ಕೊರೊನಾ ನಿಯಮಗಳನ್ನು ಪಾಲಿಸಿ ಚಾರಧಾಮ ಯಾತ್ರೆಯನ್ನು ಪ್ರಾರಂಭಿಸಿ ! – ಉತ್ತರಾಖಂಡ ಉಚ್ಚ ನ್ಯಾಯಾಲಯದ ಆದೇಶ

ಡೆಹರಾಡೂನ (ಉತ್ತರಾಖಂಡ) – ಉತ್ತರಾಖಂಡ ಉಚ್ಚ ನ್ಯಾಯಾಲಯವು ಕೊರೊನಾದ ನಿಯಮಗಳ ಪಾಲಿಸಿ ಚಾರಧಾಮ ಯಾತ್ರೆ ಪ್ರಾರಂಭ ಮಾಡಬೇಕೆಂದು ಆದೇಶ ನೀಡಿದೆ. ಜೂನ ತಿಂಗಳಲ್ಲಿ ಈ ಯಾತ್ರೆಯ ಮೇಲೆ ನಿಷೇಧ ಹೇರಲಾಗಿತ್ತು.

1. ನ್ಯಾಯಾಲಯದ ಆದೇಶದಲ್ಲಿ, ಬದ್ರಿನಾಥ ಧಾಮದಲ್ಲಿ ಪ್ರತಿದಿನ 1 ಸಾವಿರ 200, ಕೇದಾರನಾಥ ಧಾಮದಲ್ಲಿ 800, ಗಂಗೋತ್ರಿಯಲ್ಲಿ 600 ಮತ್ತು ಯಮುನೋತ್ರಿಯಲ್ಲಿ 400 ಯಾತ್ರಿಕರು ಹೋಗಬಹುದು ಎಂದು ಅನುಮತಿ ನೀಡಿದೆ. ಅದೇ ರೀತಿ ಯಾತ್ರಿಕರು ಯಾವುದೇ (ಜಲಾಶಯದ) ಕಲ್ಯಾಣಿಗಳಲ್ಲಿ ಸ್ನಾನ ಮಾಡುವಂತಿಲ್ಲ. ಪ್ರತಿಯೊಬ್ಬ ಯಾತ್ರಿಕರು ಕೊರೊನಾ ಆಗಿಲ್ಲ ಎಂಬ ವರದಿ ಮತ್ತು ಲಸಿಕೆಯ ಎರಡು ಡೋಸ ತೆಗೆದುಕೊಂಡಿರುವ ಪ್ರಮಾಣಪತ್ರವನ್ನು ತಮ್ಮ ಜೊತೆಯಲ್ಲಿಟ್ಟು ಕೊಳ್ಳಬೇಕು.

2. ಸರಕಾರದ ವತಿಯಿಂದ ಮಹಾನ್ಯಾಯವಾದಿ ಮಾತನಾಡುತ್ತಾ, ಕೊರೊನಾ ಸೋಂಕು ಈಗ ನಿಯಂತ್ರಣದಲ್ಲಿದೆ, ಇಂತಹ ಪರಿಸ್ಥಿತಿಯಲ್ಲಿ ಚಾರಧಾಮ ಯಾತ್ರೆ ನಿಷೇಧವನ್ನು ಹಿಂಪಡೆಯಬೇಕು. ಸರಕಾರದಿಂದ ಯಾತ್ರಿಕರಿಗಾಗಿ ಹೊಸ ನಿಯಮಗಳನ್ನು ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.