ನಾಲ್ಕು ವಾರಗಳ ಒಳಗೆ ಒಟ್ಟು ಖಟ್ಲೆಗಳಲ್ಲಿ ದೊರೆತ ಯಶಸ್ಸು ಮತ್ತು ಅಪಯಶಸ್ಸಿನ ಬಗ್ಗೆ ಮಾಹಿತಿಯನ್ನು ಪ್ರಸ್ತುತ ಪಡಿಸುವಂತೆ ಆದೇಶ
* ನ್ಯಾಯಾಲಯದಿಂದ ಇದನ್ನೆಲ್ಲ ಯಾಕೆ ವಿಚಾರಿಸಬೇಕಾಗುತ್ತದೆ ? ಸಿಬಿಐ ತನ್ನ ಕಾರ್ಯಕ್ಷಮತೆಯ ಬಗ್ಗೆ ಸ್ವತಃ ಏಕೆ ಪ್ರಯತ್ನಿಸುವುದಿಲ್ಲ?- ಸಂಪಾದಕರು * ಎಷ್ಟು ಪ್ರಕರಣಗಳಲ್ಲಿ ಅನ್ವೇಷಣಾ ವಿಭಾಗವು ನಿರಪರಾಧಿಗಳನ್ನು ಬಂಧಿಸಿ ಅವರಿಗೆ ಚಿತ್ರಹಿಂಸೆ ನೀಡಿದೆ, ಎಂಬುದರ ಮಾಹಿತಿಯನ್ನು ಸಹ ಪಡೆಯಬೇಕು. ಹಾಗೆಯೇ ಈ ರೀತಿಯಲ್ಲಿ ಕಾರ್ಯ ಮಾಡುವ ಸಂಬಂಧಿತ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಎಂದು ಜನತೆಗೆ ಅನಿಸುತ್ತದೆ ! – ಸಂಪಾದಕರು |
ನವದೆಹಲಿ – ಕೇಂದ್ರೀಯ ಅನ್ವೇಷಣಾ ವಿಭಾಗ (ಸಿಬಿಐ) ಯಾವೆಲ್ಲ ಪ್ರಕರಣಗಳ ವಿಚಾರಣೆ ಮಾಡುತ್ತಿದೆಯೋ ಅವುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ನಾವು ಇಚ್ಚಿಸುತ್ತೇವೆ. ಸಿಬಿಐ ಎಷ್ಟು ಪ್ರಕರಣಗಳನ್ನು ನಡೆಸುತ್ತಿದೆ, ಕನಿಷ್ಠ ನ್ಯಾಯಾಲಯದಲ್ಲಿ ಎಷ್ಟು ಪ್ರಕರಣಗಳು ಇನ್ನೂ ಹಾಗೆಯೇ ಇವೆ, ಹಾಗೆಯೇ ಕನಿಷ್ಠ ಮತ್ತು ಉಚ್ಚ ನ್ಯಾಯಾಲಯಗಳಲ್ಲಿ ನಡೆಸಲಾದ ಪ್ರಕರಣಗಳಲ್ಲಿ ಎಷ್ಟು ಯಶಸ್ಸು ಮತ್ತು ಅಪಯಶಸ್ಸು ದೊರೆತಿದೆ ಎಂಬುದರ ಮಾಹಿತಿಯ ವರದಿ ನಮಗೆ ಬೇಕಿದೆ. ನಾವು ಸಿಬಿಐನ ಖಟ್ಲೆಗಳಲ್ಲಿ ಯಶಸ್ಸಿನ ಸರಾಸರಿ ಎಷ್ಟಿದೆ ಎಂಬುದನ್ನು ತಿಳಿಯಲು ಇಚ್ಚಿಸುತ್ತೇವೆ ಎಂದು ಸರ್ವೋಚ್ಚ ನ್ಯಾಯಾಲಯವು ಸಿಬಿಐಗೆ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವ ಆದೇಶ ನೀಡಿದೆ. ನಾಲ್ಕು ವಾರಗಳಲ್ಲಿ ಈ ಮಾಹಿತಿಯನ್ನು ಪ್ರಸ್ತುತ ಪಡಿಸಬೇಕೆಂದು ನ್ಯಾಯಾಲಯವು ಹೇಳಿದೆ. ಒಂದು ಪ್ರಕರಣದಲ್ಲಿ ಸಿಬಿಐಯು 542 ದಿನಗಳ ನಂತರ ತೀರ್ಪು ಬಂದಿರುವುದರ ವಿರುದ್ಧ ಅರ್ಜಿಯನ್ನು ದಾಖಲಿಸಿತ್ತು. ಇದರ ಆಲಿಕೆ ಮಾಡುವಾಗ ನ್ಯಾಯಾಲಯವು ಈ ಆದೇಶ ನೀಡಿದೆ.
