ಭಾರತದಲ್ಲಿ ಎಲ್ಲೆಲ್ಲಿ ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಲಾಗಿದೆಯೋ, ಅಲ್ಲಿ ಭಾಜಪವು ಮತ್ತೆ ದೇವಸ್ಥಾನಗಳನ್ನು ನಿರ್ಮಿಸಲಿದೆ ! – ಭಾಜಪದ ಶಾಸಕ ಸಂಗೀತ ಸೋಮ ಇವರ ಹೇಳಿಕೆ

ಭಾಜಪದ ಶಾಸಕ ಸಂಗೀತ ಸೋಮ

ಮೇರಠ (ಉತ್ತರಪ್ರದೇಶ) – ಭಾರತದಲ್ಲಿ ಎಲ್ಲೆಲ್ಲಿ ಮಸೀದಿಗಳ ನಿರ್ಮಾಣಕ್ಕಾಗಿ ದೇವಸ್ಥಾನಗಳನ್ನು ಕೆಡವಲಾಗಿದೆಯೋ, ಆ ಎಲ್ಲಾ ಸ್ಥಳಗಳಲ್ಲಿ ಭಾಜಪದಿಂದ ದೇವಸ್ಥಾನಗಳನ್ನು ನಿರ್ಮಿಸಲಾಗುವುದು ಎಂದು ರಾಜ್ಯದ ಸರದಾನದ ಭಾಜಪದ ಶಾಸಕ ಸಂಗೀತ ಸೋಮ ಇವರು ಹೇಳಿದ್ದಾರೆ. ರಾಜ್ಯದಲ್ಲಿ ಭಾಜಪ ಸರಕಾರಕ್ಕೆ ನಾಲ್ಕೂವರೆ ವರ್ಷ ಪೂರ್ಣವಾಗಿರುವ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಸೋಮ ತಮ್ಮ ಮಾತನ್ನು ಮುಂದುವರೆಸುತ್ತಾ ಹೀಗೆಂದರು,

1. ಅಖಿಲೇಶ ಯಾದವ ಇವರು ‘ಹಂಗಾಮಿ ಹಿಂದೂ’ ಆಗಿದ್ದಾರೆ. ಅವರಿಗೆ ಧೈರ್ಯವಿದ್ದರೆ ಅವರು ‘ಮಥುರಾದಲ್ಲಿ ಶ್ರೀಕೃಷ್ಣ ದೇವಸ್ಥಾನವನ್ನು ಕೆಡವಿ ಮಸೀದಿ ಕಟ್ಟಲಾಗಿದೆ’, ಎಂದು ಹೇಳಿ ತೋರಿಸಲಿ.

2. ಅಖಿಲೇಶ ಯಾದವ ಇವರಂತಹ ಜನರು, ಅವರು ವಿಶ್ವಕರ್ಮನ ದೇವಸ್ಥಾನ ಕಟ್ಟುವರು. ರಾಮಭಕ್ತರ ಮೇಲೆ ಗುಂಡು ಹಾರಿಸಲು ಹೇಳಿದವರು ಮತ್ತು ಕಾಶಿಯಲ್ಲಿ ಸಾಧುಗಳ ಮೇಲೆ ಲಾಠಿ ಬೀಸಲು ಆದೇಶ ನೀಡಿದವರು ಇವರೇ ಆಗಿದ್ದಾರೆ. ಈ ಜನರು ಈಗ ಕೈಮುಗಿದು ಕ್ಷಮೆಯಾಚಿಸುತ್ತಿದ್ದಾರೆ, ಆದರೆ ಜನರು ಅವರನ್ನು ಕ್ಷಮಿಸಲಾರರು.