ಉತ್ತರಾಖಂಡ ಸರಕಾರದಿಂದ ರಾಜ್ಯದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನನ್ನು ತರುವ ಸಿದ್ಧತೆ !

ಡೆಹ್ರಾಡೂನ್ (ಉತ್ತರಾಖಂಡ) – ಉತ್ತರಾಖಂಡ ಸರಕಾರವು ರಾಜ್ಯದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನನ್ನು ಜಾರಿಗೊಳಿಸುವ ಉದ್ದೇಶದಿಂದ ಉತ್ತರಪ್ರದೇಶ ಜನಸಂಖ್ಯಾ ನಿಯಂತ್ರಣ ಮಸೂದೆಯ ಮಾಹಿತಿಯನ್ನು ಪಡೆಯಲು ಆರಂಭಿಸಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಉತ್ತರಾಖಂಡ ಸರಕಾರಕ್ಕೆ ಜನಸಂಖ್ಯಾ ನಿಯಂತ್ರಣ ಕಾಯಿದೆಯನ್ನು ಜಾರಿಗೆ ತರಲು ಸೂಚಿಸಲಾಗಿದೆ. ಸಂಘದ 35 ಪದಾಧಿಕಾರಿಗಳು ಆಢಳಿತಾರೂಢ ಬಿಜೆಪಿಯೊಂದಿಗಿನ ಸಭೆಯಲ್ಲಿ, ಅಸ್ಸಾಂ ಮತ್ತು ಉತ್ತರಪ್ರದೇಶ ರಾಜ್ಯಗಳಂತೆ `ಜನಸಂಖ್ಯಾಶಾಸ್ತ್ರೀಯ ಸಮತೋಲನ’ವನ್ನು” ಕಾಪಾಡಿಕೊಳ್ಳಲು ಸರಕಾರಕ್ಕೆ ಉತ್ತರಾಖಂಡದಲ್ಲಿಯೂ ಜನಸಂಖ್ಯಾ ನಿಯಂತ್ರಣ ನೀತಿಯನ್ನು ಅಳವಡಿಸಿಕೊಳ್ಳಬೇಕಾಗಬಹುದು ಎಂದು ಹೇಳಿದರು.