ಅಗರತಳ (ತ್ರಿಪುರ) – ನನಗೆ ಅನೇಕ ಅಧಿಕಾರಿಗಳು ‘ನ್ಯಾಯಾಲಯವನ್ನು ಅಪಮಾನಿಸಿದಂತಾಗುತ್ತದೆ’ ಎಂಬ ಭಯದಿಂದ ನಿರ್ದಿಷ್ಟ ಕೆಲಸವನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಈ ಭಯ ಏಕೆ ? ನ್ಯಾಯಾಲಯವು ತೀರ್ಪು ನೀಡುವ ಕೆಲಸ ಮಾಡುತ್ತದೆ; ಆದರೆ ಪೊಲೀಸರು ಅದರ ಕಾರ್ಯಾಚರಣೆ ಮಾಡುತ್ತಾರೆ ಮತ್ತು ಪೊಲೀಸರು ನನ್ನ ನಿಯಂತ್ರಣದಲ್ಲಿದ್ದಾರೆ. ಇಲ್ಲಿಯವರೆಗೆ ನ್ಯಾಯಾಲಯವನ್ನು ಅಪಮಾನಿಸಿದ ಬಗ್ಗೆ ಎಷ್ಟು ಜನರನ್ನು ಜೈಲಿಗೆ ಹಾಕಲಾಗಿದೆ ? ನ್ಯಾಯಾಲಯವನ್ನು ಅಪಮಾನಿಸಿದ ಪ್ರಕರಣದಲ್ಲಿ ನೀವು ಜೈಲಿಗೆ ಹೋಗುವ ಮೊದಲು ನಾನು ಹೋಗುತ್ತೇನೆ. ಯಾರನ್ನೇ ಆಗಲಿ ಜೈಲಿಗೆ ತಳ್ಳುವುದು ಅಷ್ಟೊಂದು ಸುಲಭವಲ್ಲ. ಮುಖ್ಯಮಂತ್ರಿಗಳು ನೀಡಿದ ಆದೇಶಕ್ಕನುಸಾರ ಪೊಲೀಸರ ಕೆಲಸವನ್ನು ಗಮನದಲ್ಲಿಡಲಾಗುತ್ತದೆ. ನ್ಯಾಯಾಲಯವು ಪೊಲೀಸರಿಗೆ ಓರ್ವ ವ್ಯಕ್ತಿಯನ್ನು ಜೈಲಿಗೆ ಹಾಕಲು ಹೇಳುತ್ತಿದ್ದಲ್ಲಿ ‘ಆರೋಪಿಯು ಸಿಗುತ್ತಿಲ್ಲ’ ಎಂದು ಪೊಲೀಸರು ಹೇಳಬೇಕು. ಕೊನೆಗೆ ಶಕ್ತಿಯು ತಂದೆಯ ಕೈಯಲ್ಲಿ ಇರುತ್ತದೆಯಲ್ಲವೇ ? ಎಂದು ಒಂದು ಕಾರ್ಯಕ್ರಮದಲ್ಲಿ ತ್ರಿಪುರಾದ ಮುಖ್ಯಮಂತ್ರಿ ಬಿಪ್ಲಬ ಕುಮಾರ ದೇಬರವರು ಹೇಳಿಕೆ ನೀಡಿದ್ದಾರೆ. ಈ ಭಾಷಣದ ವಿಡಿಯೋ ಪ್ರಸಾರವಾದಾಗ ವಿರೋಧ ಪಕ್ಷದಿಂದ ಟೀಕೆಗಳಾಗುತ್ತಿವೆ. ಮುಖ್ಯಮಂತ್ರಿಗಳು ಸ್ವತಃ ನ್ಯಾಯಪಾಲಿಕೆಯನ್ನು ಹೇಗೆ ಅವಮಾನಿಸಬಲ್ಲರು ? ಎಂಬ ಪ್ರಶ್ನೆಯನ್ನು ಕೇಳಲಾಗುತ್ತಿದೆ.
‘Don’t worry about contempt of court, CM in charge of cops’: Biplab Deb’s exhortation to officials goes viralhttps://t.co/m4AYg3lcO6
— The Indian Express (@IndianExpress) September 26, 2021
ತೃಣಮೂಲ ಕಾಂಗ್ರೆಸ್ಸಿನ ಸಂಸದ ಅಭಿಷೇಕ ಬ್ಯಾನರ್ಜಿ ಇವರು ‘ದೇಬರವರು ನಿರ್ಲಜ್ಜರಾಗಿ ಪ್ರಜಾಪ್ರಭುತ್ವದ ಅಪಹಾಸ್ಯ ಮಾಡಿದ್ದಾರೆ. ಅವರು ಬಹಿರಂಗವಾಗಿ ಗೌರವಾನ್ವಿತ ನ್ಯಾಯವ್ಯವಸ್ಥೆಯ ಅಪಹಾಸ್ಯ ಮಾಡಿದ್ದಾರೆ. ನ್ಯಾಯಾಲಯದ ಕಡೆಗೆ ಮತ್ತು ನ್ಯಾಯವ್ಯವಸ್ಥೆಯನ್ನು ಇಷ್ಟು ಹಗುರವಾಗಿ ನೋಡುವ ದೇಬರವರ ಹೇಳಿಕೆಯನ್ನು ಸರ್ವೋಚ್ಚ ನ್ಯಾಯಾಲಯವು ಪರಿಗಣಿಸುವುದೇ ?’ ಎಂದು ಪ್ರಶ್ನಿಸಿದ್ದಾರೆ.