Supreme Court to evaluate performance of CBI, seeks data on success rate https://t.co/3YdbpANNiZ pic.twitter.com/5lSNt8gyyY
— The Times Of India (@timesofindia) September 3, 2021
1. ಈ ಸಮಯದಲ್ಲಿ ಸಿಬಿಐನಿಂದ ಯುಕ್ತಿ ವಾದವನ್ನು ಮಂಡಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ರವರು, ‘ಭಾರತದಲ್ಲಿನ ಪ್ರಕರಣಗಳ ಪದ್ಧತಿ ಹೇಗಿದೆ ಎಂದರೆ ಇಲ್ಲಿ ಒಂದು ಅನ್ವೇಷಣಾ ವಿಭಾಗದ ಕಾರ್ಯಕ್ಷಮತೆಯನ್ನು ಅದರ ಯಶಸ್ಸಿನಿಂದ ಅಳೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.
2. ಇದಕ್ಕೆ ನ್ಯಾಯಾಲಯವು ‘ಜಗತ್ತಿನಾದ್ಯಂತ ಇದೇ ಪದ್ಧತಿಯಲ್ಲಿ ಒಂದು ವಿಭಾಗದ ಅವಲೋಕನ ಮಾಡಲಾಗುತ್ತಿರುವುದರಿಂದ ಈ ಪದ್ಧತಿಯನ್ನು ಭಾರತದಲ್ಲಿನ ಸಿಬಿಐಗೆ ಅನ್ವಯಿಸಬಾರದು ಎಂದು ಹೇಳಲಾಗುವುದಿಲ್ಲ. ಒಂದು ಅನ್ವೇಷಣಾ ವಿಭಾಗದ ಕೌಶಲ್ಯವು ಅದು ಎಷ್ಟು ಪ್ರಕರಣಗಳನ್ನು ಅಂತಿಮ ಸ್ಥಿತಿಗೆ ಕೊಂಡೊಯ್ದಿದೆ ಎಂಬುದರಿಂದಲೇ ಅಳೆಯಬಹುದು’ ಎಂದು ಹೇಳಿತು.
3. ನ್ಯಾಯಾಲಯವು ‘ಸಿಬಿಐ ಯ ನ್ಯಾಯಾಲಯೀನ ಹೋರಾಟ ನಡೆಸುವ ವಿಭಾಗವನ್ನು ಹೆಚ್ಚು ಸಕ್ಷಮಗೊಳಿಸಲು ಇರುವ ಮಾರ್ಗವೇನು? ‘ಎಲ್ಲಿ ಸಿಲುಕಿ ಕೊಂಡಿದ್ದೇವೆ’ ಎಂಬುದನ್ನು ತಿಳಿಯಲು ನಾವು ಇಚ್ಚಿಸುತ್ತೇವೆ. ನೀವು ಇದಕ್ಕಾಗಿ ಏನು ಪ್ರಯತ್ನ ಮಾಡಿದ್ದೀರಿ. ನಿಮಗೆ ನಿಮ್ಮ ‘ಮನೆ’ಯನ್ನು ಸುಧಾರಿಸಬೇಕಿದೆ ಎಂದು ಹೇಳಿತು.