ತಾಲಿಬಾನ್ ಮತ್ತು ಹಕ್ಕಾನಿ ನೆಟ್‍ವರ್ಕ್ ನಡುವೆ ಸಂಘರ್ಷ!

ತಾಲಿಬಾನ್‍ನ ಸರ್ವೋಚ್ಚ ನಾಯಕ ಅಖುಂದಜಾದಾನ ಮೃತ್ಯು, ಮುಲ್ಲಾ ಬರಾದರ ಒತ್ತೆಯಾಳು !

ಕಾಬುಲ(ಅಫ್ಘಾನಿಸ್ತಾನ) – ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ಹಕ್ಕಾನಿ ನೆಟ್‍ವರ್ಕ್ ಈ ಎರಡು ಸಂಘಟನೆಯ ನಡುವೆ ಪ್ರಚಂಡ ಸಂಘರ್ಷ ಪ್ರಾರಂಭವಾಗಿದೆ. ಈ ಸಂಘರ್ಷದಲ್ಲಿ ಹಕ್ಕಾನಿ ನೆಟ್‍ವರ್ಕ್ ಸಂಘಟನೆಯು ತಾಲಿಬಾನ್‍ನ ಸರ್ವೋಚ್ಚ ನಾಯಕ ಹ್ಯೆಬತುಲ್ಲಾ ಅಖುಂದಜಾದಾನನ್ನು ಹತ್ಯೆಗೈದಿದೆ, ಹಾಗೂ ತಾಲಿಬಾನ್ ಸರಕಾರದ ಉಪಪ್ರಧಾನಿ ಮುಲ್ಲಾ ಬರಾದರ ಇವನನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂಬ ವಾರ್ತೆಯನ್ನು ‘ಬ್ರಿಟನ್‍ನ ‘ದ ಸ್ಪೆಕ್ಟೇಟರ’ವು ನೀಡಿದೆ. ಇದಕ್ಕೆ ಇದುವರೆಗೆ ತಾಲಿಬಾನ್‍ನಿಂದ ಸ್ಪಷ್ಟನೆ ಬಂದಿಲ್ಲ. ಅಫ್ಘಾನಿಸ್ತಾನದ ರಾಷ್ಟ್ರಪತಿ ಭವನದಲ್ಲಿ ಈ ಘಟನೆಯಾಗಿದೆ ಎಂದು ಹೇಳಲಾಗಿದೆ.