Exclusive : ಭವಿಷ್ಯದಲ್ಲಿ ತಾಲಿಬಾನ ಕಾಶ್ಮೀರದ ಮೇಲೆ ಆಕ್ರಮಣ ಮಾಡಬಹುದು ! – ಕೊನರೆಡ್ ಎಲ್‌ಸ್ಟ್, ಲೇಖಕ, ಬೆಲ್ಜಿಯಂ

ಹೀಗೇನಾದರೂ ಆಗುವ ಮುನ್ನವೇ ತಾಲಿಬಾನಿಗೆ ಸಹಾಯ ಮಾಡುತ್ತಿರುವ ಪಾಕಿಸ್ತಾನವನ್ನು ಭಾರತವೇ ನಾಶ ಮಾಡಬೇಕು ! – ಸಂಪಾದಕರು

ಕೊನರೆಡ್ ಎಲ್‌ಸ್ಟ್

ಫೋಂಡಾ (ಗೋವಾ) – ಸಾಮ್ಯವಾದಿಗಳು ಮೊಟ್ಟಮೊದಲಿಗೆ ಸೋವಿಯತ್ ಒಕ್ಕೂಟದಲ್ಲಿ ತಮ್ಮನ್ನು ಸ್ಥಾಪಿಸಿಕೊಂಡರು. ಅನಂತರ ಪೋಲೆಂಡ್, ಹಾಗೆಯೇ ಪೂರ್ವದಲ್ಲಿನ ಯುರೋಪಿಯನ್ ದೇಶಗಳಲ್ಲಿ ತಮ್ಮ ವಿಚಾರಸರಣಿಯನ್ನು ಬೇರೂರಲು ಪ್ರಯತ್ನಿಸಿದ್ದರು. ಅದರಂತೆಯೇ ತಾಲಿಬಾನಿನ ನಿಲುವು ಇರಬಹುದು. ಸದ್ಯ ತಾಲಿಬಾನ್ ತನ್ನನ್ನು ಅಫ್ಘಾನಿಸ್ತಾನದಲ್ಲಿ ಸ್ಥಾಪಿಸಲು ಸಮಯ ನೀಡಲಿದೆ; ಆದರೆ ಭವಿಷ್ಯದಲ್ಲಿ ಅದು ಕಾಶ್ಮೀರದ ಮೇಲೆ ಆಕ್ರಮಣ ಮಾಡುವ ಸಾಧ್ಯತೆಗಳಿವೆ. ಆದುದರಿಂದ ಭಾರತವು ಸದಾ ಎಚ್ಚರದಿಂದಿರುವುದು ಅವಶ್ಯಕವಾಗಿದೆ, ಎಂದು ಬೆಲ್ಜಿಯಂನ ಜಗತ್ಪ್ರಸಿದ್ಧ ಲೇಖಕರು ಮತ್ತು ಹಿಂದೂ ಧರ್ಮದ ಆಳವಾದ ಅಧ್ಯಯನಕಾರರಾದ ಕೊನರೆಡ್ ಎಲ್ಸ್ಟ ರವರು ಪ್ರತಿಪಾದಿಸಿದ್ದಾರೆ. ಅವರು ದೈನಿಕ ‘ಸನಾತನ ಪ್ರಭಾತ’ದ ಪ್ರತಿನಿಧಿಯೊಂದಿಗೆ ದೂರವಾಣಿಯ ಮೂಲಕ ಸಂಪರ್ಕಿಸಿ ಮೇಲಿನ ಮಾಹಿತಿಯನ್ನು ನೀಡಿದರು.

