‘ಹಲಾಲ್’ ಪ್ರಮಾಣಪತ್ರದ ಭೂಮಿಯಲ್ಲಿ ಈಗ ಸಸ್ಯಾಹಾರಕ್ಕಾಗಿ ‘ಸಾತ್ತ್ವಿಕ’ ಎಂಬ ಜಾಗತಿಕ ಪ್ರಮಾಣಪತ್ರ ದೊರೆಯಲಿದೆ!

* ಪ್ರಮಾಣಪತ್ರದ ಮಾಧ್ಯಮದಿಂದ ದೊರೆಯಲಿದೆ ಸಸ್ಯಾಹಾರಿ ಆಹಾರದ ಸುರಕ್ಷೆ ಮತ್ತು ನಿಯಮಗಳ ಪಾಲನೆಯ ಖಾತ್ರಿ

* ‘ಸಾತ್ತ್ವಿಕ ಸತ್ವಂ’, ‘ಸಾತ್ತ್ವಿಕ ಶಾಖಾಹಾರಿ’, ‘ಸಾತ್ತ್ವಿಕ ವೀಗನ್’ ಮತ್ತು ‘ಸಾತ್ತ್ವಿಕ ಜೈನ’ ಹೀಗೆ ನಾಲ್ಕು ರೀತಿಯ ಪ್ರಮಾಣಪತ್ರಗಳು

* ಅಭಿನಂದನಾರ್ಹ ಪ್ರಯತ್ನ !

ನವದೆಹಲಿ – ದೆಹಲಿಯಲ್ಲಿ ಜಗತ್ತಿನ ಮೊದಲನೇ ಸಸ್ಯಾಹಾರಿ ಆಹಾರ ಸುರಕ್ಷೆ ಮತ್ತು ನಿಯಾಮಕ ಅನುಪಾಲನೆಯ ಸೌಲಭ್ಯವು ಇತ್ತೀಚೆಗೆ ಶುಭಾರಂಭವಾಯಿತು. ‘ಸಾತ್ತ್ವಿಕ ಕೌನ್ಸಿಲ್ ಆಫ್ ಇಂಡಿಯಾ’ವು ಈ ಸೌಲಭ್ಯವನ್ನು ಆರಂಭಿಸಿದ್ದು ‘ಬ್ಯೂರೋ ವೇರಿಟಾಸ್’ ಎಂಬ ಸಂಸ್ಥೆಯು ಈ ಪ್ರಮಾಣಪತ್ರದ ವ್ಯವಸ್ಥೆಯ ಜಾಗತಿಕ ಪಾಲುದಾರನಾಗಿದೆ. ‘ಹಲಾಲ’ ಪ್ರಮಾಣಪತ್ರದ ಆಧಾರದಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದೆ. ಜಗತ್ತಿನಾದ್ಯಂತ ಇರುವ ಎಲ್ಲ ಸಸ್ಯಾಹಾರಿ ಜನರಿಗಾಗಿ ಇದೊಂದು ಜಾಗತಿಕ ಮಟ್ಟದ ಪ್ರಮಾಣಪತ್ರವಾಗಿದೆ. ಈ ಯೋಜನೆಯ ಮೂಲಕ ‘ಸಾತ್ತ್ವಿಕ ಸತ್ವಂ’, ‘ಸಾತ್ತ್ವಿಕ ಶಾಖಾಹಾರಿ’, ‘ಸಾತ್ತ್ವಿಕ ವೀಗನ್’ ಮತ್ತು ‘ಸಾತ್ತ್ವಿಕ ಜೈನ’ ಹೀಗೆ ನಾಲ್ಕು ರೀತಿಯ ಪ್ರಮಾಣಪತ್ರಗಳನ್ನು ನೀಡಲಾಗುವುದು. ‘ವಿಗನ್’ ಅಂದರೆ ಪ್ರಾಣಿ ಅಥವಾ ಅವುಗಳಿಂದ ದೊರೆಯುವ ಆಹಾರ ಪದಾರ್ಥಗಳ ಸೇವನೆ ಮಾಡದಿರುವವರು.

‘ಸಾತ್ತ್ವಿಕ ಕೌನ್ಸಿಲ್ ಆಫ್ ಇಂಡಿಯಾ’ ವು ಸ್ಥಾಪಿಸಿರುವ ಈ ಯೋಜನೆಯ ಮುಖ್ಯ ಉದ್ದೇಶವು ಭಾರತದಲ್ಲಿನ ಸಸ್ಯಹಾರಿ ಗ್ರಾಹಕರಿಗಾಗಿ ಸಸ್ಯಹಾರಿ ವಾತಾವರಣವನ್ನು ಪ್ರದಾನಿಸುವುದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಶೇಕಡ ನೂರರಷ್ಟು ಶಾಖಾಹಾರದ ಖಾತ್ರಿಯ ಕ್ಷಮತೆಯಿರುವ ಕ್ಷೇತ್ರಗಳಲ್ಲಿ ಗುಣಮಟ್ಟದ ಕಾರ್ಯಪದ್ದತಿಯನ್ನು ಸಿದ್ದ ಪಡಿಸುವುದಾಗಿದೆ.

