ಭಾರತದಲ್ಲಿರುವ ಮುಸಲ್ಮಾನರ ಬಗ್ಗೆ ತಾಲಿಬಾನಿಗಳು ಚಿಂತಿಸುವ ಅಗತ್ಯವಿಲ್ಲ ! – ತಾಲಿಬಾನಿಗೆ ಭಾರತದ ಪ್ರತ್ಯುತ್ತರ

ಕೇಂದ್ರೀಯ ಅಲ್ಪಸಂಖ್ಯಾತ ಮಂತ್ರಿ ಮುಖ್ತಾರ ಅಬ್ಬಾಸ ನಕ್ವಿ

ನವ ದೆಹಲಿ – ಭಾರತದಲ್ಲಿರುವ ಮುಸಲ್ಮಾನರ ಬಗ್ಗೆ ತಾಲಿಬಾನ ಚಿಂತಿಸುವ ಅಗತ್ಯವಿಲ್ಲ, ಎಂಬ ಶಬ್ದಗಳಲ್ಲಿ ಕೇಂದ್ರೀಯ ಅಲ್ಪಸಂಖ್ಯಾತ ಮಂತ್ರಿ ಮುಖ್ತಾರ ಅಬ್ಬಾಸ ನಕ್ವಿಯವರು ತಾಲಿಬಾನನ್ನು ಖಂಡಿಸಿದ್ದಾರೆ. ‘ಮುಸಲ್ಮಾನರೆಂದು ಹೇಳಿ ತಾಲಿಬಾನಿಗೆ ಭಾರತದ ಕಾಶ್ಮೀರದಲ್ಲಿನ ಅಥವಾ ಬೇರೆ ಯಾವುದೇ ದೇಶದಲ್ಲಿನ ಮುಸಲ್ಮಾನರಿಗೋಸ್ಕರ ಮಾತನಾಡುವ ಅಧಿಕಾರವಿದೆ’, ಎಂದು ತಾಲಿಬಾನಿನ ವಕ್ತಾರ ಸುಹೈಲರವರು ಹೇಳಿಕೆಯನ್ನು ನೀಡಿದ್ದರು. ಅದಕ್ಕೆ ನಕವೀರವರು ಮೇಲಿನಂತೆ ಪ್ರತ್ಯುತ್ತರ ನೀಡಿದರು.

ನಕ್ವಿಯವರು ಮುಂದಿನಂತೆ ಹೇಳಿದರು,

1. ಭಾರತದಲ್ಲಿ ಮಸೀದಿಯಲ್ಲಿ ನಮಾಜ ಪಠಿಸುವ ಜನರ ಮೇಲೆ ಗೋಲಿಬಾರ್‍ಗಳಾಗುವುದಿಲ್ಲ, ಅಥವಾ ಬಾಂಬ್‍ನಿಂದ ಆಕ್ರಮಣಗಳಾಗುವುದಿಲ್ಲ. ಇಲ್ಲಿನ ಬಾಲಕಿಯರನ್ನು ಶಾಲೆಗೆ ಹೋಗದಂತೆ ತಡೆಯಲಾಗುವುದಿಲ್ಲ ಅಥವಾ ಅವರ ತಲೆ -ಕಾಲು ಕತ್ತರಿಸಲಾಗುವುದಿಲ್ಲ.

2. ಭಾರತದ ಹಾಗೂ ಅಫಘಾನಿಸ್ತಾನದಲ್ಲಿನ ಪರಿಸ್ಥಿತಿಯಲ್ಲಿ ಬಹಳ ವ್ಯತ್ಯಾಸವಿದೆ. ಅದಕ್ಕಾಗಿ ನಾವು ತಾಲಿಬಾನಿಗೆ ಕೈ ಜೋಡಿಸಿ ವಿನಂತಿಸುವುದೆಂದರೆ ಇಲ್ಲಿನ ಮುಸಲ್ಮಾನರ ಬಗ್ಗೆ ಚಿಂತೆ ಬಿಟ್ಟು ನಿಮ್ಮ ಪಾಡನ್ನು ನೀವು ನೋಡಿದರೆ ಸಾಕು.

3. ಭಾರತದಲ್ಲಿ ಎಲ್ಲರಿಗೂ ತಮ್ಮ ತಮ್ಮ ಧರ್ಮ (ಮತವನ್ನು) ಪಾಲನೆಯ ಅಧಿಕಾರವಿದೆ. ಭಾರತದಲ್ಲಿ ಮತದ ಹೆಸರಿನಲ್ಲಿ ಅರಾಜಕತೆಯನ್ನು ಪಸರಿಸುವುದಿಲ್ಲ. ಇಲ್ಲಿ ಕೇವಲ ಒಂದು ಧರ್ಮವನ್ನು ಆಚರಿಸಲಾಗುತ್ತದೆ ಹಾಗೂ ಅದೇ ಸಂವಿಧಾನ. ಸಂವಿಧಾನದದಲ್ಲಿರುವಂತೆ ದೇಶ ನಡೆಯುತ್ತದೆ ಹಾಗೂ ಸಂವಿಧಾನವು ಎಲ್ಲಾ ಮಟ್ಟದ ಎಲ್ಲಾ ಸಮಾಜದ ನಾಗರಿಕರ ವಿಕಾಸಕ್ಕೆ ಸರಿಸಮಾನವಾದ ಅವಕಾಶವನ್ನು ಒದಗಿಸಿಕೊಡುತ್ತದೆ.