ಜಾರ್ಖಂಡ್‌ನಲ್ಲಿ ಮತಾಂತರಗೊಂಡ ಕುಟುಂಬದ ವ್ಯಕ್ತಿಯ ಮೃತದೇಹವನ್ನು ಸ್ಮಶಾನಭೂಮಿಯಲ್ಲಿ ಹೂಳಲು ಗ್ರಾಮಸ್ಥರಿಂದ ವಿರೋಧ !

ಹಿಂದೂದ್ವೇಷಿ ಜಾರ್ಖಂಡ್ ಮುಕ್ತಿ ಮೋರ್ಚಾ ಅಧಿಕಾರದಲ್ಲಿರುವುದರಿಂದ ಜಾರ್ಖಂಡ್ ಹಿಂದೂಗಳ ಮತಾಂತರದ ತಾಣವಾಗಿ ಬಿಟ್ಟಿದೆ. ಕ್ರೈಸ್ತ ಪ್ರಚಾರಕರು ಆಮಿಷವೊಡ್ಡಿ ಮತ್ತು ಮನವೊಲಿಸಿ ಆದಿವಾಸಿಗಳನ್ನು ಮತಾಂತರ ಮಾಡುತ್ತಾರೆ. ಆದ್ದರಿಂದ ಪದ್ಧತಿ ಪರಂಪರೆಯನ್ನು ಪಾಲಿಸುವ ಮೂಲ ಆದಿವಾಸಿ ಮತ್ತು ಅವರನ್ನು ಕೀಳಾಗಿ ಕಾಣುವ ಮತಾಂತರಗೊಂಡಿರುವ ಆದಿವಾಸಿಗಳಲ್ಲಿ ಸಂಘರ್ಷವಾಗುವುದು, ಸಹಜವಾಗಿದೆ. ಆದ್ದರಿಂದ ಮತಾಂತರ ಇದು ಸಹಬಾಳ್ವೆ ಮಾಡುವ ಭಾರತೀಯ ಸಮಾಜಕ್ಕೆ ಅಂಟಿರುವ ಒಂದು ಅರ್ಬುದ ರೋಗವೇ ಆಗಿದೆ. ಅದು ಹೆಚ್ಚು ಹರಡುವ ಮುನ್ನ ಕೇಂದ್ರ ಸರಕಾರ ಮತಾಂತರ ನಿಷೇಧ ಕಾನೂನನ್ನು ಮಾಡುವುದು ಆವಶ್ಯಕವಾಗಿದೆ !

ರಾಂಚಿ (ಜಾರ್ಖಂಡ) – ಪಶ್ಚಿಮ ಸಿಂಹಭೂಭಾಗದಲ್ಲಿ ದುರುಲಾ ಎಂಬ ಗ್ರಾಮದಲ್ಲಿ ಮತಾಂತಗೊಂಡ ಆದಿವಾಸಿ ಕುಟುಂಬದ ವ್ಯಕ್ತಿಯೊಬ್ಬನ ಮೃತ್ಯುವಾಯಿತು. ನಂತರ ಆದಿವಾಸಿ ಸಮಾಜದವರು ಶವವನ್ನು ಸಸನ ದಿರಿ ಸ್ಮಶಾನಭೂಮಿಯಲ್ಲಿ ಆ ಮೃತದೇಹವನ್ನು ಹೂಳಲು ವಿರೋಧಿಸಿದರು. ಕೊನೆಗೆ ಪೊಲೀಸರ ಹಸ್ತಕ್ಷೇಪದಿಂದ ಆ ಕುಟುಂಬದ ಮನೆಯಂಗಳದಲ್ಲೇ ಮೃತದೇಹವನ್ನು ಹೂಳಲಾಯಿತು.
ಸೆಪ್ಟೆಂಬರ್ ೧೪ ರಂದು ಈ ಘಟನೆ ನಡೆದಿದೆ. ಸಂಬಂಧಪಟ್ಟ ಕುಟುಂಬದವರು ಮೃತದೇಹವನ್ನು ಹೂಳುವುದಕ್ಕಾಗಿ ಅಲ್ಲಿಯ ‘ಹೋ’ ಸಮುದಾಯದ ಸಸನ ದಿರಿ ಸ್ಮಶಾನಭೂಮಿಯಲ್ಲಿ ಗುಂಡಿ ತೋಡಲು ಪ್ರಾರಂಭಿಸಿದಾಗ ಅಲ್ಲಿಯ ಇತರ ಆದಿವಾಸಿ ಜನರು ಅದನ್ನು ನಿಲ್ಲಿಸಿದರು. ಈ ವಿಷಯವಾಗಿ ಗ್ರಾಮದ ಆದಿವಾಸಿ ‘ಹೋ’ ಸಮಾಜದ ಯುವ ಮಹಾಸಭೆಯ ಜನರಿಗೆ ಸೂಚನೆ ನೀಡಿದರು. ನಂತರ ಗ್ರಾಮದಲ್ಲಿ ಒಂದು ಸಭೆ ನಡೆಸಲಾಯಿತು. ಆ ಸಭೆಯಲ್ಲಿ ‘ಸಂಬಂಧಿತ ಕುಟುಂಬದ ಮೃತದೇಹವನ್ನು ಸ್ಮಶಾನಭೂಮಿಯಲ್ಲಿ ಹೂಳಲಾಗುವುದಿಲ್ಲ’, ಎಂದು ನಿರ್ಣಯ ತೆಗೆದುಕೊಂಡರು. ಈ ಪ್ರಕರಣ ಪೊಲೀಸರ ವರೆಗೆ ತಲುಪಿದ ನಂತರ ಪೊಲೀಸರ ಹಸ್ತಕ್ಷೇಪದಿಂದ ಮತಾಂತರಗೊಂಡ ಕುಟುಂಬವು ಅವರ ಮನೆಯ ಅಂಗಳದಲ್ಲಿಯೇ ಮೃತದೇಹವನ್ನು ಹೂಳಲು ನಿರ್ಣಯ ತೆಗೆದುಕೊಂಡರು. ‘ಹೊ’ ಸಮಾಜದ ಪ್ರಕಾರ, ಆದಿವಾಸಿ ಕುಟುಂಬ ಮತಾಂತರ ಆದನಂತರ ಅವರು ಕುಟುಂಬದ ವ್ಯಕ್ತಿಯ ಮೃತದೇಹವನ್ನು ಸಮಾಜದ ಸಸನ ದೀರಿ ಸ್ಮಶಾನಭೂಮಿಯಲ್ಲಿ ಹೂಳಲಾಗುವುದಿಲ್ಲ ಎಂದು ಹೇಳಿದರು.