ಅಯೋಧ್ಯೆಯಲ್ಲಿ ನಡೆಯುವ ದೀಪೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸುವ ಸಾಧ್ಯತೆ

ಪ್ರಧಾನಿ ನರೇಂದ್ರ ಮೋದಿ

ನವದೆಹಲಿ – ಶ್ರೀರಾಮನ ಅಯೋಧ್ಯೆಯಲ್ಲಿ ದೀಪಾವಳಿಯ ಸಂದರ್ಭದಲ್ಲಿ, ಉತ್ತರಪ್ರದೇಶ ಸರಕಾರದ ವತಿಯಿಂದ ದೀಪೋತ್ಸವವನ್ನು ಆಚರಿಸಲಾಗುತ್ತದೆ. ಈ ವರ್ಷದ ದೀಪೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ದರಿಂದ, ಈ ದೀಪೋತ್ಸವವು ವೈಭವೋಪೇತವಾಗಿರುವ ಸಾಧ್ಯತೆಯಿದೆ. 2017 ರಲ್ಲಿ ಉತ್ತರಪ್ರದೇಶದ ಯೋಗಿ ಸರಕಾರವು ದೀಪೋತ್ಸವ ಕಾರ್ಯಕ್ರಮವನ್ನು ಆರಂಭಿಸಿತ್ತು. ಆದ್ದರಿಂದ, ಇದು ಅಯೋಧ್ಯೆಯಲ್ಲಿ 5 ನೇ ದೀಪೋತ್ಸವವಾಗಲಿದೆ. ಈ ದೀಪೋತ್ಸವದಲ್ಲಿ 7,500 ಸ್ವಯಂಸೇವಕರ ಸಹಾಯದಿಂದ 7 ಲಕ್ಷ 50 ಸಾವಿರ ದೀಪಗಳನ್ನು ಬೆಳಗಿಸಲಾಗುವುದು ಎಂದು ಅಯೋಧ್ಯೆ ಮಹಾನಗರ ಪಾಲಿಕೆಯ ಮೇಯರ ಋಷಿಕೇಶ ಉಪಾಧ್ಯಾಯ ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ದೀಪೋತ್ಸವ ಕಾರ್ಯಕ್ರಮವನ್ನು ಧನತ್ರಯೋದಶಿ ದಿನದಂದು; ಅಂದರೆ, ಇದು ನವೆಂಬರ 2 ರಂದು ಆರಂಭವಾಗಲಿದೆ. ಆದ್ದರಿಂದ, ಅದೇ ದಿನ ಪ್ರಧಾನಿಯವರು ಅಯೋಧ್ಯೆಗೆ ಭೇಟಿ ನೀಡುವ ಸಾಧ್ಯತೆಯಿದೆ. ಸಿಕ್ಕಿರುವ ಮಾಹಿತಿಯ ಪ್ರಕಾರ, ಅಯೋಧ್ಯೆಯಲ್ಲಿನ ದೀಪಪ್ರಜ್ವಲನೆಯ ಕಾರ್ಯಕ್ರಮಕ್ಕೆ ರಾಜ್ಯಪಾಲ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಅನೇಕ ಕೇಂದ್ರ ಸಚಿವರು ಮತ್ತು ಉತ್ತರಪ್ರದೇಶ ಸರಕಾರದ ಹಲವಾರು ಮಂತ್ರಿಗಳು ಸಹ ಭಾಗವಹಿಸಲಿದ್ದಾರೆ.