* ಜಮ್ಮು-ಕಾಶ್ಮೀರವು ಭಾರತದ ಆಂತರಿಕ ವಿಷಯವಾಗಿದೆ. ಈ ವಿಷಯದಲ್ಲಿ ತಾಲಿಬಾನ ತನ್ನ ಮೂಗು ತೂರಿಸುವ ಅಗತ್ಯವಿಲ್ಲ, ಎಂಬ ಶಬ್ದಗಳಲ್ಲಿ ಭಾರತವು ಕಪಟಿ ತಾಲಿಬಾನನ್ನು ದೂಷಿಸಬೇಕು. ಅದೇ ರೀತಿ ಇನ್ನು ಮುಂದೆ ಈ ರೀತಿಯ ಹೇಳಿಕೆಗಳನ್ನು ನೀಡಿದರೆ ಸೈನಿಕ ಕಾರ್ಯಾಚರಣೆ ನಡೆಸುವೆವು ಎಂದು ಎಚ್ಚರಿಕೆ ಸಹ ನೀಡಬೇಕು ! – ಸಂಪಾದಕರು
ಕಾಬುಲ್ (ಅಫ್ಘಾನಿಸ್ತಾನ) – ಜಗತ್ತಿನಾದ್ಯಂತ ಕೆಲವು ಭಾಗದಲ್ಲಿ ಮುಸಲ್ಮಾನರೊಂದಿಗೆ ಅಯೋಗ್ಯವಾಗಿ ವರ್ತಿಸಲಾಗುತ್ತಿದೆ. ಮುಸಲ್ಮಾನರ ಮೇಲೆ ಅತ್ಯಾಚಾರಗಳಾಗುತ್ತಿವೆ. ಇದು ಚಿಂತಾಜನಕ ವಿಷಯವಾಗಿದ್ದು ಅದನ್ನು ನಾವು ವಿರೋಧಿಸುತ್ತಿದ್ದೇವೆ. ಜಮ್ಮೂ-ಕಾಶ್ಮೀರದಲ್ಲಿ ಮಾನವಾಧಿಕಾರದ ಉಲ್ಲಂಘಟನೆಯಾಗುತ್ತಿದೆ. ನಾವು ಅದನ್ನು ಖಂಡಿಸುತ್ತೇವೆ, ಎಂದು ಅಫ್ಘಾನಿಸ್ತಾನದ ತಾಲಿಬಾನ ಸರಕಾರದ ಮಾಹಿತಿ ಖಾತೆಯ ಉಪಮಂತ್ರಿ ಹಾಗೂ ತಾಲಿಬಾನಿನ ವಕ್ತಾರ ಜಬಿಉಲ್ಲಾಹ ಮುಜಾಹಿದರವರು ನುಡಿದಿದ್ದಾರೆ. ಅನಂತರ ಅವರು ‘ಜಗತ್ತಿನಾದ್ಯಂತ ಮುಸಲ್ಮಾನರಿಗೋಸ್ಕರ ಧ್ವನಿಯೆತ್ತುವೆವು’, ಎಂದೂ ಹೇಳಿದರು.
Taliban appreciates Pakistan for supporting Islamic Emirate of Afghanistan https://t.co/L4CKRVVJVy
— TOI World News (@TOIWorld) September 27, 2021
ಪಾಕಿಸ್ತಾನದ ಪ್ರಶಂಸೆ !
ಜಬಿಉಲ್ಲಾಹರವರು ಪಾಕಿಸ್ತಾನದ ವಿಷಯದಲ್ಲಿ ಮಾತನಾಡುವಾಗ, ಪಾಕಿಸ್ತಾನವು ನಮ್ಮ ನೆರೆರಾಷ್ಟ್ರವಾಗಿದ್ದು ಅವರು ಅಫ್ಘಾನಿಸ್ತಾನದ ವಿಷಯದಲ್ಲಿ ವಹಿಸಿದ ಭೂಮಿಕೆಗಾಗಿ ನಾವು ಕೃತಜ್ಞರಾಗಿದ್ದೇವೆ. ಅಫ್ಘಾನಿಸ್ತಾನಕ್ಕೆ ಅಂತರರಾಷ್ಟ್ರೀಯ ಸಮುದಾಯದೊಂದಿಗೆ ಒಳ್ಳೆಯ ಸಂಬಂಧ ಬೇಕಾಗಿದೆ. ನಮಗೆ ವ್ಯಾಪಾರ ಹಾಗೂ ಆರ್ಥಿಕ ಸಂಬಂಧವನ್ನು ಇನ್ನೂ ವೃದ್ಧಿಪಡಿಸಬೇಕಾಗಿದೆ. ನಮ್ಮ ನೆರೆ ರಾಷ್ಟ್ರಗಳು ಅಂತರರಾಷ್ಟ್ರೀಯ ಸಮುದಾಯದ ಮುಂದೆ ಅಫ್ಘಾನಿಸ್ತಾನಕ್ಕೆ ಬೆಂಬಲ ನೀಡುವುದನ್ನು ಮುಂದುವರಿಸುವವು ಎಂದು ನಮ್ಮ ಅಪೇಕ್ಷೆಯಿದೆ, ಎಂದರು (ಈ ರೀತಿಯ ಸಂಬಂಧವಿಟ್ಟುಕೊಳ್ಳಲು ಸ್ವತಃ ಸುಸಂಸ್ಕೃತ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಿರುವ ದೇಶವಾಗಿರುವುದು ಅಗತ್ಯವಾಗಿದೆ. ಉಗ್ರಗಾಮಿಗಳು ತಮ್ಮೊಂದಿಗೆ ಇತರರು ಒಳ್ಳೆಯ ಸಂಬಂಧವಿಟ್ಟುಕೊಳ್ಳಲಿ, ಎಂಬ ಅಪೇಕ್ಷೆ ಮಾಡುವುದು ಮೂರ್ಖತನವಾಗಿದೆ, ಎಂಬುದನ್ನು ತಾಲಿಬಾನ ಗಮನದಲ್ಲಿಟ್ಟುಕೊಳ್ಳಬೇಕು ! – ಸಂಪಾದಕರು)