ಸಾತ್ತ್ವಿಕ ಕೌನ್ಸಿಲ್ ಆಫ್ ಇಂಡಿಯಾದ ಸಂಸ್ಥಾಪಕರಾದ ಅಭಿಷೇಕ ಬಿಸ್ವಾಸ ಇವರು ‘ನಮ್ಮ ಪ್ರಮಾಣಪತ್ರದ ಉದ್ದೇಶವು ಗ್ರಾಹಕರಿಗಾಗಿ ಸಸ್ಯಹಾರಿ ಆಹಾರದ ಗುಣಮಟ್ಟದ ಮತ್ತು ಆಹಾರ ಸುರಕ್ಷೆಯ ವ್ಯವಸ್ಥಾಪನೆಯ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರುವುದಾಗಿದೆ. ನಾವು ಸಸ್ಯಾಹಾರಕ್ಕೆ ಪ್ರೋತ್ಸಾಹ ನೀಡದಿದ್ದರೆ ಜನರು ನಮ್ಮನ್ನು ತಲುಪುವುದಿಲ್ಲ. ನಾವೀಗ 170 ದೇಶಗಳಲ್ಲಿ ಕಾರ್ಯನಿರತರಾಗಿದ್ದೇವೆ’ ಎಂದು ಹೇಳಿದರು.

‘ಹಲಾಲ’ಪ್ರಮಾಣಪತ್ರ ಎಂದರೇನು?

ಇಸ್ಲಾಮಿನ ಪ್ರಕಾರ ‘ಹಲಾಲ’ ಎಂದರೆ ಸ್ವೀಕಾರಾರ್ಹ! ಹಿಂದೆ ‘ಹಲಾಲ’ ಪ್ರಮಾಣ ಪತ್ರವು ಕೇವಲ ಮಾಂಸಕ್ಕಾಗಿಯೇ ಸೀಮಿತವಾಗಿತ್ತು, ಆದರೆ ಈಗ ಮತಾಂಧರಿಗೆ ಅವರದ್ದೇ ಸ್ವತಂತ್ರ ಅರ್ಥವ್ಯವಸ್ಥೆಯನ್ನು ಸ್ಥಾಪಿಸಬೇಕಾಗಿರುವುದರಿಂದ ಗೃಹ ಸಂಸ್ಥೆ, ಔಷಧಿಗಳು, ಸೌಂದರ್ಯವರ್ಧಕಗಳು ಇತ್ಯಾದಿ ಅನೇಕ ಸಂಗತಿಗಳಿಗೆ ಹಲಾಲ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ. ಸ್ವಲ್ಪದರಲ್ಲಿ ಹೇಳಬೇಕಾದರೆ ‘ಇಂತಹ ಸೌಲಭ್ಯ ಅಥವಾ ಸಂಗತಿಯು ಇಸ್ಲಾಮಿನ ಅನುಸಾರ ಪ್ರಮಾಣಿತವಾಗಿದೆ’ ಎಂಬ ಆಶಯದ ಪ್ರಮಾಣಪತ್ರ ಇದಾಗಿದೆ. ಜಾಗತಿಕ ಸ್ತರದಲ್ಲಿ ಮತಾಂಧರ ವಿವಿಧ ಅಂತರಾಷ್ಟ್ರೀಯ ಒತ್ತಡ ನಿರ್ಮಾಣಮಾಡುವ ಗುಂಪುಗಳು ವಿವಿಧ ಸಂಸ್ಥೆಗಳ ಮೇಲೆ ಈ ಪ್ರಮಾಣ ಪತ್ರವನ್ನು ಪಡೆಯಲು ಒತ್ತಡ ಹೇರುತ್ತಿವೆ. ಮುಸಲ್ಮಾನ ಗ್ರಾಹಕರಿಗಾಗಿ ‘ಹಲಾಲ’ ಇದು ಕಡ್ಡಾಯವಾಗಿದೆ ಎಂದು ಹೇಳಿ ಒತ್ತಡ ನಿರ್ಮಿಸುತ್ತಿರುವುದರಿಂದ ದೊಡ್ಡ ದೊಡ್ಡ ಸಂಸ್ಥೆಗಳೂ ಇದಕ್ಕೆ ಬಲಿಯಾಗುತ್ತಿವೆ. ಈ ಷಡ್ಯಂತ್ರಕ್ಕಾಗಿ ಅನೇಕ ಇಸ್ಲಾಮಿ ಸಂಘಟನೆಗಳು ಕಾರ್ಯನಿರತವಾಗಿವೆ. ಅವರು ಸಮ್ಮತಿಸಿದ ಪ್ರಮಾಣಪತ್ರಕ್ಕೆ ‘ಹಲಾಲ’ ಪ್ರಮಾಣಪತ್ರ ಎಂದು ಹೇಳಲಾಗುತ್ತದೆ. ದೇಶದಲ್ಲಿ ಸಮಾಂತರವಾದ ಇಸ್ಲಾಮಿ ಅರ್ಥವ್ಯವಸ್ಥೆಯನ್ನು ನಿರ್ಮಿಸಿ ಪ್ರಚಲಿತ ಅರ್ಥವ್ಯವಸ್ಥೆಯನ್ನು ಹಾಳುಗೆಡವಲು ಮತಾಂಧರು ‘ಹಲಾಲ’ ಪ್ರಮಾಣಪತ್ರದ ಮಾಧ್ಯಮದಿಂದ ನಡೆಸಿರುವ ಷಡ್ಯಂತ್ರ ಇದಾಗಿದೆ.