‘ಡಿಸ್‌ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ (ಜಾಗತಿಕ ಸ್ತರದಲ್ಲಿ ಹಿಂದುತ್ವದ ಉಚ್ಚಾಟನೆ) ಎಂಬ ಕಾರ್ಯಕ್ರಮದ ಸಂದರ್ಭದಲ್ಲಿ ಎಲ್ಸ್ಟರು ‘ಇಸ್ಲಾಮಿ ಭಯೋತ್ಪಾದನೆಯಿಂದ ಜಗತ್ತಿನ ಗಮನವನ್ನು ಬೇರೆಡೆ ಸೆಳೆಯಲು ಹಾಗೆಯೇ ಹಿಂದೂಗಳಲ್ಲಿ ಕೀಳರಿಮೆಯ ಭಾವನೆಯನ್ನು ಹೆಚ್ಚಿಸಲು ‘ಡಿಸ್‌ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. (ಇಂತಹ ಕಾರ್ಯಕ್ರಮಗಳ ಮಾಧ್ಯಮದಿಂದ ನಡೆಸಲಾಗುವ ಹಿಂದೂವಿರೋಧಿ ಷಡ್ಯಂತ್ರಗಳನ್ನು ಮಟ್ಟಹಾಕಲು ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದು ಅವಶ್ಯಕವಾಗಿದೆ. ಇದರಿಂದ ಹಿಂದೂಗಳ ಪ್ರಭಾವಿ ಸಂಘಟನೆ ಮತ್ತು ಹಿಂದೂದ್ವೇಷಿಗಳ ವೈಚಾರಿಕ ಭಯೋತ್ಪಾದನೆಯನ್ನು ತಡೆದು ಖಂಡಿಸಲು ಸಹಜವಾಗಿ ಸಾಧ್ಯವಾಗಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು) ಇಂದು ಅನೇಕ ಪಾಶ್ಚಾತ್ಯ ವಿಚಾರವಂತರು ಹಿಂದೂ ಧರ್ಮದಲ್ಲಿನ ರೂಢಿಗಳ ಮೇಲೆ ಮೇಲುಮೇಲಿನ ಅಧ್ಯಯನ ಮಾಡುತ್ತಾರೆ. ಹಿಂದೂ ಧರ್ಮದಲ್ಲಿನ ಜಾತಿ ವ್ಯವಸ್ಥೆಯನ್ನು ಟೀಕಿಸುತ್ತಾರೆ. ಆರ್ಯರ ಆಕ್ರಮಣದ ಸಿದ್ಧಾಂತವನ್ನು ಸತ್ಯವೆಂದು ತಿಳಿದು ಹಿಂದೂ ಧರ್ಮವನ್ನು ವಿರೋಧಿಸಲಾಗುತ್ತಿದೆ. ಹಿಂದೂ ಧರ್ಮದ ಬಗ್ಗೆ ಹಿಂದೂ ವಿರೋಧಕರ ಜ್ಞಾನವು ಅತ್ಯಂತ ಕ್ಷುಲ್ಲಕವಾಗಿದೆ’ ಎಂದು ಹೇಳಿದರು. (ಯಾವುದು ಬೆಲ್ಜಿಯಮ್ ನಂತಹ ಪಾಶ್ಚಾತ್ಯ ಯುರೋಪಿನ ದೇಶಗಳಲ್ಲಿನ ಓರ್ವ ವಿದ್ವಾಂಸನ ಗಮನಕ್ಕೆ ಬರುತ್ತದೆ, ಅದು ಭಾರತದಲ್ಲಿನ ಯಾವುದೇ ರಾಜಕಾರಣಿಯ ಗಮನಕ್ಕೆ ಏಕೆ ಬರುವುದಿಲ್ಲ ? ಆದುದರಿಂದಲೇ ವಿದೇಶದಲ್ಲಿನ ಹಿಂದೂವಿರೋಧಿ ಕಾರ್ಯಕ್ರಮಗಳನ್ನು ತಡೆಯಲು ಭಾರತ ಸರಕಾರದಿಂದ ಯಾವುದೇ ಪ್ರಯತ್ನಗಳಾಗುತ್ತಿಲ್ಲ ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು)

ಕಳೆದ ಅನೇಕ ವರ್ಷಗಳಲ್ಲಿ ಯುರೋಪಿನ ದೇಶಗಳಲ್ಲಿ ಆಶ್ರಯ ಪಡೆದಿರುವ ಲಕ್ಷಾಂತರ ಮುಸಲ್ಮಾನ ಶರಣಾರ್ಥಿಗಳ ಸದ್ಯದ ಸ್ಥಿತಿಯಲ್ಲಿ ಬೆಳಕು ಚೆಲ್ಲುತ್ತಾ ಎಲ್ಸ್ಟ ರವರು ‘ಶರಣಾರ್ಥಿಗಳನ್ನು ಯುರೋಪಿನ ಸಂಸ್ಕೃತಿಯಲ್ಲಿ ಸೇರಿಸಲು ಅಲ್ಲಿನ ಸರಕಾರಗಳಿಂದ ಪ್ರಯತ್ನಗಳಾಗುತ್ತಿವೆ. ಅನೇಕ ಶರಣಾರ್ಥಿಗಳು ಅಲ್ಲಿನ ಸಂಸ್ಕೃತಿಯನ್ನು ಸ್ವೀಕರಿಸಲು ಪ್ರಯತ್ನಿಸುತ್ತಾರೆ, ಆದರೆ ಕೆಲವು ಜನರಲ್ಲಿ ಇಸ್ಲಾಮಿ ಸಂವೇದನೆಯು ಜಾಗೃತವಾಗಿರುವುದರಿಂದ ಅವರಿಗೆ ಯುರೋಪಿನ ಸಂಸ್ಕೃತಿಯ ಭಾಗವಾಗಲು ಅಡಚಣೆ ಬರಬಹುದು’ ಎಂದು ಹೇಳಿದ್ದಾರೆ.