ದೇವಸ್ಥಾನದ ಸಂಪತ್ತಿಗೆ ಅರ್ಚಕರು ಅಥವಾ ವ್ಯವಸ್ಥಾಪಕರಲ್ಲ, ದೇವರೇ ಏಕೈಕ ಮಾಲೀಕರಾಗಿದ್ದಾರೆ ! – ಸರ್ವೋಚ್ಚ ನ್ಯಾಯಾಲಯ

ಅರ್ಚಕರು, ವ್ಯವಸ್ಥಾಪಕರು ಮತ್ತು ಇತರ ನೌಕರರು ಕೇವಲ ಸೇವಕರಾಗಿದ್ದಾರೆ !

ನ್ಯಾಯಾಲಯವು ಈಗ ದೇವಸ್ಥಾನ ಸರಕಾರೀಕರಣದ ಸಂದರ್ಭದಲ್ಲಿಯೂ ಇಂತಹ ಆದೇಶ ನೀಡಿ ದೇವಸ್ಥಾನಗಳನ್ನು ಭಕ್ತರ ವಶಕ್ಕೆ ನೀಡಬೇಕೆಂದು ಸರಕಾರಕ್ಕೆ ಸೂಚಿಸಬೇಕು ಎಂದು ಹಿಂದೂಗಳ ಅಪೇಕ್ಷೆಯಿದೆ ! – ಸಂಪಾದಕರು

ನವದೆಹಲಿ – ದೇವಸ್ಥಾನದ ಭೂಮಿಯ ಮತ್ತು ಸಂಪತ್ತಿನ ಬಗ್ಗೆ ಪ್ರಶ್ನೆ ಎದುರಾದಾಗ ಆ ದೇವಸ್ಥಾನದಲ್ಲಿನ ದೇವತೆಯನ್ನೇ ‘ಮಾಲೀಕ ‘ನೆಂದು ಸಂಬೋಧಿಸಬೇಕು. ಅರ್ಚಕರು ಕೇವಲ ಪೂಜೆ ಮಾಡುತ್ತಾರೆ ಮತ್ತು ಸಂಪತ್ತಿನ ವ್ಯವಸ್ಥಾಪನೆಯನ್ನು ನೋಡಿಕೊಳ್ಳುತ್ತಾರೆ. ಅರ್ಚಕರು ಅಥವಾ ವ್ಯವಸ್ಥಾಪಕರ ಹೆಸರನ್ನು ಆದಾಯದ ದಾಖಲೆಗಳಲ್ಲಿ ನಮೂದಿಸುವ ಅಗತ್ಯವೇ ಇಲ್ಲ; ಏಕೆಂದರೆ ಆ ಭೂಮಿಯ ಮಾಲೀಕತ್ವವು ಆಯಾ ದೇವತೆಗಳದ್ದಾಗಿರುತ್ತದೆ ಎಂಬ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ನೀಡಿದೆ.

1. ಮಧ್ಯಪ್ರದೇಶ ಸರಕಾರದ ಒಂದು ಅರ್ಜಿಯ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ಮಹತ್ವದ ತೀರ್ಪನ್ನು ನೀಡಿದೆ. ಮಧ್ಯಪ್ರದೇಶ ಸರಕಾರವು ಎರಡು ಆದೇಶಗಳ ಮೂಲಕ ಆದಾಯ ವಿಭಾಗದ ನೋಂದಣಿ ಪುಸ್ತಕದಲ್ಲಿ ಅರ್ಚಕರ ಹೆಸರನ್ನು ತೆಗೆಯುವ ಬಗ್ಗೆ ಘೋಷಿಸಿದೆ. ಅರ್ಚಕರು ಅನಧಿಕೃತವಾಗಿ ದೇವಸ್ಥಾನದ ಸಂಪತ್ತನ್ನು ಮಾರಬಾರದು ಎಂಬ ಉದ್ದೇಶದಿಂದ ಮಧ್ಯಪ್ರದೇಶದ ಸರಕಾರವು ಈ ಬಗ್ಗೆ ಎರಡು ಸುತ್ತೋಲೆಗಳನ್ನು ಹೊರಡಿಸಿತ್ತು. ಮಧ್ಯಪ್ರದೇಶದ ಉಚ್ಚ ನ್ಯಾಯಾಲಯವು ಈ ಸುತ್ತೋಲೆಯನ್ನು ರದ್ದುಪಡಿಸಿತ್ತು. ಇದನ್ನು ವಿರೋಧಿಸಿ ಮಧ್ಯಪ್ರದೇಶದ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಅರ್ಜಿಯನ್ನು ದಾಖಲಿಸಿತ್ತು.

