ನವ ದೆಹಲಿ – ‘ಇನ್ಫೋಸಿಸ್’ ಕಂಪನಿಯಿಂದ ಅನೇಕ ಸಾರಿ ನಕ್ಸಲವಾದಿ, ಕಮ್ಯುನಿಸ್ಟ ಮುಂತಾದವರಿಗೆ ಸಹಾಯ ಮಾಡಿರುವ ಆರೋಪ ಇದೆ; ಅದರೆ ಸಾಕ್ಷಿ ನಮ್ಮ ಹತ್ತಿರ ಇಲ್ಲ, ಎಂಬ ಒಂದು ಲೇಖನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿತ `ಪಾಂಚಜನ್ಯ’ ಈ ಸಾಪ್ತಾಹಿಕದಲ್ಲಿ ಮುದ್ರಿಸಲಾಗಿತ್ತು. ಈ ವಿಷಯವಾಗಿ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ ಅಂಬೇಕರ ಇವರು `ಈ ಲೇಖನಕ್ಕೆ ಮತ್ತು ಸಂಘಕ್ಕೆ ಸಂಬಂಧವನ್ನು ಜೋಡಿಸಬಾರದು’, ಎಂದು ಸ್ಪಷ್ಟಪಡಿಸಿದರು.
Panchjanya is not mouthpiece of the RSS and the said article or opinions expressed in it should not be linked with the RSS. @editorvskbharat
— Sunil Ambekar (@SunilAmbekarM) September 5, 2021
ಅಂಬೇಕರ ಅವರು ಮಾತನಾಡುತ್ತಾ, ‘ಒಂದು ಭಾರತೀಯ ಸಂಸ್ಥೆ ಎಂದು ‘ಇನ್ಫೋಸಿಸ್’ನಿಂದ ದೇಶದ ಪ್ರಗತಿಯಲ್ಲಿ ಮಹತ್ವಪೂರ್ಣ ಯೋಗದಾನವಿದೆ. `ಇನ್ಫೋಸಿಸ್’ ಸಿದ್ಧಪಡಿಸಿರುವ ಜಾಲತಾಣದ ವಿಷಯವಾಗಿ ಕೆಲವು ಅಂಶಗಳು ಇರಬಹುದು; ಆದರೆ `ಪಾಂಚಜನ್ಯ’ದಲ್ಲಿ ಈ ಸಂದರ್ಭದಲ್ಲಿ ಮುದ್ರಣಗೊಂಡಿರುವ ಲೇಖನದ ವಿಷಯವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ. ‘ಪಾಂಚಜನ್ಯ’ ಇದು ಸಂಘದ ಪತ್ರಿಕೆಯಲ್ಲ’. ಈ ಮೊದಲು ಸಹ ಸಂಘವು `ಪಾಂಚಜನ್ಯ’ ಇದು ನಮ್ಮ ಪತ್ರಿಕೆ’, ಅಲ್ಲ ಎಂದು ಸ್ಪಷ್ಟಪಡಿಸಿತ್ತು ಎಂದು ಹೇಳಿದ್ದಾರೆ.