ನವದೆಹಲಿ – ಹಿಂದೂಗಳ ಸಂಸ್ಕೃತಿ ಮತ್ತು ಹಿಂದೂಗಳ ಧೈರ್ಯ ಕುಗ್ಗಿಸುವುದೇ ಉಗ್ರರ ರಾಜಕೀಯ ಗುರಿಯಾಗಿದೆ. ಅವರಿಗೆ ಭಾರತದ ಮೂಲಭೂತ ಆಧಾರವನ್ನೇ ದುರ್ಬಲ ಮಾಡಲಿಕ್ಕಿದೆ. ಆದಕಾರಣ ಭಾರತವು ಎಂದಿಗೂ ಉಗ್ರರ ಬೇಡಿಕೆಗಳಿಗೆ ಸೊಪ್ಪು ಹಾಕಬಾರದು, ಎಂದು ಭಾಜಪದ ನಾಯಕ ಮತ್ತು ಸಂಸದರಾದ ಡಾ.ಸುಬ್ರಹ್ಮಣ್ಯಸ್ವಾಮಿ ಇವರು ತಮ್ಮ ಹೊಸ ಪುಸ್ತಕದಲ್ಲಿ ಪ್ರತಿಪಾದಿಸಿದ್ದಾರೆ. ಹ್ಯೂಮನ್ ರೈಟ್ಸ್ ಅಂಡ್ ಟೆರರಿಸಂ ಇನ್ ಇಂಡಿಯಾ (ಭಾರತದಲ್ಲಿನ ಮಾನವ ಅಧಿಕಾರ ಮತ್ತು ಭಯೋತ್ಪಾದನೆ) ಎಂದು ಈ ಪುಸ್ತಕದ ಹೆಸರಾಗಿದೆ. ಈ ಪುಸ್ತಕದಲ್ಲಿ ಡಾ. ಸ್ವಾಮಿ ಇವರು ಭಯೋತ್ಪಾದನೆಯನ್ನು ಎದುರಿಸಲು ಮಾಡಬೇಕಾದ ಯೋಗ್ಯ ಉಪಾಯ ಯೋಜನೆಗಳ ಸಹಿತ ಮಾನವೀಯ ಮತ್ತು ಮೂಲಭೂತ ಅಧಿಕಾರ ಇದರ ಸಮನ್ವಯ ಹೇಗೆ ಮಾಡಬೇಕು, ಎಂಬ ವಿಷಯದಲ್ಲಿ ಮಾಹಿತಿಯನ್ನು ಕೊಟ್ಟಿದ್ದಾರೆ. ವರ್ಷ 1999 ರಲ್ಲಿ ಭಯೋತ್ಪಾದಕರು ಇಂಡಿಯನ್ ಏರ ಲೈನ್ಸ್‍ನ ವಿಮಾನವನ್ನು ಅಪಹರಿಸಿ ಕಂದಹಾರಕ್ಕೆ ತೆಗೆದುಕೊಂಡು ಹೋಗಿದ್ದರು ಮತ್ತು ಪ್ರವಾಸಿಗರ ಬಿಡುಗಡೆಯ ಬದಲು 5 ಮಂದಿ ಉಗ್ರರನ್ನು ಬಿಡುಗಡೆ ಮಾಡಬೇಕೆಂಬ ಬೇಡಿಕೆಯನ್ನು ಇಟ್ಟಿದ್ದರು. ಆಗ ಇದಕ್ಕೆ ಒಪ್ಪಿ ಭಾರತವು ಸ್ವೀಕರಿಸಿದ ಶರಣಾಗತಿಯು ಹೇಗೆ ಅಯೋಗ್ಯವಾಗಿತ್ತು ಎಂಬುದನ್ನು ಸಹ ಡಾ. ಸ್ವಾಮಿಯವರು ತಮ್ಮ ಪುಸ್ತಕದಲ್ಲಿ ನಮೂದಿಸಿದ್ದಾರೆ.
Kandahar 1999 episode worst capitulation to terrorists in India’s modern history: Subramanian Swamy https://t.co/KIUrrtK2R0
— Subramanian Swamy (@Swamy39) September 13, 2021
ಈ ಪುಸ್ತಕದಲ್ಲಿ ಡಾ. ಸ್ವಾಮಿಯವರು ಮುಂದೆ ಹೀಗೆ ಬರೆದಿದ್ದಾರೆ, ಈಗ ಭಾರತ ದೇಶವನ್ನು ಪಾಕಿಸ್ತಾನ, ತಾಲಿಬಾನನ ಅಧಿಪತ್ಯದಡಿಯಲ್ಲಿರುವ ಅಪಘಾನಿಸ್ತಾನ, ಇಸ್ಲಾಮಿಕ್ ಸ್ಟೇಟ್ಸ್ ಮತ್ತು ಅನ್ಯ ಉಗ್ರರ ಸಂಘಟನೆ, ಹಾಗೂ ಚೀನಾದ ಸಮರ್ಥಕ ಪೂರ್ವಭಾರತದಲ್ಲಿರುವ ಉಗ್ರರು ಸುತ್ತುವರೆದಿದ್ದಾರೆ. ನಮಗೆ ಅಲ್ಲಲ್ಲಿ ಇಷ್ಟಿಷ್ಟು ಅಲ್ಲ, ಆದರೆ ಪೂರ್ಣ ಕ್ಷಮತೆಯಿಂದ ಮತ್ತು ಪ್ರಭಾವಶಾಲಿಯಾಗಿ ಇದಕ್ಕೆ ಪರಿಹಾರ ಮಾಡಬೇಕಾದ ಅವಶ್ಯಕತೆ ಇದೆ. ಈ ಮೊದಲು ಪ್ರತ್ಯಕ್ಷ ಅಥವಾ ಪರೋಕ್ಷ ಸ್ವರೂಪದಲ್ಲಿ ಇಂತಹ ವಿಧ್ವಂಸಕಾರಿ ಶಕ್ತಿಗಳು ಭಾರತಕ್ಕೆ ಅಪಾಯವನ್ನುಂಟು ಮಾಡಿರಲಿಲ್ಲ ಮತ್ತು ಅತ್ಯಾಚಾರದಿಂದ ಭಾರತದಲ್ಲಿನ ಶಾಂತಿಪ್ರಿಯ ಜನರನ್ನು ಭಯಭೀತಗೊಳಿಸಿರಲಿಲ್ಲ.