‘ತಾಲಿಬಾನವು ಶರಿಯತ್ ಅನುಸಾರ ರಾಜ್ಯಾಡಳಿತ ನಡೆಸಬೇಕು! (ಅಂತೆ) – ಮೆಹಬೂಬಾ ಮುಫ್ತಿ

ಇಂದು ಅಫಘಾನಿಸ್ತಾನದಲ್ಲಿ ಜಿಹಾದಿ ಉಗ್ರರ ಆಡಳಿತ ಬಂದ ಮೇಲೆ ಮೆಹಬೂಬಾ ಮುಫ್ತಿ ಇವರು ಈ ರೀತಿಯ ಬೇಡಿಕೆ ಇಟ್ಟಿದ್ದಾರೆ. ನಾಳೆ ಕಾಶ್ಮೀರದಲ್ಲಿ ಮತ್ತು ಇಡೀ ಭಾರತದಲ್ಲಿ ಇದೇ ಸ್ಥಿತಿ ಬಂದರೆ ಅವರೇ ಅಷ್ಟೆ ಅಲ್ಲ ಎಲ್ಲಾ ಮತಾಂಧ ನಾಯಕರು ಇದೇ ಬೇಡಿಕೆ ಇಡುವರು, ಎಂಬುದನ್ನು ಗಮನದಲ್ಲಿಟ್ಟುಕೊಂಡು ಹಿಂದೂ ಘಾತಕವಾಗಿರುವ ಜಾತ್ಯತೀತವಾದಕ್ಕೆ ಶಾಶ್ವತವಾಗಿ ಎಳ್ಳು ನೀರು ಬಿಡಿ ಹಾಗೂ ಜನರ ಹಿತಕಾರಿ (ಲೋಕಕಲ್ಯಾಣಕರ)ಯಾದ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ !

ಮೆಹಬೂಬಾ ಮುಫ್ತಿ

ಶ್ರೀನಗರ (ಜಮ್ಮು – ಕಾಶ್ಮೀರ) – ತಾಲಿಬಾನ ಸದ್ಯ ವಾಸ್ತವವಾಗಿ ಬಿಟ್ಟಿದೆ, ಇದನ್ನು ತಿಳಿದುಕೊಳ್ಳಬೇಕು. ತಾಲಿಬಾನವು ಶರಿಯತ್ ಕಾನೂನಿನ ಪ್ರಕಾರ ಅಫಘಾನಿಸ್ತಾನದಲ್ಲಿ ಆಡಳಿತವನ್ನು ನಡೆಸಬೇಕು, ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಇವರು ಹೇಳಿದ್ದಾರೆ.