‘ಇಸ್ಕಾನ್’ನ ಸಂಸ್ಥಾಪಕರಾದ ಶ್ರೀ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಇವರ 125 ನೇ ಜಯಂತಿ ನಿಮಿತ್ತ ಗೌರವಸಮರ್ಪಣೆ !

ಪ್ರಧಾನಿ ನರೇಂದ್ರ ಮೋದಿ ಇವರ ಹಸ್ತದಿಂದ 125 ರೂಪಾಯಿಯ ವಿಶೇಷ ನಾಣ್ಯ ಬಿಡುಗಡೆ !

ನವದೆಹಲಿ – ‘ಇಂಟರನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕ್ಯಾಂಶಿಯಸನೆಸ(ಇಸ್ಕಾನ)’ನ ಸಂಸ್ಥಾಪಕ ಶ್ರೀ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಇವರ 125 ನೇ ಜಯಂತಿ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಇವರ ಹಸ್ತದಿಂದ 125 ರೂಪಾಯಿಯ ವಿಶೇಷ ನಾಣ್ಯವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಈ ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭ ಮತ್ತು 125 ರೂಪಾಯಿ ಬರೆದಿರುವುದು ಇದ್ದೂ ಇನ್ನೊಂದು ಬದಿಗೆ ಸ್ವಾಮಿ ಪ್ರಭುಪಾದರ ಪ್ರತಿಮೆ ಇದೆ. ವಿಶಿಷ್ಟ ಮಹಾಪುರುಷರ ಗೌರವಾರ್ಥ ವಿಶೇಷ ನಾಣ್ಯವನ್ನು ಬಿಡುಗಡೆಗೊಳಿಸಲಾಗುತ್ತದೆ. ಈ ಮೊದಲೂ ಕೂಡ ಪ್ರಧಾನಿ ಮೋದಿಯವರು ನೇತಾಜಿ ಸುಭಾಷಚಂದ್ರ ಬೋಸರ ಜಯಂತಿ ನಿಮಿತ್ತ 125 ರೂಪಾಯಿಯ ನಾಣ್ಯವನ್ನು ಬಿಡುಗಡೆ ಮಾಡಿದ್ದರು. ನಾಗರಿಕರಿಗೆ ಇಂತಹ ನಾಣ್ಯಗಳನ್ನು ಖರೀದಿಸಲು ಭಾರತೀಯ ರಿಸರ್ವ ಬ್ಯಾಂಕ್ ನಿಗದಿಪಡಿಸಿರುವ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಅದಕ್ಕಾಗಿ ಮುಂಗಡವಾಗಿ ಕಾಯ್ದಿರಿಸಲು https://www.spmcil.com/Interface/Home.aspx ಈ ಜಾಲತಾಣದಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.