2. ಸರ್ವೋಚ್ಚ ನ್ಯಾಯಾಲಯವು ‘ಮಾಲೀಕರು’ ಈ ಅಂಕಣದಲ್ಲಿ ದೇವತೆಯ ಹೆಸರನ್ನು ನಮೂದಿಸುವುದು ಅವಶ್ಯಕವಾಗಿದೆ, ಏಕೆಂದರೆ ಕಾನೂನಿನ ದೃಷ್ಟಿಯಲ್ಲಿ ದೇವರೇ ಆ ಭೂಮಿಯ ಮಾಲೀಕರಾಗಿದ್ದಾರೆ. ಆ ಭೂಮಿಯನ್ನು ದೇವತೆಯೇ ನೌಕರರು ಅಥವಾ ವ್ಯವಸ್ಥಾಪಕರ ಮಾಧ್ಯಮದಿಂದ ಬಳಕೆ ಮಾಡುತ್ತಿರುತ್ತಾರೆ. ಆದ್ದರಿಂದ ವ್ಯವಸ್ಥಾಪಕ ಅಥವಾ ಅರ್ಚಕರ ಹೆಸರನ್ನು ‘ಬಳಕೆದಾರರ’ ಅಂಕಣದಲ್ಲಿ ಬರೆಯುವ ಅವಶ್ಯಕತೆಯೇ ಇಲ್ಲ’ ಎಂದು ಹೇಳಿದೆ.

3. ನ್ಯಾಯಾಲಯವು ‘ಅರ್ಚಕರು ಕೇವಲ ಒಬ್ಬ ಸೇವಕರಾಗಿದ್ದು ಅವರು ಸಂಬಂಧಿತ ದೇವತೆಯ ಸೇವೆಯನ್ನು ಮಾಡುತ್ತಾರೆ. ಬಹಳಷ್ಟು ಸಮಯ ವಿವಿಧ ಉತ್ಸವ ಮತ್ತು ಕಾರ್ಯಗಳನ್ನು ಈ ಸೇವಕರು ಮಾಡಿರಬಹುದು. ಆದರೂ ಅವರಿಗೆ ಸ್ವತಂತ್ರ ಮಾಲೀಕತ್ವದ ಹಕ್ಕು ದೊರೆಯುವುದಿಲ್ಲ. ಎಲ್ಲ ಪುರಾವೆಗಳು ಸಂಬಂಧಿತ ಪೂಜಾರಿಯ ಕೆಲಸ ಕೇವಲ ಪೂಜೆ ಮಾಡುವುದಾಗಿದೆ ಮತ್ತು ಸೇವಕರ ಇತರ ಅಧಿಕಾರಗಳೂ ಅವರ ಬಳಿ ಇರುವುದಿಲ್ಲ ಎಂಬುದನ್ನು ತೋರಿಸುತ್ತವೆ’ ಎಂದು ಹೇಳಿದೆ.

4. ಸಂಬಂಧಿತ ನಿಯಮಗಳು ಮತ್ತು ಹಿಂದಿನ ತೀರ್ಪನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯವು ‘ವ್ಯವಸ್ಥಾಪಕನ ಹೆಸರು ಭೂಮಿಯ ನೋಂದಣಿಯಲ್ಲಿ ಬರುವ ಅವಶ್ಯಕತೆ ಇಲ್ಲ. ಅರ್ಚಕರನ್ನು ದೇವತೆಯ ಸಂಪತ್ತಿನ ವ್ಯವಸ್ಥಾಪನೆ ಮಾಡಲು ನೇಮಿಸಲಾಗಿದ್ದು ಅವರು ಆ ಕೆಲಸ ಮಾಡಲು ಅಸಮರ್ಥರಾಗಿದ್ದರೆ ಅವರು ಆ ಸನ್ಮಾನವನ್ನು ಬಿಡಬಹುದು. ಅವರನ್ನು ‘ಭೂಮಿಯ ಅಧಿಪತಿ’ ಎಂದು ಸ್ವೀಕರಿಸುವ ಅವಶ್ಯಕತೆ ಇಲ್ಲ’ ಎಂದು ಹೇಳಿದೆ.