ವಿರೋಧ ಪಕ್ಷ ಬಿಜೆಪಿಯಿಂದ ಸಭಾತ್ಯಾಗದ ಮೂಲಕ ವಿರೋಧ !
ಒಂದೆಡೆ ದೇಶದಲ್ಲಿ ಬಾಲ್ಯವಿವಾಹಕ್ಕೆ ನಿಷೇಧವಿರುವಾಗ, ಮತ್ತೊಂದೆಡೆ ಇಂತಹ ಮಸೂದೆಯನ್ನು ಅಂಗೀಕರಿಸಿ ಕಾಂಗ್ರೆಸ್ ಮತಕ್ಕಾಗಿ ಕಾನೂನನ್ನು ಉಲ್ಲಂಘಿಸಲು ಪ್ರಯತ್ನಿಸುತ್ತಿದೆ. ಇಂತಹ ಕಾನೂನುಗಳ ವಿರುದ್ಧ ಈಗ ಜನರು ಧ್ವನಿ ಎತ್ತುವುದು ಅಗತ್ಯವಾಗಿದೆ ! – ಸಂಪಾದಕರು
ಜೈಪುರ (ರಾಜಸ್ಥಾನ) – ರಾಜಸ್ಥಾನ ವಿಧಾನಸಭೆಯಲ್ಲಿ ಬಾಲ್ಯ ವಿವಾಹ ನೋಂದಣಿ ಮಸೂದೆಯನ್ನು ಕಾಂಗ್ರೆಸ್ ಸರಕಾರ ಅಂಗೀಕರಿಸಿದೆ. ಆದ್ದರಿಂದ ರಾಜ್ಯದಲ್ಲಿ ಬಾಲ್ಯವಿವಾಹದ ಮಾಹಿತಿಯನ್ನು ಮದುವೆಯಾದ 30 ದಿನಗಳೊಳಗೆ ಆಡಳಿತಕ್ಕೆ ನೀಡಬೇಕಾಗುತ್ತದೆ. ಮಸೂದೆಯನ್ನು ವಿರೋಧಿಸಿ ಬಿಜೆಪಿ ಸಭಾತ್ಯಾಗ ಮಾಡಿದೆ. ಈ ಮಸೂದೆಯಿಂದಾಗಿ ಬಾಲ್ಯವಿವಾಹಕ್ಕೆ ಕಾನೂನು ಮಾನ್ಯತೆ ಸಿಗುತ್ತದೆ, ಎಂಬುದು ಬಿಜೆಪಿಯ ಹೇಳಿಕೆಯಾಗಿದೆ.
ಕಾಂಗ್ರೆಸ್ ಸರಕಾರದ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧಾರಿವಾಲ್ ಇವರು, ಈ ಮಸೂದೆಯು ಬಾಲ್ಯ ವಿವಾಹಗಳನ್ನು ನೋಂದಾಯಿಸಲು ಮಾತ್ರ ಅವಕಾಶ ನೀಡುತ್ತದೆ; ಆದರೆ ಬಾಲ್ಯ ವಿವಾಹಗಳನ್ನು ಕಾನೂನುಬದ್ಧಗೊಳಿಸಲಾಗುವುದು ಎಂದು ಎಲ್ಲಿಯೂ ಹೇಳಿಲ್ಲ ಎಂದಿದ್ದಾರೆ. (ಒಂದುವೇಳೆ ಹೀಗಿದ್ದರೇ, ನೋಂದಣಿಯನ್ನು ಏಕೆ ಮಾಡಲಾಗುತ್ತಿದೆ ? ಯಾರಾದರೂ ಬಾಲ್ಯವಿವಾಹವನ್ನು ಮಾಡುತ್ತಿದ್ದರೆ, ಅವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕು ! – ಸಂಪಾದಕರು) ಬಾಲ್ಯ ವಿವಾಹ ಆಗಿದಲ್ಲಿ, ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಂಬಂಧ ಪಟ್ಟ ಕುಟುಂಬಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬಹುದು. (ಈ ರೀತಿಯ ಕ್ರಮ ಕೈಗೊಳುತ್ತಾರೆ ಎಂದಾದರೆ ಯಾರಾದರೂ ವಿವಾಹ ನೋಂದಾಯಿಸಲು ತಾವಾಗಿಯೇ ಆಡಳಿತದ ಬಳಿ ಹೋಗುತ್ತಾರೇನು ? – ಸಂಪಾದಕರು)
Rajasthan has passed a bill to amend an act on mandatory registration of marriages, including child marriages, with the opposition staging a walkout from the assembly. https://t.co/OobPEvnzCG
— Hindustan Times (@htTweets) September 18, 2021