವಾಗಲೂ ಇದು ನಡೆಯುತ್ತಿತ್ತು; ಆದರೆ ಮತಾಂಧರನ್ನು ಓಲೈಸಲು ಇಂತಹ ಹಿಂದೂದ್ವೇಷಿ ತರ್ಕಗಳನ್ನು ಮಾಡಲು ಸಾಮ್ಯವಾದಿಗಳು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು) ಯಾವುದೇ ಇಸ್ಲಾಮೀ ದೇಶಗಳಿಗಿಂತಲೂ ಭಾರತದಲ್ಲಿನ ಮುಸಲ್ಮಾನರ ಜನಸಂಖ್ಯೆಯು ಹೆಚ್ಚಿದೆ ಎಂಬುದನ್ನು ನಾವು ಗಮನದಲ್ಲಿಡಬೇಕು. (ಈ ರೀತಿಯಲ್ಲಿ ಹೇಳಿ ಹಿಂದೂಗಳಲ್ಲಿ ಭಯವನ್ನು ಹುಟ್ಟಿಸಲು ಸಾಮ್ಯವಾದಿಗಳು ಪ್ರಯತ್ನಿಸುತ್ತಿದ್ದಾರೆ. ಮೊಗಲರನ್ನು ಸೋಲಿಸಿದ ಮತ್ತು ಜಿಹಾದಿಗಳಿಗೆ ಬುದ್ಧಿ ಕಲಿಸಿರುವ ಇತಿಹಾಸವು ಹಿಂದೂಗಳದ್ದಾಗಿದೆ ಎಂಬುದನ್ನು ಸಾಮ್ಯವಾದಿಗಳು ಗಮನದಲ್ಲಿಡಬೇಕು ! – ಸಂಪಾದಕರು)
4. ಜಮಾತಿನ ರಾಷ್ಟ್ರೀಯ ಉಪಾಧ್ಯಕ್ಷ ಮಹಮ್ಮದ ಸಲೀಮ ಇಂಜಿನಿಯರ ಇವರು ‘ಜಮಾತ-ಎ-ಇಸ್ಲಾಮಿ ಹಿಂದ’ನ ವಿಷಯದಲ್ಲಿ ತಪ್ಪು ತಿಳುವಳಿಕೆಗಳನ್ನು ಹರಡಲಾಗುತ್ತಿದೆ. ಇದರ ಹಿಂದೆ ರಾಜಕೀಯ ಲಾಭವನ್ನು ಪಡೆಯುವ ಉದ್ದೇಶವಿದೆ. ನಮ್ಮ ಉದ್ದೇಶವೂ ಧಾರ್ಮಿಕ ಮತ್ತು ವಿಭಜನಕಾರಿ ಜನರ ವಿರುದ್ಧ ಹೋರಾಡುವುದಾಗಿದೆ’ ಎಂದು ಹೇಳಿದ್ದಾರೆ.
5. ಜಮಾತಿನ ಸಚಿವ ಸೈಯದ ತನವೀರ ಅಹಮದ ಇವರು ‘ನಾವು ತಾಲಿಬಾನಿ ವಿಚಾರಗಳ ಪ್ರಸಾರ ಮಾಡುತ್ತೇವೆ’ ಎಂದು ಆರೋಪಿಸುವುದು ತಪ್ಪಾಗಿದೆ. ಇಂತಹ ಆರೋಪಗಳಿಂದ ಹಿಂದೂ ಮತ್ತು ಮುಸಲ್ಮಾನರ ನಡುವಿನ ಅಂತರ ಹೆಚ್ಚಾಗುತ್ತದೆ ಮತ್ತು ಇದರ ಲಾಭವನ್ನು ಕೆಲವು ರಾಜಕೀಯ ಪಕ್ಷಗಳು ಪಡೆಯುತ್ತಿವೆ’ ಎಂದು ಹೇಳಿದರು.