ಹಿಂದೂ ರಾಷ್ಟ್ರದ ಬೇಡಿಕೆ ಮಾಡುವುದು ಎಂದರೆ ಎರಡು ಧರ್ಮಗಳ ನಡುವೆ ವೈರತ್ವವನ್ನು ಸೃಷ್ಟಿಸುವುದಲ್ಲ!

ದೆಹಲಿ ಉಚ್ಚನ್ಯಾಯಾಲಯದಲ್ಲಿ ಹಿಂದುತ್ವನಿಷ್ಠ ವಕೀಲ ವಿಷ್ಣು ಶಂಕರ ಜೈನ ಅವರ ಯುಕ್ತಿವಾದ

ಏನಿದು ಸೆಕ್ಷನ್ 153 ?

ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಸಮಾಜದ ಶಾಂತಿಯನ್ನು ಭಂಗಗೊಳಿಸುವುದು, ಗಲಭೆ ನಿರ್ಮಿಸುವುದು ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ರ ಅಡಿಯಲ್ಲಿ ಅಪರಾಧವನ್ನು ದಾಖಲಿಸಲಾಗುತ್ತದೆ.

ನವ ದೆಹಲಿ : ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂದೂ ರಾಷ್ಟ್ರದ ಬೇಡಿಕೆ ಮಾಡುವುದು, ಎಂದರೆ ಎರಡು ಧರ್ಮಗಳ ನಡುವೆ ದ್ವೇಷವನ್ನು ಸೃಷ್ಟಿಸುವುದು ಎಂದರ್ಥವಲ್ಲ. ನಾನು ಅತ್ಯಂತ ಜವಾಬ್ದಾರಿಯುತವಾಗಿ ಹೇಳುತ್ತಿದ್ದೇನೆಂದರೆ, `ಹಿಂದೂ ರಾಷ್ಟ್ರ’ದ ಬೇಡಿಕೆ ಮಾಡುವುದು ಅಂದರೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ರ ಅಡಿಯಲ್ಲಿ ಅಪರಾಧ ಎಂದು ನ್ಯಾಯಾಲಯ ಭಾವಿಸಿದರೆ, ನಾನು ಆರೋಪಿಯ ಜಾಮೀನಿಗಾಗಿ ಅರ್ಜಿ ಸಲ್ಲಿಸುವುದಿಲ್ಲ ಎಂಬ ಯುಕ್ತಿವಾದವನ್ನು ಹಿಂದುತ್ವನಿಷ್ಠ ನ್ಯಾಯವಾದಿ ವಿಷ್ಣುಶಂಕರ ಜೈನ ಇವರು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ತಮ್ಮ ಕಕ್ಷಿದಾರರಾದ ಪ್ರೀತ ಸಿಂಗರ ಪರವಾಗಿ ಮಂಡಿಸಿದರು. ಕೆಲವು ವಾರಗಳ ಹಿಂದೆ, ಪ್ರೀತ ಸಿಂಗ ಇವರು ದೆಹಲಿಯ ಜಂತರ್ ಮಂತರ್‍ನಲ್ಲಿ ಆಂದೋಲನವನ್ನು ಆಯೋಜಿಸಿದ್ದರು. ಆ ಸಮಯದಲ್ಲಿ ಆಕ್ಷೇಪಾರ್ಹ ಘೋಷಣೆಯನ್ನು ಮಾಡಿದ ಆರೋಪದ ಮೇಲೆ ಪ್ರೀತ ಸಿಂಗರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಬಂಧಿಸಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಎರಡೂ ಪಕ್ಷಗಳ ಯುಕ್ತಿವಾದಗಳನ್ನು ಆಲಿಸಿದ ನಂತರ ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿದೆ. ಈ ಪ್ರಕರಣದ ಪ್ರಮುಖ ಆಯೋಜಕರಾಗಿರುವ ಬಿಜೆಪಿ ನಾಯಕ ಮತ್ತು ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ ಅವರಿಗೆ ಜಾಮೀನು ನೀಡಲಾಗಿದೆ.

ನ್ಯಾಯವಾದಿ ವಿಷ್ಣುಶಂಕರ ಜೈನ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ನನ್ನ ಕಕ್ಷಿದಾರರು ಸೆಕ್ಷನ್ 153ರ ಅಡಿಯಲ್ಲಿ ಅಪರಾಧಕ್ಕೆ ಕಾರಣವಾಗಬಹುದಾದಂತ ಯಾವುದೇ ಹೇಳಿಕೆಯನ್ನು ನೀಡಿಲ್ಲ, ಆಂದೋಲನವು ಮಧ್ಯಾಹ್ನ 11.45 ಕ್ಕೆ ಕೊನೆಗೊಂಡಿತು ಮತ್ತು ಸಂಜೆ 4.45 ಕ್ಕೆ ಆಕ್ಷೇಪಾರ್ಹ ಘೋಷಣೆ ನೀಡಲಾಗಿತ್ತು. ನನ್ನ ಕಕ್ಷಿದಾರರು ಆ ಸಮಯದಲ್ಲಿ ಅಲ್ಲಿ ಉಪಸ್ಥಿತರಿರಲಿಲ್ಲ ಎಂದು ಹೇಳಿದರು.