ದೇವಸ್ಥಾನದ ಖರ್ಚಿಗಿಂತ ಉತ್ಪನ್ನ ಕಡಿಮೆ ಇರುವುದರಿಂದ ನ್ಯಾಯಾಲಯವು ದಾರಿ ತೋರಿಸಬೇಕು !

ಕೇರಳದಲ್ಲಿನ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನ ಸಮಿತಿಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ

ನವ ದೆಹಲಿ – ಕೇರಳದಲ್ಲಿನ ಎಲ್ಲ ದೇವಸ್ಥಾನಗಳು ಮುಚ್ಚಿವೆ. ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದ ತಿಂಗಳ ಖರ್ಚು ಒಂದು ಕೋಟಿ 25 ಲಕ್ಷ ರೂಪಾಯಿ ಇದೆ. ಕೊರೊನಾದ ಕಾಲದಲ್ಲಿ ಬಹಳ ಕಷ್ಟದಿಂದ 60 ರಿಂದ 70 ಲಕ್ಷ ರೂಪಾಯಿಯ ಉತ್ಪನ್ನ ಸಿಗುತ್ತಿದೆ. ಆದ್ದರಿಂದ ನ್ಯಾಯಾಲಯವು ದಾರಿ ತೋರಿಸಬೇಕು ಎಂದು ದೇವಸ್ಥಾನದ ಆಡಳಿತ ಸಮಿತಿಯು ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಮಾಡಿದೆ.

1. ದೇವಸ್ಥಾನ ಸಮಿತಿಯು ಮುಂದಿನಂತೆ ಹೇಳಿದೆ – ನ್ಯಾಯಾಲಯದ ಆದೇಶಕ್ಕನುಸಾರ ಟ್ರಸ್ಟ್ ಸ್ಥಾಪನೆ ಆಯಿತು. ಇದು ರಾಜಮನೆತನದಿಂದ ಸ್ಥಾಪಿಸಲಾಗಿರುವ ಸಾರ್ವಜನಿಕ ಟ್ರಸ್ಟ್ ಆಗಿದೆ. ಮನೆತನದಿಂದ ದೇವಸ್ಥಾನದಲ್ಲಿ ನಡೆಯುವ ಪೂಜೆ ಮತ್ತು ಅನುಷ್ಠಾನಗಳು ಇವುಗಳ ಮೇಲ್ವಿಚಾರಣೆಗಾಗಿ ಟ್ರಸ್ಟ್ ಅನ್ನು ಸ್ಥಾಪಿಸಲಾಗಿತ್ತು. ಆಡಳಿತದಲ್ಲಿ ಯಾವುದೇ ರೀತಿಯಲ್ಲಿ ಟ್ರಸ್ಟಿನ ಪಾತ್ರವಿಲ್ಲ. ಟ್ರಸ್ಟಿನ ಖಾತೆಗಳ ಲೆಕ್ಕಪತ್ರ ತಪಾಸಣೆ ನಡೆಸುವ ನ್ಯಾಯಮಿತ್ರರ ಬೇಡಿಕೆಯ ನಂತರ ನ್ಯಾಯಾಲಯದ ಮುಂದೆ ಟ್ರಸ್ಟಿನ ಬಗ್ಗೆ ಉಲ್ಲೇಖಿಸಲಾಯಿತು.’

2. ಕೇರಳ ಉಚ್ಚ ನ್ಯಾಯಾಲಯವು 2011 ನೇ ಇಸವಿಯಲ್ಲಿ ನೀಡಿದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ಬದಲಾಯಿಸಿತ್ತು. ಅದರಲ್ಲಿ ರಾಜ್ಯ ಸರಕಾರಕ್ಕೆ ದೇವಸ್ಥಾನ ವ್ಯವಸ್ಥಾಪನೆ ಮತ್ತು ಆದಾಯದ ನಿಯಂತ್ರಣ ಇಡಲು ಟ್ರಸ್ಟ್ ಅನ್ನು ಸ್ಥಾಪಿಸುವಂತೆ ಆದೇಶ ನೀಡಿತ್ತು.