ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಈ ರೀತಿ ಅಯೋಗ್ಯ ಕೃತ್ಯಗಳನ್ನು ಮಾಡುತ್ತಾರೆ ಮತ್ತು ದೇವಸ್ಥಾನದ ಪಾವಿತ್ರ್ಯ ಮತ್ತು ಮಹತ್ವವನ್ನು ಕಡಿಮೆ ಮಾಡುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು
ಛತರಪುರ – ಮಧ್ಯಪ್ರದೇಶ ರಾಜ್ಯದಲ್ಲಿ ಛತರಪುರದಲ್ಲಿಯ ನಜರಾಯ ಟೋರಿಯಾ ದೇವಸ್ಥಾನದ ಪ್ರವೇಶದ್ವಾರದಲ್ಲಿ ಆರತಿ ಸಾಹು ಎಂಬ ಯುವತಿಯು ‘ಸೆಕೆಂಡ್ ಹ್ಯಾಂಡ್ ಜವಾನಿ’ ಎಂಬ ಹಿಂದಿ ಹಾಡಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಬೆಳಕಿಗೆ ಬಂದ ನಂತರ ಬಜರಂಗದಳದವರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ‘ಹಿಂದೂ ಸಂಸ್ಕೃತಿಯ ಅವಹೇಳನ ಮಾಡುವವರಿಗೆ ಸಮಾಜದಲ್ಲಿರಲು ಅಧಿಕಾರವಿಲ್ಲ’, ಎಂದು ದಳವು ಹೇಳಿದೆ.
1. ಈ ವಿಷಯವಾಗಿ ದೇವಸ್ಥಾನದ ಮಹಂತ ಭಗವಾನ ದಾಸ ಇವರು, ಈ ರೀತಿಯ ನೃತ್ಯ ಮಾಡುವುದು ಅಯೋಗ್ಯವಾಗಿದೆ, ಮಠ, ದೇವಸ್ಥಾನ ಮತ್ತು ಆಶ್ರಮ ಇದರ ಅವಹೇಳನ ಮಾಡಬಾರದು, ಜೊತೆಗೆ ಹಾಗೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
2. ಈ ವಿಷಯವಾಗಿ ನೃತ್ಯ ಮಾಡಿದ ಯುವತಿ ಆರತಿ ಸಾಹು ಇವರು, ವಿರೋಧ ಮಾಡುವಂತಹದ್ದೇನೂ ಈ ನೃತ್ಯದ ವಿಡಿಯೋದಲ್ಲಿಲ್ಲ, ಅದರಲ್ಲಿ ಯಾವುದು ಅಶ್ಲೀಲತೆ ಇಲ್ಲ, ನಾನು ತುಂಡು ಬಟ್ಟೆಯನ್ನು ಧರಿಸಿಲ್ಲ ಎಂದು ಹೇಳಿದರು.
Instagram influencer’s dance on ‘second-hand jawani’ in a temple goes viral, Mahant asks not to defame temples like thishttps://t.co/tEkNXn5WkZ
— OpIndia.com (@OpIndia_com) September 26, 2021