ಮಧ್ಯಪ್ರದೇಶದ ಶಂಕರಪುರದಲ್ಲಿ ಸರಕಾರಿಕರಣವಾದ ದೇವಸ್ಥಾನದ ಭೂಮಿಯ ಕಾನೂನು ಬಾಹಿರ ಮಾರಾಟ!

* ದೇವಸ್ಥಾನಗಳ ಸರಕಾರೀಕರಣದ ದುಷ್ಪರಿಣಾಮವನ್ನು ಅರಿಯಿರಿ ! ಕೇವಲ ಮಧ್ಯಪ್ರದೇಶದಲ್ಲಿ ಮಾತ್ರವಲ್ಲ, ಭಾರತದಲ್ಲಿ ಅನೇಕ ಕಡೆಗಳಲ್ಲಿ ದೇವಸ್ಥಾನದ ಭೂಮಿಯನ್ನು ಕಬಳಿಸಲಾಗುತ್ತಿದೆ. ಇಂತಹ ದುಷ್ಕೃತ್ಯಗಳನ್ನು ತಡೆಗಟ್ಟಲು ದೇವಸ್ಥಾನಗಳ ಸರಕಾರೀಕರಣವನ್ನು ತಡೆಯುವುದು ಅವಶ್ಯಕವಾಗಿದೆ! – ಸಂಪಾದಕರು

* ಸರಕಾರಿಕರಣವಾದ ದೇವಸ್ಥಾನಗಳ ಭೂಮಿಯ ಮಾರಾಟವಾಗುತ್ತಿರುವಾಗ ಸರಕಾರ ನಿದ್ರಿಸುತ್ತಿತ್ತೇನು?- ಸಂಪಾದಕರು

* ಮಧ್ಯಪ್ರದೇಶದಲ್ಲಿ, ಹಾಗೂ ಕೇಂದ್ರದಲ್ಲಿಯೂ ಭಾಜಪದ ಸರಕಾರವಿದೆ. ಇಂತಹ ದುಷ್ಕೃತ್ಯಗಳನ್ನು ತಡೆಗಟ್ಟಲು ಭಾಜಪ ಸರಕಾರವು ದೇವಸ್ಥಾನ ಸರಕಾರೀಕರಣದ ವಿರುದ್ಧ ಕಾನೂನುಗಳನ್ನು ಏಕೆ ಮಾಡುತ್ತಿಲ್ಲ ? -ಸಂಪಾದಕರು

ಉಜ್ಜಯಿನಿ – ಸದ್ಯದಲ್ಲಿ ಶಂಕರಪುರದಲ್ಲಿನ ಸರಕಾರೀಕರಣವಾದ ಶ್ರೀ ಚಾರಭುಜಾ ನಾರಾಯಣ ದೇವಸ್ಥಾನದ ಅರ್ಚಕರಾದ ನಾರಾಯಣ ಬೈರಾಗಿ ಇವರ ನಿಧನವಾಯಿತು. ಅನಂತರ ಅವರ ಹೆಂಡತಿ ವಿಷ್ಣುಬಾಯಿ ಬೈರಾಗಿ ಮತ್ತು ಮಗ ರಾಹುಲ ಬೈರಾಗಿಯವರು ದೇವಸ್ಥಾನದ ಭೂಮಿಯನ್ನು ಇಂದೂರಿನ ದೇವೇಂದ್ರಸಿಂಹ ಬುಂದೆಲಾರವರಿಗೆ ಕಾನೂನುಬಾಹಿರವಾಗಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಆದುದರಿಂದ ಸರಕಾರವು ಈ ಭೂಮಿಯನ್ನು ಪುನಃ ತನ್ನ ವಶಕ್ಕೆ ಪಡೆದುಕೊಳ್ಳಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಮತ್ತು ಮಧ್ಯಪ್ರದೇಶ ಯುವಾ ಶಿವಸೇನಾ ಗೋರಕ್ಷಕ ನ್ಯಾಸದ ವತಿಯಿಂದ ಮನವಿ ನೀಡಲಾಯಿತು. (ಇಂತಹ ಮನವಿಯನ್ನು ಏಕೆ ನೀಡಬೇಕಾಗುತ್ತದೆ ? ಇಲ್ಲಿ ಸರಕಾರವು ಸ್ವತಃ ಕಾರ್ಯಾಚರಣೆ ಮಾಡುವುದು ಅಪೇಕ್ಷಿತವಿದೆ ! – ಸಂಪಾದಕರು)

ವಿಷ್ಣುಬಾಯಿ ಬೈರಾಗಿ, ರಾಹುಲ ಬೈರಾಗಿ ಇವರು ಸುಳ್ಳು ಕಾಗದ ಪತ್ರಗಳನ್ನು ತಯಾರಿಸಿ ಶ್ರೀ ಚಾರಬುಜ ನಾರಾಯಣ ದೇವಸ್ಥಾನದ ಭೂಮಿಯನ್ನು ದೇವೇಂದ್ರ ಸಿಂಹ ಬುಂದೆಲಾರವರಿಗೆ 5 ಲಕ್ಷ ರೂಪಾಯಿಗಳಿಗೆ ಮಾರಿದ್ದಾರೆ ಎಂದು ಆರೋಪಿಸಲಾಗಿದೆ. ದೇವಸ್ಥಾನದ ಇತರ ಭೂಮಿಯನ್ನು ಬುಂದೆಲಾರವರಿಗೆ 8 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡುವ ವ್ಯವಹಾರ ನಡೆದಿತ್ತು. ಅರ್ಚಕರಾದ ನಾರಾಯಣ ಬೈರಾಗಿ ಅವರ ನಿಧನದ ನಂತರ ರಾಹುಲ ಬೈರಾಗಿ ಇವರ ಹೆಸರನ್ನು ಸರಕಾರಿ ಅರ್ಚಕರೆಂದು ನೋಂದಾಯಿಸಲಾಗಿಲ್ಲ. ಸರಕಾರಿ ಕಾಗದ ಪತ್ರಗಳ ಅನುಸಾರ ಈ ಭೂಮಿಯ ಜವಾಬ್ದಾರಿಯು ಸಂಪೂರ್ಣವಾಗಿ ಜಿಲ್ಲಾಧಿಕಾರಿಯದ್ದಾಗಿರುತ್ತದೆ. ಹೀಗಿರುವಾಗಲೂ ದೇವಸ್ಥಾನದ ಭೂಮಿಯನ್ನು ಮಾರಲಾಗಿದೆ. ಆದುದರಿಂದ ಈ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕೆಂದು ವಿನಂತಿಸಲಾಗುತ್ತಿದೆ.